ದಿನಕ್ಕೊಂದು ಕಥೆ. 436
*🌻ದಿನಕ್ಕೊಂದು ಕಥೆ🌻 ಮಾತೃ ದಿವಸ - ತಂದೆಯೂ ಅಮ್ಮನ ಪಾತ್ರವನ್ನು ವಹಿಸಬಲ್ಲನೇ? - ಒಂದು ಹೃದಯಸ್ಪರ್ಶಿ ಪ್ರಸಂಗ* ಅಂತರ ರಾಷ್ಟ್ರೀಯ ಶಾಲೆಯೊಂದರಲ್ಲಿ ಅದರ ತೋಟದ ಮಾಲಿ - ಗಂಗಾದಾಸನು ಬಿಸಿಲಿನ ಝಳವನ್ನು ಲೆಕ್ಕಿಸದೇ ಗಿಡಗಳನ್ನು ಒಪ್ಪ ಮಾಡುತ್ತಿದ್ದನು. "ಗಂಗಾದಾಸ್, ತಕ್ಷಣವೇ ನಿನ್ನನ್ನು ಪ್ರಿನ್ಸಿಪಾಲ್ ಮೇಡಂ ಬರಲು ತಿಳಿಸಿದ್ದಾರೆ", ಎಂಬ ಜೋರಿನ ಧ್ವನಿಯನ್ನು ಕೇಳಿ ಗಂಗಾದಾಸ್ ಕಂಗಾಲಾದ. ಕೂಡಲೇ ಎದ್ದು ತನ್ನ ಕೈಗಳನ್ನು ತೊಳೆದುಕೊಂಡು ಪ್ರಾಂಶುಪಾಲರ ಕೊಠಡಿಯ ಕಡೆಗೆ ಅವರು ತನ್ನನ್ನು ಏತಕ್ಕೆ ಕರೆದಿರಬಹುದು, ತಾನು ಏನು ತಪ್ಪನ್ನು ಮಾಡಿರಬಹುದು ಎಂದು ಏರುತ್ತಿರುವ ಹೃದಯ ಬಡಿತವನ್ನೂ ಲೆಕ್ಕಿಸದೇ ಧಾವಿಸಿದನು. "ಮೇಡಂ, ನೀವು ನನ್ನನ್ನು ಕರೆದಿರಂತೆ?" "ಒಳಗೆ ಬಾ" ಎಂಬ ಅಧಿಕಾರಯುತ ಹಾಗೂ ಕರ್ಕಶ ಧ್ವನಿಯು ಗಂಗಾದಾಸನನ್ನು ಮತ್ತಷ್ಟು ಅಸ್ಥಿರನನ್ನಾಗಿ ಮಾಡಿತು. ಪ್ರಾಂಶುಪಾಲರು ಮೇಜಿನ ಮೇಲೆ ಇದ್ದ ಒಂದು ಕಾಗದದೆಡೆಗೆ ಕೈ ತೋರಿಸುತ್ತಾ, "ಅದರಲ್ಲಿರುವುದನ್ನು ಓದು" ಎಂದರು. "ಮೇಡಂ, ನಾನು ಅನಕ್ಷರಸ್ತ, ನನಗೆ ಇಂಗ್ಲಿಷ್ ಓದಲು ಬರುವುದಿಲ್ಲ. ಮೇಡಂ, ನಾನೇನಾದರೂ ತಪ್ಪು ಮಾಡಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ, ಮುಂದೆ ನಾನು ತಪ್ಪು ಮಾಡುವುದಿಲ್ಲ, ನನಗೆ ಮತ್ತೊಂದು ಅವಕಾಶವನ್ನು ನೀಡಿ..... ನನ್ನ ಮಗಳು ಈ ಶಾಲೆಯಲ್ಲಿ