ದಿನಕ್ಕೊಂದು ಕಥೆ. 196
💐💐 ದಿನಕ್ಕೊಂದು ಕಥೆ💐💐 😌ಮುಚ್ಚಿಟ್ಟ ತಪ್ಪು😌 ಕಿಟ್ಟಣ್ಣ ಮತ್ತು ಅವನ ತಂಗಿ ಪುಟ್ಟಕ್ಕ ಇಬ್ಬರೂ ರಜೆಗೆಂದು ಅಜ್ಜಿಯ ಮನೆಗೆ ಹೋಗಿದ್ದರು. ಅಜ್ಜಿಯ ಮನೆ ಇದ್ದದ್ದು ಒಂದು. ಹಳ್ಳಿಯಲ್ಲಿ. ಆ ಮನೆಯೊ ಭಾರಿ ಮನೆ. ಅಜ್ಜಿಗೆ ಮೊಮ್ಮಕ್ಕಳೂ ಬಂದದ್ದು ಬಹಳ ಸಂತೋಷ. ಶಾಲೆಯ ರಜೆ ಮುಗಿಯುವವರೆಗೆ ಮಕ್ಕಳು ಅಲ್ಲಿಯೇ ಇರುತ್ತಾರೆ. ಮಕ್ಕಳಿಗೂ ಪಟ್ಟಣದ ಬಿಗಿ ವಾತಾವರಣದಿಂದ ಬಿಡುಗಡೆ ದೊರೆತು ಹಳ್ಳಿಯ ಶುದ್ಧ ಪರಿಸರ ದೊರೆಯುತ್ತದೆ. ಮಕ್ಕಳು ಅಜ್ಜಿ ಮಾಡಿದ ರುಚಿ ರುಚಿ ಅಡುಗೆ ಊಟಮಾಡುತ್ತ, ಮನಬಂದಾಗ, ಮನಬಂದಲ್ಲಿ ತಿರುಗಾಡುತ್ತ, ಶಾಲೆಯ, ಮನೆಗೆಲಸದ ಯಾವ ಒತ್ತಡವೂ ಇಲ್ಲದೇ ಹಾಯಾಗಿದ್ದರು. ಒಂದು ದಿನ ಪಕ್ಕದ ಮನೆಯ ಹುಡುಗ ಮಂಜ ಕಿಟ್ಟಣ್ಣನಿಗೊಂದು ಬಿದಿರಿನ ಬಿಲ್ಲು ಮತ್ತಷ್ಟು ಬಾಣಗಳನ್ನು ಮಾಡಿಕೊಟ್ಟ. ಅದು ದಪ್ಪವಾದ, ಮಜಬೂತಾದ ಬಿಲ್ಲು. ಬಿದಿರಿನ ಬಾಣಗಳೂ ಅಷ್ಟೇ. ಅವುಗಳನ್ನು ಕಲ್ಲಿಗೆ ಉಜ್ಜಿ ಉಜ್ಜಿ ತುದಿಗಳನ್ನು ಚೂಪಾಗಿ ಮಾಡಿದ್ದ. ಅವುಗಳನ್ನು ಸರಿಯಾಗಿ ಬಳಸಬೇಕೆಂದು ಎಚ್ಚರಿಕೆಯನ್ನೂ ಕೊಟ್ಟಿದ್ದ. ಅವು ಯಾರಿಗಾದರೂ ತಗುಲಿದರೆ ಅಪಾಯ ಕಟ್ಟಿಟ್ಟಿದ್ದು ಎಂದೂ ಹೇಳಿದ್ದ. ಕಿಟ್ಟಣ್ಣನಿಗೆ ಉತ್ಸಾಹ ಹೆಚ್ಚು. ಬಿಲ್ಲು ಬಾಣಗಳನ್ನು ಸದಾ ಇಟ್ಟುಕೊಂಡೇ ತಿರುಗಾಡುತ್ತಿದ್ದ. ಹಾರಾಡುವ ಪಕ್ಷಿಗಳ ಮೇಲೆ ಪ್ರಯೋಗ ಮಾಡಿ ನೋಡಿದ. ಇವನ ಗುರಿ ಸರಿಯಾಗಲೇ ಇಲ್ಲ. ಹೀಗೊಂದು ದಿನ ಮನೆಗೆ ಬರುತ್ತಿದ್ದಾಗ ಮನೆಯ ಹಿತ್ತಲಲ್ಲಿ ಅಜ್ಜಿ ಸಾಕಿದ್ದ ಬಾತುಕೋಳ