ದಿನಕ್ಕೊಂದು ಕಥೆ. 372
*🌻ದಿನಕ್ಕೊಂದು ಕಥೆ🌻 ಸಾಲಗಾರರು! ಸಾರ್, ನಾವೆಲ್ಲಾ ಸಾಲಗಾರರು!* ನಾವು ಒಪ್ಪಿಕೊಳ್ಳಬಹುದು ಅಥವಾ ಒಪ್ಪಿಕೊಳ್ಳದಿರಬಹುದು. ಆದರೆ ನಾವೆಲ್ಲಾ ಸಾಲಗಾರರೇ! ಸಾಲ ಎಂದರೆ ಹಣದ ಸಾಲವೇ ಇರಬೇಕೆಂದಿಲ್ಲ ಅಲ್ಲವೇ? ನಾವು ಯಾರಿಂದಲಾದರೂ, ಏನಾದರೂ ಸಹಾಯ ಪಡೆದಿದ್ದರೆ, ಅದೂ ಒಂದು ಬಗೆಯ ಸಾಲವೇ ಅಲ್ಲವೇ? ಅಂಥ ಸಾಲವನ್ನೂ ನಾವು ತೀರಿಸಲೇ ಬೇಕಲ್ಲವೇ? ಆಗಿಂದಾಗಲೇ ಅಲ್ಲದಿದ್ದರೂ, ಒಂದಲ್ಲಾ ಒಂದು ದಿನ ಆ ಸಾಲವನ್ನು ತೀರಿಸಬೇಕು! ಹೀಗೆ ಎಂದೋ ಪಡೆದಿದ್ದ ಸಹಾಯದ ಸಾಲವನ್ನು ಮುಂದೆಂದೋ ಒಂದು ದಿನ ತೀರಿಸಿ ಋಣಮುಕ್ತರಾದವರ ಕುತೂಹಲಕಾರಿ ಪ್ರಸಂಗವೊಂದು ಇಲ್ಲಿದೆ. ಒಮ್ಮೆ ವಿದೇಶವೊಂದರಲ್ಲಿ ರಕ್ತಕ್ರಾಾಂತಿಯಾಯಿತಂತೆ. ಸಾವಿರಾರು ಜನ ಪ್ರಾಣ ಕಳೆದುಕೊಂಡರು. ಹತ್ತಾರು ಸಾವಿರ ಜನ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾದರು. ಪ್ರಾಣ ಉಳಿದರೆ ಸಾಕೆಂದುಕೊಂಡವರು ಸ್ವದೇಶ ತೊರೆದು ಪರದೇಶಗಳಿಗೆ ಹೋಗಿ ಬದುಕುವ ದಾರಿಗಳನ್ನು ಹುಡುಕತೊಡಗಿದರು. ಅಂಥ ನಿರಾಶ್ರಿತರಲ್ಲಿ ಒಬ್ಬರು ಪರದೇಶದಲ್ಲಿ ಹೋಟೆಲೊಂದರ ಮ್ಯಾನೇಜರ್‌ರನ್ನು ಭೇಟಿಯಾಗಿ ತಮ್ಮ ದುಸ್ಥಿತಿ ವಿವರಿಸಿ ‘ಕಸ ಗುಡಿಸುವುದೋ, ಪಾತ್ರೆ ತೊಳೆಯುವುದೋ, ಯಾವ ಕೆಲಸವಾದರೂ ಚಿಂತೆಯಿಲ್ಲ. ಕೆಲಸ ಕೊಡಿ! ಉಪವಾಸವಿರುವ ಮಡದಿ-ಮಕ್ಕಳಿಗೆ ಎರಡು ತುತ್ತು ಊಟ ಸಿಕ್ಕರೆ ಸಾಕು’ಎಂದು ಕೇಳಿಕೊಂಡರು. ಮ್ಯಾನೇಜರು ಆತನನ್ನು ದಿಟ್ಟಿಸಿ ನೋಡಿ ‘ನಿಮ್ಮನ್ನು ಎಲ್ಲೋ ನೋಡಿದ