ದಿನಕ್ಕೊಂದು ಕಥೆ 1123
*🌻ದಿನಕ್ಕೊಂದು ಕಥೆ🌻* *ನಮ್ಮದೇನಿದೆ*? ಒಬ್ಬ *ವ್ಯಕ್ತಿ* ಸಾಯುತ್ತಾನೆ ದೇಹದಿಂದ *ಆತ್ಮ* ಹೊರಬರುತ್ತದೆ ಸುತ್ತಲೂ ನೋಡಿದರೆ *ದೇವರು* ತನ್ನ ಕೈಯಲ್ಲಿ ಒಂದು ಪೆಟ್ಟಿಗೆಯೊಡನೆ ಬಂದು ನಿಂತಿರುತ್ತಾನೆ. ಸತ್ತಿರುವ *ವ್ಯಕ್ತಿ* ಮತ್ತು *ದೇವರ* ನಡುವೆ ಸಂಭಾಷಣೆ ಹೀಗೆ ಸಾಗುತ್ತದೆ. *ದೇವರು*- ಮಾನವ,ಇನ್ನು ಈ ಜನ್ಮ ಮುಗಿಯಿತು ನಡೆ ಹೋಗೋಣ *ಮಾನವ*- ಅಯ್ಯೋ ಇಷ್ಟು ಬೇಗನೇ,, ನಾನು ಭವಿಷ್ಯದ ಬಗೆಗೆ ಎಷ್ಟೊ ಕನಸನ್ನು ಕಂಡಿದ್ದೆ. *ದೇವರು*- ತಪ್ಪದು, ನೀನು ನನ್ನೊಡನೆ ಬರಲೇಬೇಕು ನಿನ್ನ ಸಮಯ ಮುಗಿದಿದೆ. *ಮಾನವ*- ಸರಿ ಆ ಪೆಟ್ಟಿಗೆ ಕೊಡಿ ಏನು ತಂದಿರುವೆ ನೋಡುವೆ. *ದೇವರು*- ಅದರಲ್ಲಿ ನಿನಗೆ ಸಂಬಂದಿಸಿದ ವಸ್ತುಗಳೇ ಇರುವುದು. *ಮಾನವ*- ನನ್ನವಾ, ಅಂದರೆ ನನ್ನ *ಬಟ್ಟೆಗಳು, ದುಡ್ಡು ಕಾಸು, ಆಸ್ತಿ, ಭೂಮಿ ಪತ್ರಗಳು.* *ದೇವರು*- ಅವು ಯಾವಾಗಲೂ ನಿನ್ನವಲ್ಲ ಅವೆಲ್ಲ *ಭೂಮಿ* ಯವೇ ಅಲ್ಲಿಯೇ ಇರುತ್ತವೆ. *ಮಾನವ*- ನನ್ನ ಜ್ಞಾಪಕಗಳಾ? *ದೇವರು*- ಅಲ್ಲ ಜ್ಞಾಪಕಗಳು ಕಾಲಕ್ಕೆ ಸಂಬಂಧಿಸಿದುವು *ಕಾಲಗರ್ಭದಲ್ಲೇ* ಸೇರಿ ಹೋಗುತ್ತವೆ. *ಮಾನವ* - ನನ್ನ ಸ್ನೇಹಿತರಾ? *ದೇವರು*- ಅವರು ನಿನ್ನ ಜೊತೆ ಕೇವಲ ಸ್ವಲ್ಪ ದೂರ ಬರುವ *ಪ್ರಯಾಣಿಕರಷ್ಟೇ* . *ಮಾನವ*- ನನ್ನ ಹೆಂಡತಿ ಮಕ್ಕಳಾ? *ದೇವರು*- ಅವರುಗಳು ನಿನ್ನ ಜೊತೆ ಕಲೆತು *ನಾಟಕದಲ್ಲಿ* ಪಾಲ್ಗೊಂಡ *ಪಾತ್ರಧಾರಿಗಳು* ಮಾತ್ರ. *ಮಾನವ*- ಹಾಗಾದರೆ ಅದರಲ್ಲಿ ನನ್ನ *ಶರೀರವಿರಬಹುದಲ್ಲವೇ*? *ದೇವ