ದಿನಕ್ಕೊಂದು ಕಥೆ 815
*🌻ದಿನಕ್ಕೊಂದು ಕಥೆ🌻 ಬದಲಾವಣೆ ಒಪ್ಪಿಕೊಳ್ಳೋಣ* ಒಬ್ಬ ಯುವರಾಜ ಕಾಡಿಗೆ ಬೇಟೆಯಾಡಲು ಹೋದ. ಹುಲಿಯೊಂದನ್ನು ಬೆನ್ನಟ್ಟಿ ಬಹುದೂರ ಕಾಡಿನೊಳಗೆ ಸಾಗಿದ. ಹುಲಿ ಅವನ ಕೈಗೆ ಸಿಗದೆ ಮರೆಯಾಗಿ ಹೋಯಿತು. ಬಾಯಾರಿಕೆ, ದಣಿವಿನಿಂದ ಬಳಲಿದ ಅವನು ವಿಶ್ರಾಂತಿ ಬಯಸಿ ಮುಂದುವರಿದು ಹೋದಾಗ ಅಲ್ಲೊಂದು ಋಷಿಯ ಕುಟೀರ ಕಾಣಿಸಿತು. ಕುಟೀರದ ಸಮೀಪಕ್ಕೆ ಹೋದಾಗ ಅಲ್ಲಿದ್ದ ಋಷಿಯ ಪುತ್ರಿ ತನ್ನ ರಾಜ್ಯದ ಯುವರಾಜ ಬಂದಿದ್ದನ್ನು ಕಂಡು ಸಂತಸದಿಂದ ಸ್ವಾಗತಿಸಿದಳು. ರಾಜ ಅವಳ ಅಪ್ರತಿಮ ಸೌಂದರ್ಯ ಕಂಡು ಅವಳನ್ನು ಮದುವೆಯಾಗಲು ಬಯಸಿದ. ಋಷಿಯನ್ನು ಕುರಿತು ‘ಪೂಜ್ಯರೆ, ನೀವು ಸಂತೋಷದಿಂದ ಒಪ್ಪುವುದಾದರೆ ನಿಮ್ಮ ಮಗಳನ್ನು ಮದುವೆಯಾಗಲು ಬಯಸಿರುವೆ’ ಎಂದ. ‘ನನ್ನ ಮಗಳನ್ನು ಒಂದು ಮಾತು ಕೇಳಿ’ ಎಂದರು ಋಷಿಗಳು. ಯುವರಾಜ ಋಷಿಪುತ್ರಿಯನ್ನು ಉದ್ದೇಶಿಸಿ, ‘ನಾನು ನಿನ್ನನ್ನು ತುಂಬ ಪ್ರೀತಿಸುತ್ತೇನೆ, ಜೀವನದ ಕೊನೆಯವರೆಗೂ ಗೌರವ, ಕಾಳಜಿಯಿಂದ ನೋಡಿಕೊಳ್ಳುತ್ತೇನೆ. ನನ್ನನ್ನು ಮದುವೆಯಾಗಲು ಒಪ್ಪಿಗೆ ಇದೆಯೇ?’ ಎಂದ. ಅವಳು- ‘ಸರಿ, ನನಗೆ 1 ತಿಂಗಳ ಕಾಲಾವಕಾಶ ಕೊಡಿ, ಬಳಿಕ ನಿಮ್ಮನ್ನು ಮದುವೆಯಾಗಲು ಸಿದ್ಧ’ ಎಂದಳು. ಯುವರಾಜ ಅದಕ್ಕೆ ಒಪ್ಪಿಗೆ ಸೂಚಿಸಿ, ಋಷಿಗಳಿಗೆ ಮತ್ತೊಮ್ಮೆ ವಂದಿಸಿ ರಾಜಧಾನಿಗೆ ಮರಳಿದ. ಋಷಿಪುತ್ರಿ ಅಂದಿನಿಂದಲೇ ಉಪವಾಸ ಪ್ರಾರಂಭಿಸಿದಳು. ಅವಳ ಆರೋಗ್ಯ ದಿನದಿನಕ್ಕೆ ಕ್ಷೀಣಿಸತೊಡಗಿತು. ತಿಂಗಳು ಸಮೀಪಿಸಿದ