ದಿನಕ್ಕೊಂದು ಕಥೆ. 498
Veeresh Arssikere: *🌻ದಿನಕ್ಕೊಂದು ಕಥೆ🌻 ಎಲ್ಲಿದೆ ಸ್ವರ್ಗ? ಎಲ್ಲಿದೆ ನರಕ? ನಿಮಗೆ ಗೊತ್ತೇನು?* ‘ನಿಮಗೊಂದು ಪ್ರಶ್ನೆ! ಸ್ವರ್ಗ-ನರಕಗಳೆಂಬುವುದು ಇವೆಯಾ? ಎಲ್ಲಿವೆ? ಹೇಗಿವೆ?’ಈ ಪ್ರಶ್ನೆಯನ್ನು ನಮ್ಮ ಸ್ವಾಮೀಜಿಯವರಿಗೆ ಕೇಳಿದಾಗ ಅವರು ಜೋರಾಗಿ ನಕ್ಕು ‘ಸ್ವರ್ಗ-ನರಕಗಳ ಬಗ್ಗೆ ಕೇಳಿದ್ದೇನೆ. ಸತ್ತವರು ಮಾತ್ರ ಅಲ್ಲಿಗೆ ಹೋಗುತ್ತಾರಲ್ಲವೇ? ನಾನಿನ್ನೂ ಸತ್ತಿಲ್ಲ. ಅಲ್ಲಿಗೆ ಹೋಗಿಲ್ಲ. ನನಗೆ ಗೊತ್ತಿರುವ ಅನೇಕರು ಸತ್ತಿದ್ದಾರೆ. ಆದರೆ ಅವರು ಯಾರೂ ತಿರುಗಿ ಬಂದಿಲ್ಲ. ವರದಿ ತಂದಿಲ್ಲ. ಆದ್ದರಿಂದಾಗಿ ಸ್ವರ್ಗ-ನರಕಗಳ ಬಗ್ಗೆ ಏನು ಹೇಳಲಿ?’ಎಂದರು. ‘ಅವುಗಳ ಬಗ್ಗೆ ಎಲ್ಲ ದೇಶಗಳವರೂ, ಧರ್ಮಗಳವರೂ ಮಾತನಾಡುತ್ತಾರಲ್ಲ? ಅದರಲ್ಲೂ ನರಕದ ವಿಧ ವಿಧವಾದ ವರ್ಣನೆಗಳನ್ನು ಮಾಡುತ್ತಾರೆ. ಏಳು ಬಗೆಯ ನರಕಗಳಂತೆ. ಒಂದಕ್ಕಿಂತ ಒಂದು ಘೋರವಂತೆ. ಪಾಪ ಮಾಡಿದವರ ಪಾಪಗಳ ಪ್ರಮಾಣಕ್ಕೆ ಅನುಸಾರವಾಗಿ ಬೇರೆ ಬೇರೆ ನರಕಗಳ ಶಿಕ್ಷೆ ಸಿಗುತ್ತದಂತೆ’ಎಂದು ಮತ್ತೆ ಕೇಳಲಾಯಿತು. ಸ್ವಾಮೀಜಿಯವರು ‘ಒಳ್ಳೆಯದನ್ನು ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರೆ ಜನ ನಂಬದಿರಬಹುದು. ಆದರೆ ಕೆಟ್ಟದ್ದು ಮಾಡಿದರೆ ನರಕಕ್ಕೆ ಹೋಗುತ್ತೀರೆಂದರೆ ಅದನ್ನು ಹೆದರಿಕೆಯಿಂದ ನಂಬುತ್ತಾರೆ. ಜನ ಕೆಟ್ಟ ಪರಿಣಾಮಗಳಿಗೆ ಬೆಲೆ ಕೊಡುತ್ತಾರೆಯೇ ಹೊರತು ಒಳ್ಳೆಯ ಪರಿಣಾಮಗಳಿಗೆ ಬೆಲೆ ಕೊಡುವುದಿಲ್ಲ’ಎಂದರು. ಈ ಕುರಿತು ಅವರೇ