ದಿನಕ್ಕೊಂದು ಕಥೆ 1112
*🌻ದಿನಕ್ಕೊಂದು ಕಥೆ🌻* *ಆತ್ಮದ ಅರಿವು* ಒಬ್ಬ ರಾಜನಿಗೆ, ಬಾಲ್ಯದಲ್ಲಿ ಒಬ್ಬ ಮಿತ್ರನಿದ್ದ. ಅವರಿಬ್ಬರೂ ಒಟ್ಟಿಗೆ ಗುರುಕುಲದಲ್ಲಿ ಓದುತ್ತಿದ್ದರು. ಕಾಲಾಂತರದಲ್ಲಿ ಎಲ್ಲವನ್ನು ಬಿಟ್ಟು ಆ ಮಿತ್ರ ಸನ್ಯಾಸಿಯಾದ. ಯುವ ರಾಜನಾಗಿದ್ದವನು, ಸಿಂಹಾಸನವನ್ನು ಏರಿದ. ರಾಜ ,ದೂರ ದೂರದ ರಾಜ್ಯಗಳನೆಲ್ಲ ಗೆದ್ದು ,ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ಹೊಸ ರಾಜಧಾನಿಯನ್ನು ನಿರ್ಮಿಸಿದ. ಎಲ್ಲಾ ಕಡೆಗಳಲ್ಲಿ ಈ ರಾಜನ ಕೀರ್ತಿ ವೈಭವ ಹರಡಿತು. ಒಂದು ದಿನ ಈ ರಾಜನ ಹಳೆಯ ಮಿತ್ರ, ಸನ್ಯಾಸಿ ,ಇವನ ರಾಜಧಾನಿಯನ್ನು ಸಮೀಪಿಸಿದ. ರಾಜನಿಗೆ ಎಲ್ಲವನ್ನು ತೊರೆದು ಸಂನ್ಯಾಸಿಯಾದ, ತನ್ನ ಆಪ್ತ ಮಿತ್ರ ಬಂದಿದ್ದಾನೆಂದುತಿಳಿದು, ಅವನನ್ನು ನೋಡಬೇಕೆಂದೆನಿಸಿತು. ಆತ ಸಿಗುವುದೇ ಬಹಳ ಅಪರೂಪ, ನಾನು ಆತನನ್ನು ಸ್ವಾಗತಿಸಿ ಸನ್ಮಾನಿಸಬೇಕೆಂದುಕೊಂಡು ,ತನ್ನ ಇಡೀ ನಗರವನ್ನು ಅಲಂಕರಿಸಿ ಸಜ್ಜುಗೊಳಿಸಿದ. ಯಾವ ಸಂಜೆ ಆತನ ಮಿತ್ರ ನಗರವನ್ನು ಪ್ರವೇಶಿಸಬೇಕಾಗಿತ್ತೊ, ಅಂದು ಇಡೀ ನಗರವೂ ದೀಪಾವಳಿಯನ್ನು ಆಚರಿಸುತ್ತಿತ್ತು.ಎಲ್ಲಾ ಮನೆ ಮನೆಗಳಲ್ಲಿ ದೀಪಬೆಳಗಿಸಿದ್ದರು.ಸನ್ಯಾಸಿ ನಗರವನ್ನು ಪ್ರವೇಶಿಸುವ ದ್ವಾರದಲ್ಲಿ ರತ್ನಗಂಬಳಿಯನ್ನು ಹಾಸಲಾಗಿತ್ತು. ಸ್ವತಃ ಮಹಾರಾಜನೇ ದ್ವಾರದ ಬಳಿಗೆ ಬಂದು ನಿಂತು ಆತನನ್ನು ಎದುರುಗೊಳ್ಳಲು ಸಿದ್ದನಾಗಿದ್ದ. ಈ ಎಲ್ಲಾ ಸ್ವಾಗತದ ಸಿದ್ಧತೆ ನಡೆಯುತ್ತಿರುವಾಗಲೇ, ಒಬ್ಬ ಮನುಷ್ಯ, ಸನ್ಯಾಸಿಯ ಬಳಿಗೆ ಬಂದು, ರ