ದಿನಕ್ಕೊಂದು ಕಥೆ 969
*🌻ದಿನಕ್ಕೊಂದು ಕಥೆ🌻* *ಸೋಲು ಬದುಕಿನ ಕೊನೆಯಲ್ಲ, ಅದು ಗೆಲುವಿನ ಮುನ್ನುಡಿ* ನಮ್ಮೆಲ್ಲರಿಗೂ ಇಂದು ಬೇಕಾಗಿರುವುದು ಸಮಸ್ಯೆಗಳಿಲ್ಲದ ಜೀವನ. ಅದು ಅಸಾಧ್ಯ ಎಂದು ಗೊತ್ತಿದ್ದರೂ ನಾವು ಸಮಸ್ಯೆಗಳನ್ನು ಇಷ್ಟಪಡುವುದಿಲ್ಲ. ಆದರೆ ಸಮಸ್ಯೆಗಳು ಮಾರುವೇಷದಲ್ಲಿ ಬರುವ ಅವಕಾಶಗಳು. ಕಡಿದು ಕೆತ್ತಲ್ಪಟ್ಟ ಕಲ್ಲೇ ವಿಗ್ರಹವಾಗುವುದೆಂಬ ಅರಿವಿದ್ದರೂ ನೋವೇ ಆಗದೇ ಮೂರ್ತಿಯಾಗಬೇಕೆಂದು ಬಯಸುವವರೇ ಜಾಸ್ತಿ. ಏಕೆಂದರೆ ಈ ಜಗತ್ತಿನಲ್ಲಿ ಸಮಸ್ಯೆಗಳೇ ಸಾಧನೆಗೆ ಮೂಲವೆಂಬುದರ ಅರಿವಿದ್ದರೂ ಹಳಹಳಿಸುವವರೇ ಹೆಚ್ಚು. ಸಮಸ್ಯೆ ದೊಡ್ಡದಾದಷ್ಟೂ ಪರಿಹಾರ ದೊಡ್ಡದಿರುತ್ತದೆ. ಪರಿಹಾರ ದೊಡ್ಡದಾದಷ್ಟೂ ನಾವು ಹರಿಸುವ ಬೆವರು, ಪಡುವ ಕಷ್ಟ ಹೆಚ್ಚಾಗಿರುತ್ತದೆ. ಹಿರಿದನ್ನು ಸಾಧಿಸುವ ಬಯಕೆಯಿದ್ದವರು ಏರಿಳಿತಗಳ ದುರ್ಗಮ ಹಾದಿಯಲ್ಲಿ ಸಾಗಲೇಬೇಕು. ಅಂದಾಗ ಮಾತ್ರ ಯಶಸ್ಸು ಕೂಡ ದೊಡ್ಡ ಪ್ರಮಾಣದಲ್ಲಿ ಸಿಗುತ್ತದೆ. ಆದರೆ ನಾವಿದನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಆದರೆ ನೆನಪಿರಲಿ, ತೊಂದರೆಗಳನ್ನು, ಕಷ್ಟಗಳನ್ನು ಅವಕಾಶ ಎಂದು ನೋಡಿದವರೇ ಇಂದು ಜಗತ್ತಿನಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿಲಿನ ಧಗೆಗೆ ‘ಅಬ್ಬಾ ದರಿದ್ರ ಬಿಸಿಲು’ ಎನ್ನದವರುಂಟೇ? ಆದರೆ ಕೂಲರ್, ಎಸಿ ಸಂಶೋಧಿಸಿ ಆ ಸಮಸ್ಯೆಗೆ ಯಾರೋ ಪರಿಹಾರ ಕಂಡುಹಿಡಿದರು. ಚಳಿಗಾಲವನ್ನು ಶಪಿಸುವವರು ಶಪಿಸುತ್ತಲೇ ಇದ್ದರು. ಆದರೆ ಯಾರೋ ಒಬ್ಬ ಹೀಟರ್ ಕಂಡುಹಿಡಿದ. ಸೊಳ್ಳೆಗಳು ಯಾರಿಗೆ ಸಮಸ್ಯೆಯಲ್ಲ? ಎಲ್ಲರೂ ಗೊಣಗುತ್ತಲ