ದಿನಕ್ಕೊಂದು ಕಥೆ 1101
*🌻ದಿನಕ್ಕೊಂದು ಕಥೆ🌻* *ಆಕಸ್ಮಿಕ* "ಅಮ್ಮಾ, ನಿಂದೆಲ್ಲಾ ಸಾಮಾನು ಪ್ಯಾಕ್ ಆಯ್ತಾ? ಲಗೂ ನಡಿ, ಮತ್ತ ಗಾಡಿ ತಪ್ಪಿದ್ರ ಸಮಸ್ಯೆ ಆಗ್ತದ" ಮಗ ರಾಜುನ ಧ್ವನಿ ಕೇಳಿ ಚೀಲದೊಂದಿಗೆ ಹೊರ ಬಂದ ಅಂಬುಜಮ್ಮ, " ನಾ ತಯಾರಾಗಿ ಭಾಳ ಹೊತ್ತಾತು. ನೀನೇ ಲಗೂ ಬರಲಿಲ್ಲ ನೋಡು". ಅಮ್ಮನ ಮಾತು ಕೇಳಿದ ಮಗ ,"ಆತು ನಡಿ ನಡಿ, ಆಟೋ ತಂದೀನಿ, ಹೋಗೂಣಂತ" ಅಂದ. ರಾಜು ತನ್ನ ಮತ್ತ ತನ್ನಮ್ಮನ ಚೀಲವನ್ನು ಹೊರಗಿಟ್ಟು ಮನೆ ಬಾಗಿಲು ಹಾಕಿ ಕೀಲಿ ಹಾಕಿ ಅಮ್ಮನ ಜೊತೆ ಆಟೋ ಹತ್ತಿದ. ಇನ್ನೂ ಐದು ನಿಮಿಷ ಇರುವಾಗಲೇ ರೈಲು ನಿಲ್ದಾಣಕ್ಕೆ ಬಂದ ಅಮ್ಮ ಮಗ ಅಲ್ಲೇ ಒಂದು ಜಾಗ ಹಿಡಿದು ಗಾಡಿಯ ಹಾದಿ ಕಾಯುತ್ತಾ ಕೂತರು. ಬೆವರು ಒರೆಸುತ್ತ ಅಂಬುಜಮ್ಮ ಮಗನ ಕಡೆ ಹೆಮ್ಮೆಯಿಂದ ನೋಡಿದರು. ತನ್ನ ಎಷ್ಟೋ ದಿನಗಳ ಕನಸು ನನಸು ಮಾಡಲು ಮಗ ತನ್ನನ್ನು ಕಾಶಿ ಯಾತ್ರೆಗೆ ಕರೆದುಕೊಂಡು ಹೊರಟಿದ್ದಾನೆ. ನಾನು ಎಷ್ಟು ಪುಣ್ಯವಂತಳು ಎಂದುಕೊಂಡು ಇಂಥಾ ಮುತ್ತಿನಂಥಾ ಮಗನನ್ನು ಕೊಟ್ಟ ದೇವರಿಗೆ ಮನದಲ್ಲೇ ಕೈ ಮುಗಿದರು. ಅಮ್ಮ ಮಗ ಇಬ್ಬರೂ ಪವಿತ್ರವಾದ ಕಾಶಿ ಕ್ಷೇತ್ರಕ್ಕೆ ಬಂದಿಳಿದರು. ಮೊದಲು ಛತ್ರಕ್ಕೆ ಹೋಗಿ ಕೈ ಕಾಲು ತೊಳೆದು ಗಂಗಾಸ್ನಾನಕ್ಕಾಗಿ ನದಿಗೆ ಬಂದರು. ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಿ ವಿಶ್ವನಾಥನ ದರ್ಶನಕ್ಕೆ ಬಂದರು. ಕಾಶಿಯಲ್ಲಿ ಇಳಿದಾಗಿನಿಂದ ತಾಯಿ ಮಗನ ಮುಖವನ್ನೇ ಪ್ರೀತಿಯಿಂದ ನೋಡುತ್ತಿದ್ದರೆ, ಮಗನ ವಿಚಾರ ಲಹರಿಯೇ ಬೇರೆಯಾಗಿತ್ತು