ದಿನಕ್ಕೊಂದು ಕಥೆ. 403
*🌻ದಿನಕ್ಕೊಂದು ಕಥೆ🌻 ಮನೆ ಚಿಕ್ಕದು! ಮನಸ್ಸು ದೊಡ್ಡದು!* ಮನೆಗೂ ಮನಸ್ಸಿಗೂ ವಿಚಿತ್ರವಾದ, ಇದು ಹೀಗೆಯೇ ಎಂದು ಹೇಳಲಾಗದ ಸಂಬಂಧವಿದೆಯಂತೆ! ದೊಡ್ಡ ಮನೆಯಲ್ಲಿರುವವರ ಮನಸ್ಸು ದೊಡ್ಡದಿಲ್ಲದಿರಬಹುದು. ಚಿಕ್ಕ ಮನೆಯಲ್ಲಿರುವವರ ಮನಸ್ಸು ಚಿಕ್ಕದಾಗಿರದೆ ದೊಡ್ಡದಾಗಿ ಇರಬಹುದು. ಅದನ್ನು ನಿರೂಪಿಸುವ ಪುಟ್ಟ ಕತೆಯೊಂದು ಇಲ್ಲಿದೆ. ಒಂದು ದಟ್ಟಡವಿ. ಅಲ್ಲೊಂದು ಪುಟ್ಟ ಗುಡಿಸಲು. ಗುಡಿಸಲಿನಲ್ಲಿದ್ದವರು ಒಬ್ಬ ಬಡ ಸೌದೆಗಾರರು ಮತ್ತವರ ಹೆಂಡತಿ. ಸೌದೆಗಾರ ಪ್ರತಿದಿನ ಅಡವಿಯಲ್ಲಿ ಸೌದೆ ಕಡಿಯುತ್ತಿದ್ದರು. ಅದನ್ನು ತಮ್ಮ ಸೊಣಕಲು ಕತ್ತೆಯ ಮೇಲೆ ಹೇರಿಕೊಂಡು ನಗರಕ್ಕೆ ಹೋಗಿ, ಸೌದೆ ಮಾರುತ್ತಿದ್ದರು. ಬಂದ ಹಣದಲ್ಲಿ ಗಂಡ-ಹೆಂಡತಿಗೆ ಎರಡು ಹೊತ್ತು ಊಟಕ್ಕಾಗುವಷ್ಟು ಹಿಟ್ಟು-ಸೊಪ್ಪು ತರುತ್ತಿದ್ದರು. ಹೀಗೆಯೇ ಅವರ ಬದುಕು ಸಾಗುತ್ತಿತ್ತು. ಒಂದು ಮಳೆಗಾಲದ ರಾತ್ರಿ. ಧಾರಾಕಾರ ಮಳೆ ಸುರಿಯುತ್ತಿತ್ತು. ಗಂಡ ಹೆಂಡತಿ ಇಬ್ಬರೂ ಗುಡಿಸಲಿನಲ್ಲಿ ಮಲಗಿದ್ದರು. ಮಧ್ಯರಾತ್ರಿ ಗುಡಿಸಲಿನ ಬಾಗಿಲನ್ನು ಯಾರೋ ಬಡಿದು ‘ಮಳೆಯಲ್ಲಿ ನೆನೆಯುತ್ತಿದ್ದೇನೆ. ಕಷ್ಟವಾಗುತ್ತಿದೆ. ಈ ರಾತ್ರಿ ನಿಮ್ಮ ಗುಡಿಸಲಿನಲ್ಲಿ ಕಳೆಯಬಹುದೇ?’ಎಂದು ಗೋಗರೆದರು. ಸೌದೆಗಾರ ಬಾಗಿಲು ತೆಗೆಯಲು ಎದ್ದು ನಿಂತಾಗ, ಹೆಂಡತಿ ‘ನಮ್ಮದು ಪುಟ್ಟ ಗುಡಿಸಲು ನಮ್ಮಿಬ್ಬರಿಗೆ ಮಲಗುವಷ್ಟು ಮಾತ್ರ ಸ್ಥಳವಕಾಶವಿದೆ. ಮತ್ತೊಬ್ಬರು ಬಂದರೆ ನಾವ