ದಿನಕ್ಕೊಂದು ಕಥೆ. 561
*🌻ದಿನಕ್ಕೊಂದು ಕಥೆ🌻 ಭಾವನೆಗಳ ತುಡಿತ ಮಿಡಿತಗಳಿಗೆ ಕಿವಿಗೊಡದಿದ್ದರೆ ?* ಭಾವವೆಂಬ ಹಕ್ಕಿ ಗರಿಗೆದರಿದರೆ ಗುಡಿಸಲು ಮಹಲಾಗುವುದು. ಭಾವ ಹೀನರಾದರೆ ಮಹಲೂ ಗುಡಿಸಲಾಗುವುದು. ಹುಟ್ಟೋದು ಒಂದು ದಿನ ಸಾಯೋದು ಒಂದು ದಿನ. ನಡುವಿರುವುದೇ ಮೂರು ದಿನದ ಜೀವನ ಅನ್ನೋದು ಜೀವನದ ಸಾಮಾನ್ಯ ನುಡಿ. ಈ ಮೂರು ದಿನದ ಜೀವನ ಹೇಗೆ ಕಳೆಯುತ್ತೇವೆ? ಏನೆಲ್ಲ ಕಳೆದುಕೊಂಡು ಏನು ಪಡೆದುಕೊಳ್ಳುತ್ತೇವೆ. ಪಡೆದು ಕೊಂಡ ದ್ದನ್ನು ಅದೆಷ್ಟು ಪ್ರಮಾಣದಲ್ಲಿ ಅನುಭವಿಸುತ್ತೇವೆ? ಜೀವನದ ಪಯಣದಲ್ಲಿ ಸಹ ಪಯಣಿಗರಿಗೆ ಎಷ್ಟು ಪ್ರೀತಿ ಅನುಕಂಪ ಖುಷಿ ನೀಡುತ್ತೇವೆ? ಪರರ ಕಷ್ಟಕ್ಕೆ ಮಂಜಿನಂತೆ ಕರಗಿ ನೆರವಿಗೆ ಧಾವಿಸುತ್ತೇವೆ ಇವೆಲ್ಲ ನಮ್ಮ ಬದುಕಿನ ಸಾರ್ಥಕತೆಯನ್ನು ಸಾರಿ ಹೇಳುತ್ತವೆ. ಹುಟ್ಟು ಸಾವು ಎರಡು ಸೇತುವೆಗಳ ನಡುವೆ ಇರುವ ಕಾಲವೇ ಬದುಕು. ದೈವ ಸೃಷ್ಟಿಯ ಎಲ್ಲ ಜೀವ ಸಂಕುಲಗಳು ಬದುಕುತ್ತವೆ ಆದರೆ ಸರ್ವಶ್ರೇಷ್ಠ ಪ್ರಾಣಿಗಳಾದ ನಾವು ಬರೀ ಬದುಕಬಾರದು ಜೀವಿಸಬೇಕು. ಹಾಗಾದಾಗಲೇ ಬದುಕಿಗೊಂದು ನಿಜವಾದ ಅರ್ಥ. ಜೀವಿಸಬೇಕೆಂದರೆ ಭಾವಗಳ ನದಿಯಲ್ಲಿ ಈಸಬೇಕು. ಬಾಳಿಗೂ ಭಾವಕೂ ಅವಿನಾಭಾವ ಸಂಬಂಧವಿದೆ ಅದಕ್ಕೆಂತಲೇ ಕವಿಯೊಬ್ಬ ಬಾಳೊಂದು ಭಾವಗೀತೆ ಆನಂದ ತುಂಬಿದ ಕವಿತೆ ಎಂದು ಹಾಡಿ ಹೊಗಳಿ ಬಾಳಿನಲ್ಲಿ ಭಾನೆಗಳ ಮಹತ್ವ ಸಾರಿ ಹೇಳಿದ್ದಾನೆ. ಮೈಕೆಲ್ ಡಾಗ್ಲಸ್‌ನ ಹೆಸರು ಕೇಳದೇ ಇರುವವರು ತುಂಬಾ ಕಮ್ಮಿ. ಆತ ಪ್ರಸಿದ್ಧ ನಟ ಮತ್ತು ನಿರ್ದೇಶಕ. ಆತನ