ದಿನಕ್ಕೊಂದು ಕಥೆ 1083
🌻 *ದಿನಕ್ಕೊಂದು ಕಥೆ* 🌻 *ಅರ್ಚಕನ ಬೆಲೆ* ಒಂದು ದಿನ ಒಂದು ಕೋರ್ಟಿನಲ್ಲಿ ಜಡ್ಜ್ ಮುಂದೆ ಒಂದು ಕೇಸ್ ಬಂದಿತ್ತು. ಒಬ್ಬ ಫಿರ್ಯಾದಿ ತಂದ ಕೇಸ್ ಹೀಗಿತ್ತು. ಒಬ್ಬ ಮಾಮೂಲಿ ಅರ್ಚಕ, ದೇವಸ್ಥಾನದಲ್ಲಿ ಮಂಗಳಾರತಿ ತಟ್ಟೆಯ ಪುಡಿಗಾಸಿನಿಂದ ಬದುಕುವವನು, ಸರ್ಕಾರಕ್ಕೆ ಯಾವುದೇ ತೆರಿಗೆ ಕಟ್ಟದೇ ಕೆಲವೇ ಸಮಯದಲ್ಲಿ ಶ್ರೀಮಂತನಾದ ಎಂದರೆ ಅವನು ಅಕ್ರಮ ರೀತಿಯಲ್ಲಿ ಧನಸಂಪಾದನೆ ಮಾಡಿರಬೇಕು. ಆದ್ದರಿಂದ ಆ ಅರ್ಚಕನ ಅಕ್ರಮ ಸಂಪಾದನೆಯ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಶಿಕ್ಷೆ ವಿಧಿಸಬೇಕೆಂದು ಪ್ರಾರ್ಥನೆ. ' ಜಡ್ಜ್ ಮೊದಲು ಆ ಅರ್ಚಕನನ್ನು ಪ್ರಶ್ನೆ ಮಾಡಿದರು "ನಿಮ್ಮ ಮೇಲೆ ಅಕ್ರಮ ಧನ ಸಂಪಾದನೆಯ ಆರೋಪವಿದೆ. ನಿಮ್ಮ ಸಂಪಾದನೆ ಸಕ್ರಮವೋ ಅಕ್ರಮವೋ ಸ್ಪಷ್ಟ ಪಡಿಸಿ" ಅರ್ಚಕರು ಹೇಳಿದರು "ಅಯ್ಯಾ, ನನ್ನ ಬಳಿಯಿರುವ ಧನವೆಲ್ಲಾ ಸಕ್ರಮವಾಗಿ ನನಗೆ ಬಂದಿದ್ದು". ಜಡ್ಜ್ ಸವಾಲು ಹಾಕಿದರು. "ಸಾಧಾರಣ ಅರ್ಚಕವೃತ್ತಿಯಿಂದ ಬದುಕುತ್ತಿರುವ ನೀವು ಗಳಿಸಿದ್ದೆಲ್ಲಾ ಸಕ್ರಮವಾಗಿ ಎಂದು ಹೇಗೆ ನಂಬುವುದು?" ಅರ್ಚಕರು ಹೇಳುತ್ತಾರೆ, "ಅಯ್ಯಾ, ಒಂದು ದಿನ ನಾನು ಊರಿನ ಕೆರೆಯಬಳಿ ಸಂಧ್ಯಾವಂದನೆಯಲ್ಲಿರುವಾಗ ಸಂಜೆಯ ಮಬ್ಬು ಬೆಳಕಿನಲ್ಲಿ ಯಾರೋ ಇಬ್ಬರು ಕೆರೆಯಂಚಿನಲ್ಲಿ ನಿಂತು ಅಳುವುದು ಕೇಳಿಸಿ ನಾನು ಅಲ್ಲಿಗೆ ಧಾವಿಸಿದೆ. ದಂಪತಿಗಳು ಇಬ್ಬರು ಕೆರೆಗೆ ಹಾರಿ ಆ