Posts

Showing posts from January, 2024

ದಿನಕ್ಕೊಂದು ಕಥೆ 1091

*🌻ದಿನಕ್ಕೊಂದು ಕಥೆ🌻* *ನಾನು ಎಂಬ ಅಹಂ ನ ನಾಶ* ಅಣಶಿ ಅಭಯಾರಣ್ಯ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಬಳಿ ಇರುವ ಒಂದು ರಾಷ್ಟ್ರೀಯ ಉದ್ಯಾನವನ. ಈ ಅರಣ್ಯದಲ್ಲಿ ಕಪ್ಪು ಚಿರತೆ, ಹುಲಿ ಮತ್ತು ಆನೆ ಮುಖ್ಯ ಪ್ರಾಣಿಗಳಾಗಿವೆ. ಈ ಅಭಯಾರಣ್ಯದ ದಟ್ಟವಾದ ಶೋಲಾ ಕಾಡಿನ ನಡುವೆ ಪಾತಗುಡಿ ಎಂಬ ಪುಟ್ಟ ಹಳ್ಳಿ ಇದೆ. ಇಲ್ಲಿ ಕುಣಬಿ ಬುಡಕಟ್ಟು ಜನಾಂಗದ‌  ಹದಿಮೂರು ಮನೆಗಳು ಇವೆ. ನಗರ ಪ್ರಪಂಚದ ಸೋಂಕು  ಸ್ವಲ್ಪವೂ ಇಲ್ಲದ ಈ ಪುಟ್ಟ ಹಳ್ಳಿಯಲ್ಲಿ ಒಂದು ಪುಟ್ಟ  ಪಾಠಶಾಲೆ ಇದೆ. ಈ ಶಾಲೆಗೆ ತಗಡಿನ ಶೀಟಿನ ಚಾವಣಿ. ಪ್ರಶಾಂತ ಎಂಬ ಸ್ಥಳೀಯ ತರುಣನೊಬ್ಬ ಇಲ್ಲಿಯ ಅಧ್ಯಾಪಕ.     ಪುನೀತ್ ರಾಜಕುಮಾರ್  ರವರು ತಮ್ಮ  ಚಿತ್ರ ಗಂಧದಗುಡಿ ಚಿತ್ರಿಕರಣಕ್ಕೆ ಈ ಪಾತಗುಡಿ ಎಂಬ ಸ್ಥಳಕ್ಕೆ ಬಂದಿದ್ದರು. ಹಾಗೆಯೇ ಇಲ್ಲಿಯ ಶಾಲೆಗೆ ಭೇಟಿ ಕೊಟ್ಟು ಅಲ್ಲಿನ ಮಕ್ಕಳಿಗೆ "ನಾನು ಯಾರು ನಿಮಗೆ ಗೊತ್ತಾ"? ಎಂದು ಕೇಳಿದಾಗ ಆ ಮಕ್ಕಳು ಗೊತ್ತಿಲ್ಲವೆಂದು ತಲೆಯಾಡಿಸಿದರು. ಹೋಗಲಿ ನಮ್ಮ ತಂದೆ ಯಾರೆಂದು ಗೊತ್ತಾ? ಎಂದು ಕೇಳಿದಾಗ, ಅದಕ್ಕೂ ಇಲ್ಲವೆಂದು ಉತ್ತರಿಸಿದವು ಮಕ್ಕಳು. ಸಿನಿಮಾ ಟಿವಿಗಳ ಸಂಪರ್ಕವೇ ಇಲ್ಲದ ಈ ನಿಸರ್ಗ ಪ್ರದೇಶದಲ್ಲಿ ಸಿಕ್ಕ ಉತ್ತರದಿಂದ ಪುನೀತ್ ಒಮ್ಮೆ ನಕ್ಕರಂತೆ. ನಾವು ಮಹಾನ್ ಪ್ರಸಿದ್ದರು ಎಂಬ ಭ್ರಮೆಯಲ್ಲಿ ಬದುಕುತ್ತಿರುತ್ತೇವೆ. ಈ ಮಕ್ಕಳ ಉತ್ತರ ನಾನು ಎಂಬ ಸಣ್ಣ ಅಹಂಕಾರವನ್ನು ಕರಗಿಸಿ ಬಿಟ್ಟಿತು ಎಂದುಕೊಂಡರಂತೆ. ಎರಡು ದಿನಗಳ ಕಾಲ,ಈ  ಮಕ್ಕ

ದಿನಕ್ಕೊಂದು ಕಥೆ 1090

*🌻ದಿನಕ್ಕೊಂದು ಕಥೆ🌻* *ಚುಕ್ತಾ* ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಎಂಟನೇಯ ತರಗತಿ ಯಲ್ಲಿ ಓದುತ್ತಿದ್ದ ಶಾರದಾ, ದಿನ ನಿತ್ಯ  ಸುಮಾರು ನಾಲ್ಕು ಕಿಮೀ ದೂರದ ತನ್ನ ಹಳ್ಳಿಯಿಂದ ನಡೆದು ಬರುತ್ತಿದ್ದಳು.ಆಕೆ ಆಟ-ಪಾಠ ಮತ್ತಿತರೇ ಶಾಲಾ ಚಟುವಟಿಕೆಗಳಲ್ಲಿ ಮಾಡಿದ ಅದ್ಭುತ  ಸಾಧನೆ ಪರಿಗಣಿಸಿದ ಪಟ್ಟಣದ ರೋಟರಿ ಸಂಸ್ಥೆ ಯವರು ಅಂದು ಶಾಲಾವರಣದಲ್ಲಿ ಇರಿಸಿಕೊಂಡಿದ್ದ ಸಮಾರಂಭದಲ್ಲಿ ಶಾರದಾಳಿಗೆ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದ್ದರು.ಅಂದು ಅವಳಿಗೆ ಪ್ರಶಸ್ತಿ ಪತ್ರ ದೊಂದಿಗೆ ನಗದು ಹಣ ಐನೂರು ರೂಪಾಯಿ  ಕೂಡ ಕೊಟ್ಟು ಪ್ರೋತ್ಸಾಹಿಸಿದ್ದರು.ತನ್ನ ಕಲ್ಪನೆಯಲ್ಲೂ, ಊಹಿಸದ ಶಾರದಾ,ಆ ಪ್ರಶಸ್ತಿ ಸ್ವೀಕರಿಸಿದಾಗ ಹರ್ಷಚಿತ್ತಳಾಗಿ ಅವಳಿಗೆ ಅರಿವಿಲ್ಲದೇ ಆನಂದ ಭಾಷ್ಪ ಸುರಿಸುತ್ತಿದ್ದಳು.ಅಧ್ಯಕ್ಷರ ಸೂಚನೆಯಂತೆ ಎರಡು ಮಾತು ಹೇಳು ಎಂದಾಗ ಮುಗ್ಧ ಮನಸ್ಸಿನ ಶಾರದಾ, ತನಗೆ ಕೊಟ್ಟ ಪ್ರಶಸ್ತಿಯನ್ನು ಎರಡೂ ಕೈಯಲ್ಲಿ ಹಿಡಿದು ನೆರೆದ ಜನಗಳಿಗೆ ತೋರಿಸುತ್ತ "ಇದೆಲ್ಲಾ.. ನನ್ನ ಅಮ್ಮನ ಪ್ರೇರಣೆ ಹಾಗೂ ಗುರುಗಳ ಪ್ರೋತ್ಸಾಹ ಮತ್ತು ಆಶೀರ್ವಾದದ ಫಲ "ಎಂದಷ್ಟೇ ಹೇಳಿ,ಹಸನ್ಮುಖಳಾಗಿ ತನ್ನ ಸೀಟಿನ ಮೇಲೆ ಹೋಗಿ ಕುಳಿತಳು.ಆ ಕಾರ್ಯಕ್ರಮ ಮುಗಿಯಲು ಇನ್ನೂ ಕನಿಷ್ಠ ಒಂದು ಗಂಟೆ ಬೇಕಿತ್ತು.ಇತ್ತ ಶಾರದಾ ಮನದಲ್ಲಿ", ಯಾವಾಗ ಕಾರ್ಯಕ್ರಮ ಮುಗಿಯತ್ತೋ... ಯಾವಾಗ ತಾನು ಅಮ್ಮನಿಗೆ ವಿಷಯ ತಿಳಿಸೇನು"ಎಂದು ಚಡಪಡಿಸತೊಡಗಿದ್ದಳು. ಅಂತೂ ಆ ಕಾರ್ಯಕ್

ದಿನಕ್ಕೊಂದು ಕಥೆ 1089

*🌻ದಿನಕ್ಕೊಂದು ಕಥೆ🌻* *ಕಲಿಕೆ  ಎಂಬುದು ಅವರವರ ಇಚ್ಛಾನುಸಾರ* ಪ್ರತಿಯೊಬ್ಬ ತಂದೆ ತಾಯಿಯ ಆಸೆ, ತಮ್ಮ ಮಗ  ಚೆನ್ನಾಗಿ ಓದಿ ದೊಡ್ಡ ವ್ಯಕ್ತಿಯಾಗಬೇಕೆಂದು.  ಹೀಗೆ ಒಬ್ಬ ತಂದೆ ತನ್ನ ಮಗ ಡಾಕ್ಟರ್ ಅಥವಾ ಇಂಜಿನಿಯರು ಆಗಬೇಕೆಂದು ಬಯಸಿದ್ದ. ಆದರೆ ಮಗನಿಗೆ  ಚಿತ್ರ ಕಲೆಯಲ್ಲಿ ಆಸಕ್ತಿ . ತಂದೆಗೆ, ಚಿತ್ರಕಲೆಯಿಂದ ಏನು ಸಾಧಿಸಲು ಸಾಧ್ಯ ? ಅದರಿಂದ  ಇವನು ಮುಂದಿನ ಜೀವನ ನಡೆಸಲು ಹೇಗೆ ಸಾಧ್ಯ, ಎಂದು ಅವನಿಗೆ ಅದರ ಬಗ್ಗೆ ಅಸಡ್ಡೆ. ಹಾಗಾಗಿ ಅವನು  ಮಗನಿಗೆ ಇಂಜಿನೀಯರ್ ಅಥವಾ ಡಾಕ್ಟರ್ ಆಗಬೇಕೆಂದು  ಬಲವಂತ ಮಾಡ ತೊಡಗಿದ.ತಂದೆಯ ಈ ವರ್ತನೆಯಿಂದ ಮಗ ಮಂಕಾಗುತ್ತಾ ಬಂದ.  ತನಗಿಷ್ಟವಿಲ್ಲದ ಓದು ಬರಹದಲ್ಲಿ  ಆಸಕ್ತಿ ಕಳೆದುಕೊಂಡ.      ಆ ವರ್ಷ ಫೇಲಾಗಿಯೂ ಬಿಟ್ಟ. ಇದನ್ನು ಸಹಿಸಿಕೊಳ್ಳಲು ‌ತಂದೆಯಿಂದ  ಸಾಧ್ಯವಾಗಲ್ಲಿಲ್ಲ. ನನ್ನ ಮರ್ಯಾದೆಯನ್ನು ಕಳೆದ ನೀನು, ಇನ್ನೆಂದಿಗೂ  ನನ್ನನ್ನು ಮಾತನಾಡಿಸಬೇಡ ಎಂದ. ದುಃಖ ಗೊಂಡ ಮಗ, ಇನ್ನಷ್ಟು ಖಿನ್ನತೆಗೆ ಒಳಗಾದ.     ಒಮ್ಮೆ ಇವನ ಅಜ್ಜ ಇವನನ್ನು ನೋಡಿಕೊಂಡು ಹೋಗಲೆಂದು ಮನೆಗೆ ಬಂದ. ಅವನಿಗೆ  ಮನೆಯ ಪರಿಸ್ಥಿತಿ ಎಲ್ಲವೂ ಅರ್ಥವಾಯಿತು. ಹೇಗಾದರೂ ಮಾಡಿ ಮೊಮ್ಮಗನನ್ನು ಸರಿಪಡಿಸಬೇಕು  ಎನ್ನುವ ಉದ್ದೇಶದಿಂದ, ತನ್ನ ಮಗನನ್ನು ಕೂರಿಸಿಕೊಂಡು ಮಾತನಾಡತೊಡಗಿದ.     ಮಗನೇ ,ನಿನ್ನ ಕಾಳಜಿ ನನಗೆ ಅರ್ಥವಾಗುತ್ತದೆ. ನನ್ನ ಮಗ ಹೇಗೆ ದೊಡ್ಡ ಮನುಷ್ಯನಾಗಬೇಕೆಂದು ನಾನು  ಆಸೆ ಪಟ್ಟೆನೊ, ಹಾಗೆಯೇ ,ನೀನೂ ಕೂಡ ನಿನ್ನ

ದಿನಕ್ಕೊಂದು ಕಥೆ 1088

*🌻ದಿನಕ್ಕೊಂದು ಕಥೆ🌻* ನಾನು ಕೋಪದಿಂದ ಮನೆ ಬಿಟ್ಟು ಬಂದೆ. ಎಷ್ಟು ಕೋಪ ಬಂದಿತ್ತೆಂದರೆ ಅಪ್ಪನ ಶೂ ಹಾಕ್ಕೊಂಡು ಬಂದಿರುವುದು ಕೂಡ ಗೊತ್ತಾಗಲಿಲ್ಲ. ಮಗನಿಗೆ ಒಂದು ಬೈಕ್ ಕೊಡಿಸಲಾಗದವರು ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವುದು ಯಾಕೆ....? ನಾನು ದೊಡ್ಡ ವ್ಯಕ್ತಿಯಾಗುವವರೆಗೂ ಮತ್ತೆ ಮನೆ ಹೋಗುವುದಿಲ್ಲ....  ನನಗೆ ಎಷ್ಟು ಕೋಪ ಬಂದಿದೆಯೆಂದರೆ ಎಂದೂ ಮುಟ್ಟದ ಅಪ್ಪನ ಪರ್ಸ್'ನ್ನು ತಗೊಂಡುಬಂದೆ. ಅಮ್ಮನಿಗೆ ಕೂಡ ಗೊತ್ತಿಲ್ಲದ ಲೆಕ್ಕಗಳೆಲ್ಲ ಅದರಲ್ಲಿ ಇವೆ. ಇಂದು ಅವೆಲ್ಲವೂ ನನಗೆ ಗೊತ್ತಾಯಿತು.  ನಡೆಯುತ್ತಿದ್ದರೆ ಬೂಟ್'ಗಳಲ್ಲಿ ಏನೋ ಚುಚ್ಚಿದ ಹಾಗೆ ಆಗುತ್ತಿದೆ. ಅದರೂ ನನ್ನ ಕೋಪ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಬೂಟ್'ಗಳ ಒಳಗೆ ಒದ್ದೆಯಾಗ ಅನುಭವವಾಯಿತು. ಎತ್ತಿ ನೋಡಿದೆ ಬೂಟ್'ಗಳ ತಳದಲ್ಲಿ ರಂಧ್ರಗಳಾಗಿವೆ. ಹಾಗೆ ಕುಂಟುತ್ತ ಬಸ್ ನಿಲ್ದಾಣಕ್ಕೆ ಬಂದೆ.  ಒಂದು ಗಂಟೆ ತನಕ ಯಾವುದೇ ಬಸ್ಸು ಇಲ್ಲ ಎಂದು ತಿಳಿಯಿತು. ಸರಿ ಏನು ಮಾಡುವುದು. ಅಪ್ಪನ ಪರ್ಸ್'ನಲ್ಲಿ ಏನೇನು ಇದೆ ನೋಡೋಣ ಎಂದು ತೆಗೆದೆ. ಆಫೀಸಿನಲ್ಲಿ 40,000 ಸಾಲ ತೆಗೆದುಕೊಂಡ ರಶೀದಿ, Laptop ಬಿಲ್ಲು. ಆ Laptop ನನ್ನ ಟೇಬಲ್ ಮೇಲಿದೆ. ಅಂದರೆ ನನಗಾಗಿ ಕೊಡಿಸಿದ್ದು. ಮತ್ತೆ ಅದರಲ್ಲಿ ಆಫೀಸ್'ಗೆ ಒಳ್ಳೆಯ ಬೂಟ್'ಗಳನ್ನು ಹಾಕಿಕೊಂಡು ಬರುವಂತೆ ಮೇನೇಜರ್ ಕೊಟ್ಟ ನೋಟೀಸ್ ಲೇಟರ್. ಹೌದು ಅಮ್ಮ ನಾಲ್ಕು ತಿಂಗಳಿಂದ ಹೇಳುತ್ತಿದ್ದರು

ದಿನಕ್ಕೊಂದು ಕಥೆ 1087

*🌻ದಿನಕ್ಕೊಂದು ಕಥೆ🌻* ಶ್ರೀರಾಮ ವನವಾಸದ ಸಮಯದಲ್ಲಿ ಕಾಡಲ್ಲಿ ನಡೆದುಕೊಂಡು ಹೋಗುವಾಗ ಸಾಕ್ಷಾತ್ ವನದೇವಿ ಪ್ರತ್ಯಕ್ಷಳಾಗಿ 'ರಾಮ, ನಿನಗಾಗಿ ನಾನು ಏನು ಸೇವೆ ಮಾಡಬಹುದು' ಎಂದು ಕೇಳುತ್ತಾಳೆ. ರಾಮ: ನಾನು ಇದುವರೆಗೂ ನಡೆದುಕೊಂಡು ಬರುವಾಗ ದಾರಿಯಲ್ಲಿ ತುಂಬಾ ಮುಳ್ಳುಗಳಿದ್ದವು ಅವುಗಳನ್ನು ತೆಗೆದುಹಾಕು. ವನದೇವಿ: ನೀನು ಈಗಾಗಲೇ ನಡೆದುಕೊಂಡು ಬಂದ ಜಾಗದಲ್ಲಿ ಮುಳ್ಳು ತೆಗೆದು ಲಾಭವಿಲ್ಲ, ನೀನು ಮುಂದೆ ನಡೆಯುವ ದಾರಿಯಲ್ಲಿ ಮುಳ್ಳು ತೆಗೆಯುತ್ತೇನೆ ರಾಮ: ಇಲ್ಲ, ಹಿಂದೆ ನನ್ನ ತಮ್ಮ ಭರತ ಬರುತ್ತಿದ್ದಾನೆ. ಅವನಿಗೆ ಮುಳ್ಳು ಚುಚ್ಚಬಾರದು. ವನದೇವಿ: ಯಾಕೆ ನಿನ್ನ ತಮ್ಮ ಅಷ್ಟು ಬಲಹೀನನಾ? ರಾಮ: ಇಲ್ಲ, ನನ್ನ ತಮ್ಮ ತುಂಬಾ ಶಕ್ತಿವಂತ. ಈ ಮುಳ್ಳುಗಳು ಅವನಿಗೆ ಚುಚ್ಚಿದರೆ 'ನಮ್ಮಣ್ಣ ಈ ಮುಳ್ಳಿನ ದಾರಿಯಲ್ಲಿ ಹೋದನಾ ಎಂದುಕೊಂಡು ದುಃಖ ಪಡ್ತಾನೆ. ನನ್ನ ತಮ್ಮ ದುಃಖಿತನಾದರೆ ನನಗೆ ನೋವಾಗತ್ತೆ. ಅದಕ್ಕಾಗಿ ಆ ಮುಳ್ಳುಗಳನ್ನು ತೆಗಿ ಎಂದು ಕೇಳಿದೆ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ರಾಮಾಯಣದಲ್ಲಿ ಅಣ್ಣ ತಮ್ಮಂದಿರು ಎಷ್ಟು ಆಪ್ತವಾಗಿದ್ದರು ಎಂದು ಇದರಿಂದ ತಿಳಿಯುತ್ತೆ. ************************************** *ಹೆತ್ತವರ ಆಶೀರ್ವಾದ ಮಕ್ಕಳಿಗೆ ಶ್ರೀರಕ್ಷೆ* ಒಮ್ಮೆ ಅಪ್ಪ ಮಗ ಸಮುದ್ರಯಾನ ಮಾಡ್ತಾ ಇದ್ರು. ದೋಣಿ ಮುಳುಗೋ ಪರಿಸ್ಥಿತಿ ಬಂತು ಹಾಗೂ ಹೀಗೂ ಒಂದು ಸಣ್ಣ ದ್ವೀಪ ತಲುಪುತ್ತಾರೆ. ಈ ಪರಿಸ್ಥಿತಿಯಲ್ಲಿ ದೇವರ

ದಿನಕ್ಕೊಂದು ಕಥೆ 1086

*🌻ದಿನಕ್ಕೊಂದು ಕಥೆ🌻* *ಬದಲಾವಣೆಯತ್ತ ಒಂದೊಂದೇ‌ ಹೆಜ್ಜೆ.*  ‌ ‌ಡಾಕ್ಟರ್ ಶಿಗಾಕಿ ಹಿನೋಹರಾ ಜಪಾನಿನ  ಅತ್ಯಂತ ಪ್ರಸಿದ್ಧ ವೈದ್ಯರು. ನೂರಾಐದು ವರ್ಷ ಬದುಕಿ ಬಾಳಿದ್ದ‌ ಅವರು ಕೊನೆಯವರೆಗೂ ನಿವೃತ್ತರಾಗದೇ, ಚಟುವಟಿಕೆಯಿಂದಿದ್ದರು .     ಅವರಲ್ಲಿಗೆ ಒಬ್ಬ ಮಹಿಳೆ ಸಲಹೆಗಾಗಿ ಬಂದಳು. ಆಕೆಗೆ ಹೆಚ್ಚುತ್ತಿರುವ ತೂಕದಿಂದ ಹಲವಾರು ಖಾಯಿಲೆಗಳೂ  ಕಾಣಿಸಿಕೊಂಡಿದ್ದವು. ಬಹಳ ಒತ್ತಡದ ಜೀವನ‌ಶೈಲಿಯ ಆಕೆಗೆ, ವ್ಯಾಯಾಮ ಮಾಡಲಾಗಲೀ,ನಡೆಯಲಾಗಲಿ, ಸಮಯವಿರಲಿಲ್ಲ. ಡಾಕ್ಟರ್ ಶಿಗಾಕಿಯವರಿಗೆ , ಇದು ತಕ್ಷಣಕ್ಕೆ ಪರಿಹಾರವಾಗುವಂತಹ ಸಮಸ್ಯೆಯಲ್ಲಾ ಎಂದು ಗೊತ್ತಾಯಿತು. ಆಗ ಅವರು, ನಿಮಗೆ ದಿನಾ ಹಾಡು ಕೇಳುವ ಅಭ್ಯಾಸ ವಿದೆಯಾ ? ಎಂದು ಮಹಿಳೆಯನ್ನು ಕೇಳಿದರು.ಆಕೆ ಹೌದೆಂದು ತಲೆ ಅಲ್ಲಾಡಿಸಿದಳು. ಹಾಗಾದರೆ, ಒಂದು ವಾರ ಯಾವುದಾದರೂ ಹಾಡಿಗೆ ದಿನಕ್ಕೊಂದು ನಿಮಿಷದಂತೆ ನೃತ್ಯ ಮಾಡಲಾಗುವುದೇ? ಎಂದು ಕೇಳಿದರು ವೈದ್ಯರು. ಆಗ ಆ ಮಹಿಳೆ, ಮುಗುಳ್ನಗುತ್ತಾ, ಓಹ್, ಒಂದು ನಿಮಿಷ ತಾನೇ, ಅಷ್ಟು ಸಮಯವಿಲ್ಲದೆ ಏನು? ಎಂದು ನೃತ್ಯ ಮಾಡಲು ಒಪ್ಪಿಕೊಂಡಳು.    ಒಂದು ವಾರ ಬಿಟ್ಟು  ಮತ್ತೆ ಆಕೆ ವೈದ್ಯರ ಬಳಿಗೆ ಬಂದಾಗ, ಶಿಗಾಕಿ ಯವರು, ಇಡೀ ಹಾಡಿಗೆ ದಿನವೂ ನೃತ್ಯಮಾಡಲು ಸಮಯವಿದೆಯೇ? ಎಂದು ಕೇಳಿದರು. ಅದಕ್ಕೂ ಆ ಮಹಿಳೆ ಸಂತೋಷದಿಂದ ಒಪ್ಪಿಕೊಂಡಳು. ಹಾಗೆ ಮುಂದಿನ ವಾರ ಬಂದಾಗ, ಎರಡು ಹಾಡುಗಳ ನೃತ್ಯ ಮಾಡಲು ಹೇಳಿದರು, ಅದಾದ ಮೇಲೆ ನೃತ್ಯದ  ಜೊತೆಗೆ  ಕೆಲವು ಸುಲಭ ವ್ಯಾಯಾಮ

ದಿನಕ್ಕೊಂದು ಕಥೆ 1085

*🌻ದಿನಕ್ಕೊಂದು ಕಥೆ🌻* ಇವತ್ತು ಎಲ್ಲರ ಬಾಯಲ್ಲಿ ಬರ್ತಾ ಇರೋದು ಅದೊಂದೇ ಹೆಸರು... ಅರುಣ್ ಯೋಗಿರಾಜ್. ಎಲ್ಲೋ ಎಂಬಿಎ ಮಾಡ್ತಾ ಇದ್ದ ಹುಡುಗನಿಗೆ ಅನ್ನಿಸಿರಬೇಕು... ಅನ್ನಿಸೋದು ಚಿಕ್ಕ ಪದ, ಪ್ರೇರಣೆ ಆಗಿರಬೇಕು. ಅಷ್ಟು ದುಡ್ಡು ಕೊಟ್ಟು ಓದಿ, ಕೆಲಸಕ್ಕೂ ಹೋಗ್ತಾ, ಕೀಬೋರ್ಡ್ ಕುಟ್ಟುತ್ತಾ ಇರೋ ವ್ಯಕ್ತಿಯೊಬ್ಬ, ಇಲ್ಲಪಾ ನಾನು ಅದ್ಯಾವುದೋ ಕಲ್ಲು ಕುಟ್ಟೋ ಕೆಲಸಕ್ಕೆ ಹೋಗ್ತೀನಿ ಅಂದಾಗ ಅರುಣನ ಅಪ್ಪನೇ ಮೊದಲು ಒಪ್ಪಿರಲಿಲ್ಲ ಅನ್ನೋದನ್ನ ತಿಳಿದುಕೊಂಡೆ. ನಾನು ಈ ಕ್ಷೇತ್ರಕ್ಕೆ ತಡವಾಗಿ ಬಂದೆ ಅಂತ ಅರುಣ್ ಖುದ್ದು ಮಾಧ್ಯಮಗಳ ಮುಂದೆ ಹೇಳ್ತಾನೇ ಇರ್ತಾರೆ... ಯಾವ್ ಯಾವುದೋ ಅಡಕೆ ಕುಟ್ಟೋ ಕುಟ್ಟಾಣಿಗಳನ್ನೆಲ್ಲ ಮಾಡ್ತಾ ಮಾಡ್ತಾ ಇವತ್ತು ರಾಮನ ವಿಗ್ರಹ ಮಾಡಿ ಆತ ತನ್ನ ಜನ್ಮವನ್ನೇ ಪಾವನ ಮಾಡ್ಕೊಂಡಿದಾನೆ. ಯಾವುದು ಸಿಕ್ಕಾಗ ಇನ್ನೇನು ಬೇಡ ಅನ್ಸುತ್ತೋ ಅದಕ್ಕೆ ಶ್ರಮಿಸಬೇಕು ಅಂತ ಅಧ್ಯಾತ್ಮ ಹೇಳುತ್ತೆ. ತಡವಾಗಿ ಬಂದೆ ಈ ಕ್ಷೇತ್ರಕ್ಕೆ ಅನ್ನುವ ಅರುಣ್ ಯೋಗಿರಾಜ್ಗೆ ದೇವರು ಆ ಆನಂದವನ್ನ ಇಷ್ಟು ಬೇಗ ದಯಪಾಲಿಸಿದ್ದಾನೆ ಅಂದ್ರೆ, ಅವತ್ತು ಕಂಪನಿಗೆ ರಾಜೀನಾಮೆ ಹಾಕೋ ಆತನ ನಿರ್ಧಾರ ಪ್ರೇರಣೆಯೇ ಆಗಿತ್ತು ಅನ್ನೋದಕ್ಕೆ ಇದಕ್ಕಿಂತ ಇನ್ನೇನ್ ಸಾಕ್ಷಿ ಬೇಕು ಹೇಳಿ? ನಿಮ್ಮ ಮನಸ್ಸು ಹೇಳುವ ಯಾವ ಕೆಲಸ ಮಾಡೋದಕ್ಕೂ ಯಾವತ್ತಿಗೂ ತಡ (ಲೇಟ್) ಅಂತ ಇಲ್ಲವೇ ಇಲ್ಲ ಅನ್ನೋದನ್ನ ವಿಶ್ವದ ಸಾಧಕರು ಸಾರಿ ಸಾರಿ ಹೇಳಿದ್ದಾರೆ. ಇದೊಂದು ಪ್ರಕರಣದಿಂದ ನಾವು ಕಲಿಯಬಹ

ದಿನಕ್ಕೊಂದು ಕಥೆ 1084

*🌻ದಿನಕ್ಕೊಂದು ಕಥೆ🌻*         *ಸಂಸ್ಕಾರ* "ಅರ್ರೇ..... ದೀಪಕ್, ಈ  ರೂಮಿನಲ್ಲಿ ಒಬ್ರು ಅಜ್ಜೀ ಇದ್ದಾರಲ್ಲಾ?" ದಿವ್ಯಾ, ದೀಪಕ್ ನಿಗೆ ಕೇಳುತ್ತಾಳೆ. ಈ ದಿವ್ಯಾ ದೀಪಕ್ ನ ಮದುವೆಯಾಗಿ ಎರಡು ಮೂರು ದಿನ ಆಗಿತ್ತಷ್ಟೆ. ಶ್ರೀಮಂತ ಕುಟುಂಬದಿಂದ ಬಂದ ದಿವ್ಯಾ, ಅಷ್ಟೇ ಶ್ರೀಮಂತ ಕುಟುಂಬದ ಸೊಸೆಯಾಗಿ ಬಂದಿದ್ದಳು. ಅಂದು ದೀಪಕ್ ತನ್ನ ಬಂಗ್ಲೆ ಯಂತಿದ್ದ ದೊಡ್ಡ ಮನೆಯನ್ನು  ಪತ್ನಿಗೆ ಒಂದೊಂದಾಗಿ ತೋರಿಸಲು ಬಂದಾಗ, ಮಹಡಿ ಮೇಲಿನ ಒಂದು ರೂಮಿಗೆ ಬರುತ್ತಾರೆ. ಆಗ ದಿವ್ಯಾ. ಆಗ ರೀತಿ ಪ್ರಶ್ನೆ ಮಾಡಿದಾಗ ಆಕೆಯ ಪ್ರಶ್ನೆ ಗೆ ದೀಪಕ್ " ಹಾಂ... ಹೌದು, ಇದ್ದರು" ಎನ್ನುತ್ತಾನೆ. ಆತನ ಮಾತಿಗೆ ಹೌಹಾರಿದ ದಿವ್ಯಾ "ಅಂದ್ರೆ.. ಅವರು...ಈಗ" ಎಂದು ಅನುಮಾನದಿಂದ ಕೇಳಿದಾಗ  ದೀಪಕ್ ಅದಕ್ಕೆ " ಇದ್ದಾರೆ.. ಅವರು ವೃದ್ಧಾಶ್ರಮ ದಲ್ಲಿ"ಎಂದು ಉತ್ತರಿಸುತ್ತಾನೆ. ಪುನಃ ದಿವ್ಯಾ -" ಮತ್ತೆ ಆವತ್ತು ನಿಶ್ಚಿತಾರ್ಥದ ದಿವಸ ಇಲ್ಲೇ ಇದ್ರಲ್ಲ... ಮದುವೆ ಮನೆಯಲ್ಲಿ ಕಾಣಲೇ ಇಲ್ವಲ್ಲ" ಎಂದಾಗ ದೀಪಕ್ " ಮದುವೆ ಮನೆ ಅಂದ್ರೆ ತುಂಬಾ ಗಲಾಟೆ .. ಗದ್ದಲ ಇರುತ್ತೆ, ಅದು ಅವರಿಗೆ ಆಗಿ ಬರಲ್ಲ ಅಂತ, ಡ್ಯಾಡಿ, ನಿಶ್ಚಿತಾರ್ಥ ಮುಗಿದ ದಿನವೇ ಅವರನ್ನು ಮತ್ತೆ ವೃದ್ಧಾಶ್ರಮ ಕ್ಕೆ ಬಿಟ್ಟು ಬಂದಿದ್ದಾರೆ " ಎನ್ನುತ್ತಾನೆ. ಅಷ್ಟಕ್ಕೇ ಸುಮ್ಮನಾಗದ  ದಿವ್ಯಾ" ಆ ಅಜ್ಜೀ ನಿಮಗೇನಾಗಬೇಕು?" ಎಂದು