ದಿನಕ್ಕೊಂದು ಕಥೆ. 467
*🌻ದಿನಕ್ಕೊಂದು ಕಥೆ🌻 ದೇವರನ್ನು ನಂಬುವವರನ್ನು ನಾವೂ ನಂಬಬಹುದು !* ಆಸಕ್ತಿಕರವಾದ ಘಟನೆಯೊಂದು ಇಲ್ಲಿದೆ. ನಮ್ಮ ನಂಬಿಕೆಗಳು ಏನೇ ಇರಲಿ. ಆದರೆ ಇಲ್ಲಿರುವುದು ದೇವರನ್ನು ನಂಬುವವರ ಮತ್ತು ನಂಬದವರ ನಡುವೆ ನಡೆಯಿತೆನ್ನಲಾದ ಪುಟ್ಟ ಘಟನೆ. ಫ್ರಾನ್ಸ್ ಪಾರ್ಲಿಮೆಂಟಿನ ಹಿರಿಯ ಸದಸ್ಯರೊಬ್ಬರು ಪ್ರವಾಸದಲ್ಲಿದ್ದರು. ರಾತ್ರಿಯಾಗಿತ್ತು. ಯಾವುದೋ ಒಂದು ಸಣ್ಣ ನಗರ ಸಿಕ್ಕಿತು. ಅಲ್ಲೊಂದು ಪುಟ್ಟ ಹೋಟೆಲ್ ಕಂಡಿತು. ರಾತ್ರಿ ತಂಗಿದ್ದು ಮರುದಿನ ಪ್ರಯಾಣ ಮುಂದುವರಿಸಿದರಾಯಿತು ಎಂದುಕೊಂಡು ಹಿರಿಯರು ಹೋಟೆಲ್ ಪ್ರವೇಶಿಸಿದರು. ಆ ನಡುರಾತ್ರಿಯಲ್ಲಿ ಹೋಟೆಲ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕಿರಿಯ ಗುಮಾಸ್ತರು ಈ ಹಿರಿಯರನ್ನು ಸ್ವಾಗತಿಸಿದರು. ಅವರಿಗೆ ಕೊಠಡಿಯನ್ನೂ ಕೊಟ್ಟರು. ಕೊಠಡಿಯ ಬಾಡಿಗೆಯನ್ನು ಮುಂಗಡವಾಗಿಯೇ ಪಾವತಿ ಸುವುದು ಅಲ್ಲಿನ ಪದ್ಧತಿ. ಹಿರಿಯರು ಕೊಠಡಿಯ ಬಾಡಿಗೆ ಎಷ್ಟೆಂದು ಕೇಳಿದರು. ಗುಮಾಸ್ತರು ಹೇಳಿದಷ್ಟು ಬಾಡಿಗೆಯನ್ನು ತಕ್ಷಣ ಪಾವತಿಸಿದರು. ಗುಮಾಸ್ತರು ಬಾಡಿಗೆ ಸ್ವೀಕರಿಸುವಾಗ ‘ಈ ಹಣಕ್ಕೆ ನಾಳೆ ಬೆಳಗ್ಗೆ ರಸೀತಿ ಕೊಡುತ್ತೇನೆ. ಏಕೆಂದರೆ ನಗದು ಸ್ವೀಕರಿಸಿ ರಸೀತಿ ಕೊಡುವ ಗುಮಾಸ್ತೆ ಈಗ ಇಲ್ಲಿಲ್ಲ. ಬೆಳಗ್ಗೆ ಬರುತ್ತಾರೆ. ಆಗ ರಸೀತಿ ಕೊಡಿಸಿಕೊಡುತ್ತೇನೆ. ಈಗ ಬೇಕಿದ್ದರೆ ಒಂದು ಕಾಗದದಲ್ಲಿ ಹಣ ಸಂದಾಯವಾಗಿದೆಯೆಂದು ಬರೆದು ನಾನೇ ಸಹಿ ಮಾಡಿಕೊಡುತ್ತೇನೆ. ಆಗಬಹುದೇ?’ಎಂದು ಕ