ದಿನಕ್ಕೊಂದು ಕಥೆ 1107
*🌻ದಿನಕ್ಕೊಂದು ಕಥೆ🌻* *ಹೂವು ಕಲಿಸಿದ ಪಾಠ* ಒಬ್ಬ ಹುಡುಗನಿಗೆ ಸ್ವಲ್ಪ ದುಡುಕು ಸ್ವಭಾವ. ತನಗೆ ಯಾರಾದರೂ ತೊಂದರೆ ಕೊಟ್ಟರೆ ಅವರ ಮೇಲೆ ಸೇಡು ತೀರಿಸಿಕೊಳ್ಳದೇ ಬಿಡುವುದೇ ಇಲ್ಲ ಎಂಬ ಮನೋಭಾವದವನು. ಅವನಪ್ಪನಿಗೆ ಮಗನ ಈ ಸ್ವಭಾವ ಇಷ್ಟವಾಗುತ್ತಿರಲಿಲ್ಲ. ಮಗನಿಗೆ ತೊಂದರೆ ಆಗಿದ್ದು ನಿಜವೇ.ಅವನ ಮನಸ್ಸಿಗೆ ನೋವಾಗಿದ್ದು ನಿಜವೇ. ಹಾಗೆಂದ ಮಾತ್ರಕ್ಕೆ , ಹೋಗು ನೀನೂ ಅವರಿಗೆ ತೊಂದರೆ ಕೊಡು ಎಂದು ಹೇಳುವುದು, ಅಪ್ಪನ ಜವಾಬ್ದಾರಿಯಲ್ಲ. ಆದರೆ ಹೀಗೆ ಮಾಡಬೇಡ ಎಂದು ಮಗನಿಗೆ ಹೇಳಿದರೆ, ಅವನಿಗೆ ಇನ್ನಷ್ಟು ಕೋಪ ಜಾಸ್ತಿಯಾಗುತ್ತದೆ. ತನ್ನ ಅಪ್ಪ ಕೂಡ ತನ್ನನ್ನು ನಂಬುವುದಿಲ್ಲವೆಂದು ಅವನಿಗೆ ಬೇಸರವಾಗುತ್ತದೆ. ಆದರೆ ಪ್ರಪಂಚದಲ್ಲಿ, ನಾವು ಹೇಗೆ ಬದುಕಬೇಕು ಎಂಬುದನ್ನು ಮಗನಿಗೆ ತಿಳಿಸುವುದು ತಂದೆಯಾದವನ ಕರ್ತವ್ಯ, ಎಂದುಕೊಂಡಿದ್ದ ಆತ. ಪ್ರತಿದಿನ ಮಗನಿಗೆ, ತನಗೆ ತೊಂದರೆ ಕೊಟ್ಟವರ ಮೇಲೆ ,ಹೇಗೆ ಸೇಡುತೀರಿಸಿಕೊಳ್ಳಬೇಕೆಂಬ ಯೋಚನೆ. ಅಪ್ಪನಿಗೆ ಮಗನನ್ನು ಇದರಿಂದ ಹೇಗೆ ಹೊರ ತರುವುದು, ಎಂಬ ಯೋಚನೆ.ಅವನ ದುಡುಕು ಸ್ವಭಾವದಿಂದ ಯಾರಿಗೂ ತೊಂದರೆಯಾಗದಂತೆ ಅವನನ್ನು ತಡೆಯುವುದು ಹೇಗೆ ಎಂಬ ಚಿಂತೆ ಅಪ್ಪನದು. ಇದು ಅಪ್ಪನ ಕರ್ತವ್ಯ ಕೂಡ ಎಂದುಕೊಂಡಿದ್ದ ಆತ . ಹೀಗೆ ಅಪ್ಪ ಮಗ ಇಬ್ಬರೂ ತಮ್ಮ ತಮ್ಮ ಯೋಚನೆಯಲ್ಲಿ ಇದ್ದರು. ಒಂದು ದಿನ ದೇವರ ಪೂಜೆಗಾಗಿ ಬುಟ್ಟಿಯಲ್ಲಿ ಇಟ್ಟ ವಿವಿಧ ಬಣ್ಣ ಬಣ್ಣದ ಸುವಾಸನೆಯುಕ್ತ ಹೂಗಳು, ಮನೆಯ ತುಂಬೆಲ್