ದಿನಕ್ಕೊಂದು ಕಥೆ. 100
💐ದಿನಕ್ಕೊಂದು ಕಥೆ💐 👝ಅನಂತರೂಪ👝 ನಮ್ಮ ಜೀವನ ಅಮೂಲ್ಯವಾದುದು. ನಮ್ಮ ಸುತ್ತಮುತ್ತ ವಿಶಾಲವಾದ ವಿಶ್ವ ಹರಡಿಕೊಂಡಿದೆ. ಇಲ್ಲಿ ಅಸಂಖ್ಯ ಜೀವರಾಶಿಗಳು ಬದುಕಿವೆ. ಅವುಗಳ ಮಧ್ಯದಲ್ಲಿ ನಾವು ನಮ್ಮ ನೂರು ವಸಂತಗಳ ಸಂತಸದ ಬದುಕನ್ನು ಕಟ್ಟಿಕೊಳ್ಳಬೇಕು. ಆದರೆ ಸಂತಸದ ಬದುಕಿನ ಸೂತ್ರ ಯಾವುದು ಎಂಬುದೇ ದೊಡ್ಡ ಪ್ರಶ್ನೆ. ಇದು ಇಂದು ನಿನ್ನಿನ ಪ್ರಶ್ನೆಯಲ್ಲ. ಸಾವಿರ ಸಾವಿರ ವರುಷಗಳ ಹಿಂದಿನ ಪುರಾತನ ಪ್ರಶ್ನೆ ಇದು. ಮಾನವ ಜೀವನದ ದುಃಖವನ್ನು ಕಳೆಯುವುದು ಹೇಗೆ ಎನ್ನುವುದೆ ಬುದ್ಧನು ಎದುರಿಸಿದ ಪ್ರಶ್ನೆ. ಈ ಮಾಯಾಸಂಸಾರ ಸಾಗರವನ್ನು ದಾಟುವುದು ಹೇಗೆ? ಎನ್ನುವುದೆ ಶಂಕರಾಚಾರ್ಯರು ಎದುರಿಸಿದ ಮಹಾಪ್ರಶ್ನೆ. ಈ ಜಗತ್ತಿನಲ್ಲಿರುವ ಹಿಂಸೆಯನ್ನು ಕಳೆಯುವುದು ಹೇಗೆ ಎನ್ನುವುದು ಮಹಾವೀರರು ಎದುರಿಸಿದ ಮಹಾಪ್ರಶ್ನೆ. ಈ ಪ್ರಶ್ನೆಗಳ ಪರಿಹಾರಕ್ಕಾಗಿಯೇ ಅವರು ತಮ್ಮ ಬದುಕನ್ನು ಮೀಸಲಾಗಿಟ್ಟರು. ಅವರ ಆ ಪವಿತ್ರವಾದ ಬದುಕೇ ಬೋಧೆಯಾಯಿತು, ಜಗತ್ತಿಗೆ ದಿವ್ಯಸಂದೇಶ ನೀಡಿತು. ದೇವರು ನಮಗೆ ಕರುಣಿಸಿರುವ ಈ ತನು, ಮನ, ಬುದ್ಧಿಯ ಸಾಮರ್ಥ್ಯ ಸಾಮಾನ್ಯವಾದುದಲ್ಲ. ಅದರಲ್ಲೂ ಮನಸ್ಸಿನ ಸಾಮರ್ಥ್ಯವಂತೂ ಕಲ್ಪನಾತೀತವಾದುದು. ಬುದ್ಧ, ಬಸವ, ಮಹಾವೀರ ಮೊದಲಾದ ಮಹಾತ್ಮರನ್ನು ಜಗದ್ವಂದ್ಯರನ್ನಾಗಿ ಮಾಡಿದ್ದು ಇದೇ ಮನಸ್ಸು. ಈ ಮನಸ್ಸು ಸುಂದರವಾದರೆ ನಮ್ಮ ಬದುಕೂ ಸುಂದರ ಈ ಮನಸ್ಸು ಕುರೂಪವಾದರೆ ನಮ್ಮ ಬದುಕೂ ಕುರೂಪ! ಯಾರ ಮನಸ್ಸು ಸದಾ ನಗುನಗುತಲಿರುವುದೋ ಅವರು ಮಾನವರ