ದಿನಕ್ಕೊಂದು ಕಥೆ 301
*🌻ದಿನಕ್ಕೊಂದು ಕಥೆ🌻* ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯು ತನ್ನ ಹೃದಯದ ಭಾವನೆಗಳನ್ನು ಇನ್ನೊಬ್ಬ ವ್ಯಕ್ತಿಗೆ ತಲುಪಿಸಲು ಭಾಷೆಯನ್ನು ಬಳಸುತ್ತಾನೆ. ಒಂದೊಂದು ದೇಶದಲ್ಲಿ ಜನರು ಒಂದೊಂದು ಭಾಷೆಯನ್ನು ಬಳಸುತ್ತಾರೆ. ಕೆಲವು ಜನರು ತಮ್ಮ ದೇಶದ ಭಾಷೆಯನ್ನು ಮಾತ್ರ ಭಾಷೆ ಎನ್ನುತ್ತಾರೆ. ಕೆಲವು ಜನರು ತಮ್ಮ ಮಾತೃ ಭಾಷೆಯನ್ನಲ್ಲದೆ ನೆರೆಯ ಪ್ರಾಂತ್ಯದ ಹಾಗೂ ನೆರೆಯ ರಾಜ್ಯ ಮತ್ತು ರಾಷ್ಟ್ರಗಳ ಭಾಷೆಗಳನ್ನು ಕುರಿತು ಬಹುಭಾಷಾ ವಿದ್ವಾಂಸರು ಎನಿಸುತ್ತಾರೆ. ಇಂತಹ ವಿದ್ವಾಂಸರ ಮಾತೃ ಭಾಷೆಯನ್ನು ಗುರುತಿಸುವ ಬಗ್ಗೆ ಸ್ವಾರಸ್ಯಕರ ಪ್ರಸಂಗವೊಂದು ಹೀಗಿದೆ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ಗೋಪಾಲ ಭಾಂಡರೆಂಬ ಸುಪ್ರಸಿದ್ಧ ವಿದ್ವಾಂಸರ ಪ್ರಸಂಗಗಳು ಬಹು ಪ್ರಚಲಿತವಾಗಿವೆ. ಅವರು ತಮ್ಮ ಬುದ್ಧಿವಂತಿಕೆಯ ಬಲದಿಂದ ಅಲ್ಲಿಯ ರಾಜನಾದ ಕೃಷ್ಣಚಂದ್ರನ ಆಸ್ಥಾನದ ನವರತ್ನಗಳಲ್ಲಿ ಒಬ್ಬರೆಂದು ಮನ್ನಣೆ ಗಳಿಸಿದ್ದರಲ್ಲದೆ ರಾಜನಿಗೆ ಇಲ್ಲವೇ ಪ್ರಜೆಗಳಿಗೆ ಯಾವುದೇ ಸಮಸ್ಯೆ ಎದುರಾದಾಗ ಬಹು ಜಾಣ್ಮೆಯಿಂದ ನಿವಾರಿಸುತ್ತಿದ್ದರು. ಒಮ್ಮೆ ರಾಜಾ ಕೃಷ್ಣಚಂದ್ರನ ಆಸ್ಥಾನಕ್ಕೆ ಬಹು ಭಾಷಾಕೋವಿದರಾದ ವಿದ್ವಾಂಸರೊಬ್ಬರ ಆಗಮನವಾಯಿತು. ಅನೇಕ ಭಾಷೆಗಳನ್ನು ಧಾರಾಕಾರವಾಗಿ ಬಳಸುತ್ತಿದ್ದ ಆ ಘನ ವಿದ್ವಾಂಸರ ಮಾತೃ ಭಾಷೆ ಯಾವುದೆಂದು ಯಾರಿಗೂ ತಿಳಿಸಿರಲಿಲ್ಲ. ಆ ಮಾತೃ ಭಾಷೆಯನ್ನು ಕಂ