ದಿನಕ್ಕೊಂದು ಕಥೆ. 663
*🌻ದಿನಕ್ಕೊಂದು ಕಥೆ🌻 ಅಂತರಂಗದ ಅರಿವು ವಿಶೇಷವಾದ ಅರಿವಿನ ಕಣ್ಣನ್ನು* ವಿಶೇಷವಾದ ಅರಿವಿನ ಕಣ್ಣನ್ನು ಉಳ್ಳವನೇ ಕವಿ. ಅರಿವಿನ ಮಹಾಸಾಗರವೇ ಆಗಿರುವ ಆ ಮಹಾದೇವನಿಗೆ ಕಾಣಲಾರದ್ದು ಈ ಪ್ರಪಂಚದಲ್ಲಿ ಯಾವುದೂ ಇಲ್ಲ. ಅವನು ಹಿಂದು-ಇಂದು-ಮುಂದು ಎಲ್ಲದರ ಅರಿವಿರುವ ತ್ರಿಕಾಲ ಜ್ಞಾನಿ. ಈ ಸತ್ಯಸಂಗತಿಯನ್ನು ಅರಿಯದ ಕೆಲವರು ದೇವರ ಗುಡಿಯ ಹೊರಗೆ ಧೂಮಪಾನ ಮಾಡಿ, ಬೀಡಿ ಆರಿಸಿ ಒಳಗೆ ಹೋಗಿ ದೇವರಿಗೆ ಕೈಮುಗಿದು ಹೊರಗೆ ಬಂದು ಮತ್ತೆ ಬೀಡಿ ಹೊತ್ತಿಸುತ್ತಾರೆ! ಶಂಕರಾಚಾರ್ಯರು ಪರಮಜ್ಞಾನಿಗಳು. ಒಂದು ದಿನ ಅವರು ದೇಶ ಸಂಚಾರ ಮಾಡುತ್ತ ಹೊರಟಿದ್ದರು. ಅದು ಊರಿಂದೂರಿಗೆ ನಡೆದು ಹೋಗುವ ಕಾಲ. ದಣಿವಾರಿಸಿಕೊಳ್ಳಲೆಂದು ಒಂದು ಮರದಡಿಯಲ್ಲಿ ಕುಳಿತಿದ್ದರು. ಪಕ್ಕದ ಹೊಲದ ರೈತನು ಊಟಕ್ಕೆ ಕೂಡುತ್ತಿದ್ದನು. ಅದೇ ಮರದಡಿಯಲ್ಲಿ ಕುಳಿತಿದ್ದ ಶಂಕರಾಚಾರ್ಯರನ್ನು ನೋಡಿ ಅನಾಯಾಸವಾಗಿ ದೊರೆತ ಅತಿಥಿಗಳಿಗೆ ಊಟೋಪಚಾರ ಮಾಡಿಸಿ ಬಳಿಕ ತಾವು ಯಾರು? ಎಂದು ಕೇಳಿದ. ಹಸಿದವರಿಗೆ, ನೀರಡಿಸಿದವರಿಗೆ 'ನೀವು ಯಾರು?' ಎಂದು ಕೇಳಬಾರದು. ಇದು ಭಾರತೀಯ ಸಂಸ್ಕೃತಿ; ಅತಿಥಿ ಸತ್ಕಾರ ಮಾಡಿದ ಮೇಲೆಯೇ ರೈತನು 'ತಾವು ಯಾರು?' ಎಂದು ಕೇಳಿದ. ಕೂಡಲೇ ಅವರು ಸಂತಸದಿಂದ 'ನಾನು ಶಂಕರಾಚಾರ್ಯ' ಎಂದು ಹೇಳಿದರು. ಇದನ್ನು ಕೇಳಿದ ರೈತ ಅತ್ಯಾನಂದದಿಂದ 'ನಾನು ಬಹಳ ದಿನಗಳಿಂದ ತಮ್ಮ ದರ್ಶನಕ್ಕಾಗಿ ಹಂಬಲಿಸುತ್ತಿದ್ದೆ.