ದಿನಕ್ಕೊಂದು ಕಥೆ 977
ದಿನಕ್ಕೊಂದು ಕಥೆ ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು..! ಈ ಮಾತು ಯಾಕೆ ಬಂತು ಗೊತ್ತಾ.. ಇವಾಗೆಲ್ಲಾ ಡಬಲ್ ಮೀನಿಂಗ್ ಗೆ ಈ ಮಾತನ್ನು ಬಳಸುತ್ತಾರೆ.. ನೆನಪಿಡಿ.. ಈ ಮಾತು ತುಂಬ ಅರ್ಥ ಗರ್ಭಿತವಾಗಿದೆ.. ಓದಿ.. ಹೀಗೆ ಒಂದು ಸಂದರ್ಭದಲ್ಲಿ ಕೈಯಲ್ಲಿನ ಬೆರಳುಗಳು.. ಪರಸ್ಪರ ಮಾತಾಡುತ್ತಿರಬೇಕಾದರೆ.. ನಮ್ಮಲ್ಲಿ ಯಾರು ಶ್ರೇಷ್ಠ ಎಂಬ ಮಾತು ಹಾದು ಹೋಯಿತು.. ಎಲ್ಲಾ ಬೆರಳುಗಳು ನಾವು ನಾವು ಎಂದು ಚೀರ ತೊಡಗಿದವು.. ಆಗ ಯಾರ್ಯಾರು ತಾವು ಹೇಗೆ ಯಾವುದರಲ್ಲಿ ಶ್ರೇಷ್ಠವೆಂದು ಹೇಳಿದರೆ ತೀರ್ಮಾನಿಸಲು ಸೂಕ್ತವಾಗುತ್ತದೆ ಎಂದು ಆಲೋಚಿಸಿ.. ಒಂದೋಂದಾಗೇ ತಮ್ಮ ಶ್ರೇಷ್ಠತೆಯನ್ನು ಹೇಳತೊಡಗಿದವು.. ಮೊದಲು ಹೆಬ್ಬೆರೆಳು ಹೇಳಿತು.. ನಾನು ನಿಮಗಿಂತಲೂ ಗಾತ್ರದಲ್ಲಿ.. ಉಪಮೆಯಲ್ಲಿ ( ಹೋಲಿಕೆ) ದೊಡ್ಡವ... ನಿಮ್ಮೆಲ್ಲರಿಗೂ ಹಿರಿಯಣ್ಣ.. ತಂದೆ ತಾಯಿಗೆ ನನ್ನನ್ನು ಹೋಲಿಸಲಾಗುತ್ತದೆ.. ಏಕಲವ್ಯ. ಅರ್ಜುನರಾದಿ ದ್ರೋಣರು ಕೂಡ ನನ್ನಿಂದಲೇ ಪ್ರಸಿದ್ಧರಾಗಿದ್ದು ಗೊತ್ತಾ ಎಂದು ಬೀಗಿತು.. ಎಲ್ಲಾ ಬೆರಳುಗಳು ಹೌದೆಂದೆವು.. ನಂತರ ತೋರು ಬೆರಳು ಹೇಳಿತು.. ನಾನು ತೋರು ಬೆರಳು.. ನಾನು ಪ್ರತಿಯೊಬ್ಬರ ಅಹಂ ನ ಸಂಕೇತ.. ನಾನು ನನ್ನದು ನನಗೆ ನಾನೇ ಎಂಬ ಸ್ವಂತಿಕೆಯ ಪ್ರತೀಕ.. ನಾನು ಪ್ರತಿಯೊಬ್ಬರ ಸೊಕ್ಕು ಧಿಮಾಕು ಜಂಭದ ಪ್ರತೀಕ ವೆಂದು ಜಂಭಪಟ್ಟಿತು.. ಎಲ್ಲಾ ಬೆರಳುಗಳು ತಲೆಯಾಡಿಸಿದವು.. ನಂತರ ನಡುಬೆರಳು ಎದ್ದು ನಿಂತಿತು.. ನಾನು ನಿಮ್ಮಲ್ಲಗಿರಿಂತ ಎತ್ತರ ಉ