ದಿನಕ್ಕೊಂದು ಕಥೆ 839
*🌻ದಿನಕ್ಕೊಂದು ಕಥೆ🌻 ಭಗತ್ ಸಿಂಗ್ ಚಿಕ್ಕಮ್ಮನ ಕಣ್ಣೀರಿನ ಕಥೆ* 23ನೆಯ ವರ್ಷದಲ್ಲೇ ಇಹಲೋಕ ತ್ಯಜಿಸಿದ ಭಗತ್ ಸಿಂಗ್ನ ಎರಡನೆಯ ಚಿಕ್ಕಪ್ಪ ಸ್ವರ್ಣ ಸಿಂಹನ ಪತ್ನಿ ಹುಕುಮ್ ಕೌರ್ಳದ್ದು ಅಪ್ಪಟ ತ್ಯಾಗದ ಬದುಕು. ಜೀವನದಲ್ಲಿ ಅಂಧಕಾರವೇ ಘನೀಭವಿಸಿದ್ದರೂ ಈ ತ್ಯಾಗಮಯಿಯಲ್ಲಿ ಕೆನೆಗಟ್ಟಿದ್ದ ದೇಶಪ್ರೇಮಕ್ಕೆ ಒಂದಿನಿತೂ ಧಕ್ಕೆಯಾಗಲಿಲ್ಲ ಎಂಬುದು ಹೆಮ್ಮೆಯ ಸಂಗತಿ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಕಲಿಗಳನ್ನು ಕುರಿತು ನೂರಾರು ಲೇಖನಗಳನ್ನು ಬರೆದಿದ್ದಾಯಿತು. ಒಬ್ಬೊಬ್ಬರೂ ಅನುಭವಿಸಿದ ಘೊರ ಶಿಕ್ಷೆಗಳನ್ನು, ನರಕಯಾತನೆಯನ್ನು ವಿವರಿಸಿದ್ದಾಯಿತು. ಇನ್ನೂ ನೂರಾರು ವೀರರು ಈ ಅಂಕಣದಲ್ಲಿ ಕಾಣಿಸಿಕೊಳ್ಳಲು ಸಾಲುಗಟ್ಟಿ ನಿಂತಿದ್ದಾರೆ. ಎಲ್ಲವೂ ಸರಿಯೇ. ಆದರೆ ರಣರಂಗದಲ್ಲಿ ಹೋರಾಡಲು ಹೋಗಿ ಜೀವಾವಧಿ ಶಿಕ್ಷೆ ಅನುಭವಿಸಿದವರ, ಮಡಿದು ಹುತಾತ್ಮರಾದವರ ತಾಯಿ, ಪತ್ನಿ, ಸೋದರಿಯರನ್ನು ಕುರಿತು ಒಂದು ಉಲ್ಲೇಖವೂ ಆಗಿಲ್ಲದಿರುವುದು, ಮೌನವಾಗಿ ಊರ್ವಿುಳೆಯಂತೆ, ಸೀತೆಯಂತೆ ಕಷ್ಟ ಸಹಿಸಿಕೊಂಡ ವೀರ ಸತಿಮಣಿಯರಿಗೆ ಆಗಿರುವ ಅನ್ಯಾಯ ಎಂದೇ ಹೇಳಬೇಕು. ಮತ್ತೇನು. ವಾಸುದೇವ ಬಲವಂತ ಫಡಕೆಯ ಹೆಂಡತಿ, ವೀರ ಸಾವರ್ಕರರ ಪತ್ನಿ, ಅಜಿತ್ ಸಿಂಹನ ಪತ್ನಿ, ಸ್ವರ್ಣ ಸಿಂಹ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ ಕೈ ಹಿಡಿದ ಹೆಣ್ಣುಮಕ್ಕಳು ಮಾಡಿರುವ ತ್ಯಾಗ ಬೇರಾರಿಗಿಂತಲೂ ಕಡಿಮೆಯಲ್ಲ. ಅವರ