Posts

ದಿನಕ್ಕೊಂದು ಕಥೆ 1125

*🌻ದಿನಕ್ಕೊಂದು ಕಥೆ🌻*   *ಮಕ್ಕಳ ಮೇಲಿನ ವ್ಯಾಮೋಹ* *ಪತಿಯ ಜೊತೆ 46 ವರ್ಷದ ಸುಧೀರ್ಘ ದಾಂಪತ್ಯದಲ್ಲಿ, ಪತಿಯನ್ನು ಪ್ರೀತಿಸುತ್ತಿದ್ದರು, ಗೌರವಿಸುತಿದ್ದರು ಜೊತೆಗೆ 72 ವರ್ಷದ ಶಾರದಮ್ಮ ಕೆಲವು  ವಿಷಯಗಳ ಬಗ್ಗೆ ರಾಜಿ ಮಾಡಿಕೊಳ್ಳದೆ ಗಲಾಟೆ ಕೂಡಾ ಮಾಡುತಿದ್ದರು.*  *ಒಬ್ಬ ಮಗ ಒಬ್ಬ ಮಗಳು ಇಬ್ಬರೂ ಓದಿ ಲಂಡನ್ ಅಲ್ಲಿ ಸೆಟಲ್  ಆಗಿದ್ದರು. ಮಕ್ಕಳಿಗೆ ಎಷ್ಟೇ ಆಚಾರ ವಿಚಾರ ಕಲಿಸಿದರೂ ಅವರ ವಿದ್ಯೆಗನುಗುಣವಾದ ಕೆಲಸ ಹುಡುಕುತ್ತಾ ದೇಶ ಬಿಡುವುದು ಅನಿವಾರ್ಯವಾಗಿತ್ತು. ಮೊದ ಮೊದಲು ಮಕ್ಕಳು ಲಂಡನ್ ಅಲ್ಲಿರುವುದು ಪ್ರತಿಷ್ಠೆಯ ವಿಷಯವಾದರೆ ಇಗೀಗ ಎಲ್ಲೋ ಎಡವಿದ್ದೇವೆ ಎನ್ನುವ ಅರಿವಾಗುತ್ತಿತ್ತು ವೃದ್ಧ ದಂಪತಿಗಳಿಗೆ . ಮೊನ್ನೆ ಆಸ್ತಿಯ ವಿಷಯಕ್ಕೆ ಮನೆಯಲ್ಲಿ ದೊಡ್ಡ ಗಲಾಟೆಯೇ ಆಗಿತ್ತು. ಮಕ್ಕಳಿಬ್ಬರೂ 6 ಕೋಟಿಯ ಆಸ್ತಿ 2 ಪಾಲು ಮಾಡಿ ಇಬ್ಬರಿಗೆ ಕೊಡಿ, ಅಮ್ಮ ಮಗಳ ಮನೆಯಲ್ಲಿ ಅಪ್ಪ ಮಗನ ಮನೆಯಲ್ಲಿ  ಹಾಯಾಗಿ ಇರಬಹುದು ಎಂದಾಗ 80 ವರ್ಷದ ಅಪ್ಪ ಮರು ಮಾತಾಡದೆ  ಒಪ್ಪಿಕೊಂಡು ಬಿಟ್ಟರು. ಆದರೆ ಶಾರದಮ್ಮ ಒಪ್ಪಿರಲಿಲ್ಲ. ಆಸ್ತಿ 4 ಪಾಲು ಮಾಡಿ ಇಬ್ಬರೂ ಮಕ್ಕಳಿಗೆ ಒಂದೊಂದು ನಮ್ಮಿಬ್ಬರಿಗೆ ಒಂದೊಂದು ಇರಲಿ. ನಮ್ಮಿಬ್ಬರ ಕಾಲದ ಮೇಲೆ ಮಗ ಮಗಳಿಗೆ ವಿಲ್ ಬರೆದಿಡುವ ಎನ್ನುವುದು ಆಕೆಯ ವಾದವಾಗಿತ್ತು.* *ಇದಕ್ಕೆ ಗಂಡ ಒಪ್ಪಿರಲಿಲ್ಲ ನನಗೆ ನನ್ನ ಮಕ್ಕಳ ಮೇಲೆ ನಂಬಿಕೆ ಇದೇ ಹಾಗೇ ಹೀಗೇ ಎಂದು ಗಲಾಟೆ ಮಾಡಿದ್ದರು. ಮಕ್ಕಳೂ ವಿರೋಧ  ವ್ಯಕ್ತ ಪಡಿಸಿದ್ದರು.

ದಿನಕ್ಕೊಂದು ಕಥೆ 1124

*🌻ದಿನಕ್ಕೊಂದು ಕಥೆ🌻* *ಸದುಪಯೋಗದ ಬಗೆ* ಒಂದೂರಿನಲ್ಲಿ ಧರ್ಮ ದಾಸ ಎಂಬ ವ್ಯಕ್ತಿ ಇರುತ್ತಿದ್ದ. ಮಾತು ಬಹಳ ಸಿಹಿ ಮತ್ತು ಮಧುರವಾಗಿ ನುಡಿಯುತ್ತಿದ್ದರೂ ಕೂಡ ಬಹಳ ಜಿಪುಣ ಆಗಿದ್ದ.  ಜಿಪುಣ ಎಂದರೆ ಅಂತಿಂಥ ಜಿಪುಣನಲ್ಲ. ಜೇನಿನಲ್ಲಿ ನೊಣ ಬಿದ್ದರೂ ಆ ನೊಣಕ್ಕೆ ಅಂಟಿದ ಜೇನು ಸವಿದು  ನೊಣವನ್ನು ಬಿಟ್ಟು ಕೊಡುವ ಆಸಾಮಿ..! ಚಹದ  ಮಾತಿರಲಿ, ಒಂದು ಲೋಟ ನೀರು ಕೂಡ ಯಾರಿಗೂ ಕೇಳುತ್ತಿರಲಿಲ್ಲ. ಸಾಧುಸಂತ,  ಭಿಕ್ಷುಕರನ್ನು ನೋಡಿದರೆ ಆಯ್ತು, ಎಲ್ಲಿ ಯಾರು ಏನಾದರೂ ಕೇಳಿಬಿಡುತ್ತಾರೋ ಎಂದು  ತನ್ನ ಪ್ರಾಣ ಹಾರಿ ಹೋದ ಹಾಗೆ ಮಾಡುತ್ತಿದ್ದ. ಒಮ್ಮೆ ಅವನ ಬಾಗಿಲಿಗೆ ಒಬ್ಬ ಮಹಾತ್ಮರು ಬರುತ್ತಾರೆ. ಧರ್ಮದಾಸನಿಂದ ಒಂದು ರೊಟ್ಟಿಯನ್ನು ಕೇಳುತ್ತಾರೆ. ಮೊದಮೊದಲಂತೂ ಮಹಾತ್ಮರಿಗೆ ಏನನ್ನು ಕೊಡಲು ನಿರಾಕರಿಸಿದ್ಧ. ಆದರೆ ಮಹಾತ್ಮರು ನಿಂತೇ ಇರುವುದು ನೋಡಿ ಅರ್ಧ ರೊಟ್ಟಿಯನ್ನು ಕೊಡಲು ಬಂದ.  ಆಗ ಮಹಾತ್ಮರು ಹೇಳುತ್ತಾರೆ  "- ಈ ಅರ್ಧ ರೊಟ್ಟಿಯಿಂದ ಏನೂ ಆಗದು. ನಾನು ಹೊಟ್ಟೆ ತುಂಬಾ ಊಟ ಮಾಡುವೆ..!"   ಈ ಮಾತನ ಮೇಲೆ ಧರ್ಮದಾಸನು  "ಈ ಅರ್ಧ ರೊಟ್ಟಿ ಹೊರತಾಗಿ ನಾ ಏನೂ ಕೊಡಲಾರೆ"   ಎಂದು ಕಠೋರವಾಗಿ ನಿರಾಕರಿಸಿಬಿಟ್ಟ. ಅಂದು ರಾತ್ರಿ ಎಲ್ಲಾ ಹಸಿವೆ ನೀರಡಿಕೆಗಳಿಂದ ಧರ್ಮದಾಸನ ಬಾಗಿಲಲ್ಲಿ ಮೌನವಾಗಿ ಆ ಮಹಾತ್ಮರು ನಿಂತು ಬಿಟ್ಟರು. ಬೆಳಗ್ಗೆ ಎದ್ದ ತಕ್ಷಣ ಧರ್ಮದಾಸನು ತನ್ನ ಬಾಗಿಲಲ್ಲಿ ಆ ಮಹಾತ್ಮರು ನಿಂತೇ ಇರುವುದನ್ನು ನೋಡಿ  

ದಿನಕ್ಕೊಂದು ಕಥೆ 1123

*🌻ದಿನಕ್ಕೊಂದು ಕಥೆ🌻* *ನಮ್ಮದೇನಿದೆ*? ಒಬ್ಬ *ವ್ಯಕ್ತಿ* ಸಾಯುತ್ತಾನೆ ದೇಹದಿಂದ *ಆತ್ಮ* ಹೊರಬರುತ್ತದೆ ಸುತ್ತಲೂ ನೋಡಿದರೆ *ದೇವರು* ತನ್ನ ಕೈಯಲ್ಲಿ ಒಂದು ಪೆಟ್ಟಿಗೆಯೊಡನೆ ಬಂದು ನಿಂತಿರುತ್ತಾನೆ. ಸತ್ತಿರುವ *ವ್ಯಕ್ತಿ* ಮತ್ತು *ದೇವರ* ನಡುವೆ ಸಂಭಾಷಣೆ ಹೀಗೆ ಸಾಗುತ್ತದೆ. *ದೇವರು*- ಮಾನವ,ಇನ್ನು ಈ ಜನ್ಮ ಮುಗಿಯಿತು ನಡೆ ಹೋಗೋಣ *ಮಾನವ*-  ಅಯ್ಯೋ ಇಷ್ಟು ಬೇಗನೇ,, ನಾನು ಭವಿಷ್ಯದ ಬಗೆಗೆ ಎಷ್ಟೊ ಕನಸನ್ನು ಕಂಡಿದ್ದೆ. *ದೇವರು*-  ತಪ್ಪದು, ನೀನು ನನ್ನೊಡನೆ ಬರಲೇಬೇಕು ನಿನ್ನ ಸಮಯ ಮುಗಿದಿದೆ. *ಮಾನವ*-  ಸರಿ ಆ ಪೆಟ್ಟಿಗೆ ಕೊಡಿ ಏನು ತಂದಿರುವೆ ನೋಡುವೆ. *ದೇವರು*- ಅದರಲ್ಲಿ ನಿನಗೆ ಸಂಬಂದಿಸಿದ ವಸ್ತುಗಳೇ ಇರುವುದು. *ಮಾನವ*-  ನನ್ನವಾ, ಅಂದರೆ ನನ್ನ  *ಬಟ್ಟೆಗಳು, ದುಡ್ಡು ಕಾಸು, ಆಸ್ತಿ, ಭೂಮಿ ಪತ್ರಗಳು.* *ದೇವರು*-  ಅವು ಯಾವಾಗಲೂ ನಿನ್ನವಲ್ಲ ಅವೆಲ್ಲ *ಭೂಮಿ* ಯವೇ ಅಲ್ಲಿಯೇ ಇರುತ್ತವೆ. *ಮಾನವ*- ನನ್ನ ಜ್ಞಾಪಕಗಳಾ? *ದೇವರು*-  ಅಲ್ಲ ಜ್ಞಾಪಕಗಳು ಕಾಲಕ್ಕೆ ಸಂಬಂಧಿಸಿದುವು *ಕಾಲಗರ್ಭದಲ್ಲೇ* ಸೇರಿ ಹೋಗುತ್ತವೆ. *ಮಾನವ* - ನನ್ನ ಸ್ನೇಹಿತರಾ? *ದೇವರು*-  ಅವರು ನಿನ್ನ ಜೊತೆ ಕೇವಲ ಸ್ವಲ್ಪ ದೂರ ಬರುವ *ಪ್ರಯಾಣಿಕರಷ್ಟೇ* . *ಮಾನವ*- ನನ್ನ ಹೆಂಡತಿ ಮಕ್ಕಳಾ? *ದೇವರು*- ಅವರುಗಳು ನಿನ್ನ ಜೊತೆ ಕಲೆತು *ನಾಟಕದಲ್ಲಿ* ಪಾಲ್ಗೊಂಡ *ಪಾತ್ರಧಾರಿಗಳು* ಮಾತ್ರ.   *ಮಾನವ*- ಹಾಗಾದರೆ ಅದರಲ್ಲಿ ನನ್ನ *ಶರೀರವಿರಬಹುದಲ್ಲವೇ*? *ದೇವ

ದಿನಕ್ಕೊಂದು ಕಥೆ. 1122

*🌻ದಿನಕ್ಕೊಂದು ಕಥೆ🌻* *ವಿಶ್ವಾಸದ ಮೌಲ್ಯ* ನಂಬಿಕೆ ಮೇಲೆ ಜಗತ್ತು ನಿಂತಿದೆ. ಒಂದು ಹಳ್ಳಿಯಲ್ಲಿ ಒಬ್ಬ ರೈತ ವ್ಯವಸಾಯ ಮಾಡಿಕೊಂಡಿದ್ದ. ಹಸು ಕರು, ಎತ್ತು ಅವನ ಬಳಿ ಇದ್ದವು. ಬಳಕೆಗೆ ಬೇಕಾದ ನೀರನ್ನು ದೂರದ ಹಳ್ಳದಿಂದ ತರಬೇಕಿತ್ತು. ಅವನು ಒಂದು ಕೋಲಿಗೆ ಎರಡು ಹಗ್ಗವನ್ನು ನೆಲುವಿನಂತೆ ಕಟ್ಟಿ ನೀರು ತುಂಬಿಸಿ ನೀರು ತುಂಬಿದ ಎರಡು ಮಡಿಕೆ ಇಟ್ಟಿರುವ ಕೋಲನ್ನು ಎರಡೂ ಭುಜದ ಮೇಲಿಟ್ಟುಕೊಂಡು ತರುತ್ತಿದ್ದ. ಒಮ್ಮೆ ಅವನು ನೀರು ತರುತ್ತಿದ್ದಾಗ ಒಂದು ಮಡಿಕೆ ಮರಕ್ಕೆ ತಗಲಿ ಒಂದು ಕಡೆ ತೂತಾಯಿತು. ಆಗಿನಿಂದ ಎರಡು ಮಡಿಕೆ ತುಂಬಾ ನೀರು ತಂದರೆ ಅವನಿಗೆ ಒಂದೂವರೆ ಮಡಿಕೆ ನೀರು ಸಿಗುತ್ತಿತ್ತು. ಆದರೂ ರೈತ ಬೇಸರಿಸದೆ ಸಂತೋಷದಿಂದ ತರುತ್ತಿದ್ದ. ಹೀಗೆ ಒಂದು ವರ್ಷ ಕಳೆಯಿತು.  ಈ ಮಧ್ಯೆ ಚೆನ್ನಾಗಿದ್ದ ಮಡಿಕೆಗೆ ತನ್ನಿಂದ ರೈತನಿಗೆ ತುಂಬಾ ನೀರು ಸಿಗುತ್ತದೆ ಎಂದು ಜಂಬ ಬಂದಿತು, ಆದರೆ ಒಡೆದ ಮಡಿಕೆಗೆ, ನಿನ್ನಿಂದಾಗಿ ರೈತನಿಗೆ ಅರ್ಧ ಮಡಿಕೆ ಮಾತ್ರ ನೀರು ಸಿಗುತ್ತದೆ ಎಂದು ಬೇಸರ ಪಡುತ್ತಿತ್ತು. ಅದರ ನೋವನ್ನು ಮುಚ್ಚಿಟ್ಟು ಕೊಳ್ಳಲಾಗದೆ ಒಂದು ದಿನ ರೈತನ ಮುಂದೆ ನಿಂತು ತಲೆತಗ್ಗಿಸಿ ಹೇಳಿತು. ನನ್ನ ಮೇಲೆ ನನಗೆ ಜಿಗುಪ್ಸೆ ಬಂದಿದೆ ಅದಕ್ಕಾಗಿ ನಾನು ನಿನ್ನಲ್ಲಿ ಕ್ಷಮೆ ಕೇಳುತ್ತೇನೆ. ರೈತನು ಆಶ್ಚರ್ಯದಿಂದ ಯಾಕೆ ಕ್ಷಮೆ ಕೇಳುವೆ? ಯಾಕೆ ನಿನ್ನಿಂದ ಏನು ತಪ್ಪಾಗಿದೆ ಎಂದು ಕೇಳಿದ. ಮಡಿಕೆ ಹೇಳಿತು, ನೀನೊಬ್ಬ ಮುಗ್ದ ರೈತ ನಿನಗೆ ತಿ

ದಿನಕ್ಕೊಂದು ಕಥೆ 1121

*🌻ದಿನಕ್ಕೊಂದು ಕಥೆ🌻* *ಮಾಡಿದ ತಪ್ಪಿಗೆ, ಪಶ್ಚಾತಾಪವೇ, ಪ್ರಾಯಶ್ಚಿತ.*  ಬುದ್ಧರು ,ತಮ್ಮ ಮಾತು ,ಮತ್ತು ಒಳ್ಳೆಯ ನಡವಳಿಕೆಯಿಂದ  ಅಪಾರವಾದ ಶಿಷ್ಯ ವೃಂದವನ್ನು ಹೊಂದಿದ್ದರು. ಹಾಗಂತ ಅವರಿಗೆ ಯಾರೂ  ಶತ್ರುಗಳೇ ಇರಲಿಲ್ಲವೆಂದೇನಲ್ಲ, ಅವರ ಪ್ರಗತಿಯನ್ನು ಕಂಡು ಸಹಿಸಲಾಗದೇ, ಅಸೂಯೆ ಪಡುವಂತ ಅನೇಕ ಜನರೂ ಇದ್ದರು. ಅವರಲ್ಲಿ ದೇವ ದತ್ತ ಕೂಡ ಒಬ್ಬ. ಇವನು ಬುದ್ಧರ  ಸಂಬಂಧಿ ,ಹಾಗೂ ಶಿಷ್ಯ ಕೂಡಾ. ಬಾಲ್ಯದಿಂದಲೇ ಬುದ್ದನ ಜೊತೆಗೆ ಬೆಳೆದ ಇವನಲ್ಲಿ, ಬುದ್ಧನನ್ನು ಕಂಡರೆ ಒಳಗೊಳಗೆ ದ್ವೇಷ ,ಸಿಟ್ಟು, ಹೊಟ್ಟೆಕಿಚ್ಚು.ಅದು ದಿನದಿನವೂ ಜಾಸ್ತಿಯಾಗುತ್ತಲೇ ಹೋಯಿತು. ಬುದ್ಧರು ಕಟ್ಟಿದ ಸಂಘಕ್ಕೆ ಅವರನ್ನು ಸರಿಸಿ ತಾನೇ ಅಧಿಪತಿಯಾಗಬೇಕೆಂಬ ಆಸೆ ಕೂಡ ಇವನಲ್ಲಿ ಬಲವಾಗಿತ್ತು.       ‌ ಒಂದು ದಿನ ಸಭೆಯಲ್ಲಿ ಎಲ್ಲರೆದುರಿನಲ್ಲೇ ಈತ  ,ಬುದ್ಧರನ್ನು ಉದ್ದೇಶಿಸಿ, ನಿಮಗೆ ವಯಸ್ಸಾಗುತ್ತಿದೆ, ತಾವು ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ, ನಾನು  ನಿಮ್ಮ ಸ್ಥಾನವನ್ನು ನಿಭಾಯಿಸುತ್ತೇನೆ ಎಂದು ಹೇಳಿದ.    ಇವನ ಮಾತಿನಂತೆ, ತಾವೇನಾದರೂ  ವಿಶ್ರಾಂತಿಗೆ ಸರಿದು,ತಮ್ಮ ಸ್ಥಾನವನ್ನು ಇವನಿಗೆ  ಕೊಟ್ಟರೆ, ತಾವು ಕಷ್ಟಪಟ್ಟು ಕಟ್ಟಿದ ಸತ್ಸಂಗವು ನಾಶವಾಗುತ್ತದೆ ಎಂಬುದು ಬುದ್ದರಿಗೆ ತಿಳಿದಿತ್ತು. ಹಾಗಾಗಿ ಅವರು ಬಹಳ ನಾಜೂಕಿನಿಂದ ತಿರಸ್ಕರಿಸಿದರು.  ಇದರಿಂದ ಕೋಪಗೊಂಡ ದೇವದತ್ತ, ಬುದ್ಧರನ್ನು ಮುಗಿಸಿ ಬಿಡುವ ಹುನ್ನಾರ ನೆಡೆಸಿದ. ಬಿಂಬಸಾರನ ಮಗನಾದ ಅಜಾತಶತ್ರು

ದಿನಕ್ಕೊಂದು ಕಥೆ 1120

*🌻ದಿನಕ್ಕೊಂದು ಕಥೆ🌻* *ಭಾರತದ ಆಧ್ಯಾತ್ಮಿಕ ಶಕ್ತಿ.* ಇಡೀ ಪ್ರಪಂಚವನ್ನೇ ಗೆಲ್ಲಬೇಕೆಂಬ ಉದ್ದೇಶದಿಂದ, ಅಲೆಕ್ಸಾಂಡರ್ ತನ್ನ ಅಪಾರವಾದ ಸೈನ್ಯದೊಂದಿಗೆ ಹೊರಟ. ಎಷ್ಟೋ ದೇಶಗಳು ಇವನಿಗೆ ಶರಣಾದವು, ಇದರಿಂದ ಬರುಬರುತ್ತಾ  ಇವನಿಗೆ ಅಹಂಕಾರ ಹೆಚ್ಚಾಗುತ್ತಾ ಹೋಯಿತು.       ಈ ಬಾರಿ ಭಾರತದ ಮೇಲೆ ದಾಳಿ ಮಾಡಬೇಕೆಂದುಕೊಂಡು ಹೊರಟ. ಹೊರಡುವಾಗ ಒಮ್ಮೆ ತನ್ನ ಗುರು ಅರಿಸ್ಟಾಟಲ್ ನನ್ನು ಭೇಟಿಯಾಗಲು ಬಂದ. ಅರಿಸ್ಟಾಟಲ್ ಮಹಾಜ್ಞಾನಿ, ಅವನಿಗೆ ಭಾರತದ ಆಧ್ಯಾತ್ಮಿಕ ಶಕ್ತಿಯ ಬಗ್ಗೆ ಪರಿಚಯವಿತ್ತು. ಅಲೆಕ್ಸಾಂಡರ್ ಗುರುಗಳೇ, ನಾನು ಭಾರತದ ಮೇಲೆ ದಾಳಿ ಮಾಡಲು ಹೋಗುತ್ತಿದ್ದೇನೆ, ಬರುವಾಗ ನಿಮಗೆ ಅಲ್ಲಿಂದ ಏನನ್ನು ತರಲಿ? ಎಂದು ಕೇಳಿದ.    ಆಗ ಅರಿಸ್ಟಾಟಲ್ ನಗುತ್ತಾ, ಭಾರತವನ್ನು ಗೆಲ್ಲಬೇಕೆಂಬ ಆಸೆ ನಿನಗೇಕೆ? ಆ ದೇಶವನ್ನು ಗೆಲ್ಲುವುದು ಅಷ್ಟು ಸುಲಭವಲ್ಲ, ನೀನು ಕೆಲವು ರಾಜರುಗಳನ್ನು ಗೆಲ್ಲಬಹುದು, ಒಂದಿಷ್ಟು ಸಂಪತ್ತನ್ನೂ ಪಡೆಯಬಹುದು, ಆದರೆ ಅದ್ಯಾವುದೂ ಭಾರತವಲ್ಲ. ಭಾರತದ ನಿಜವಾದ ಶಕ್ತಿ ಇರುವುದು ಆಧ್ಯಾತ್ಮದಲ್ಲಿ, ನಿನಗೆ ಸಾಧ್ಯವಾದರೆ ಭಾರತದಿಂದ ಒಬ್ಬ ಋಷಿಯನ್ನೊ, ಅಥವಾ ಒಬ್ಬ ಸಾಧಕರನ್ನೊ ಕರೆದು ತಾ ,ಅದರಿಂದ ಎಲ್ಲರಿಗೂ ಪ್ರಯೋಜನವಿದೆ ಎಂದು ಹೇಳಿದರು.    ಅಲೆಕ್ಸಾಂಡರ್ ಗುರುಗಳಿಗೆ ನಮಸ್ಕರಿಸಿ,ಅಲ್ಲಿಂದ ಹೊರಟು, ತನ್ನ ಯುದ್ಧ ಯಾತ್ರೆಯನ್ನು ಆರಂಭಿಸಿದ. ತನ್ನ ಕಡೆಯವರಿಗೆ, ಗುರುಗಳು  ಹೇಳಿದಂತ ದಾರ್ಶನಿಕರನ್ನು ಹುಡುಕಲು ಹೇಳಿದ. ಒಂದು ದ

ದಿನಕ್ಕೊಂದು ಕಥೆ 1119

*🌻ದಿನಕ್ಕೊಂದು ಕಥೆ🌻* *ಒಂದೊಂದೇ ಹೆಜ್ಜೆ*     ಒಂದು ಹಳ್ಳಿಯ ತಪ್ಪಲಲ್ಲಿ ಒಂದು ಸುಂದರವಾದ ಬೆಟ್ಟ. ಆ ಬೆಟ್ಟದ ಮೇಲೊಂದು ದೇವಸ್ಥಾನ. ಆ ಹಳ್ಳಿಯ ಜನರಿಗೆ ಆ ಬೆಟ್ಟ ಹತ್ತು ಮೈಲಿ ದೂರದಿಂದಲೇ ಕಾಣುತ್ತಿತ್ತು. ಆ ಬೆಟ್ಟ ನೋಡಲೆಂದು ಬಹಳ ದೂರ ದೂರದಿಂದ  ಜನ ಬರುತ್ತಿದ್ದರು. ಅದನ್ನು ನೋಡಿ ಅದೇ ಹಳ್ಳಿಯಲ್ಲಿದ್ದ  ಒಬ್ಬ ಯುವಕ, ತಾನು  ಒಮ್ಮೆಯೂ ,ಆ ಬೆಟ್ಟ ಹತ್ತುವ ಪ್ರಯತ್ನವನ್ನೇ  ಮಾಡಿಲ್ಲವಲ್ಲಾ, ಎಂದುಕೊಂಡು,  ತಾನೂ  ಒಮ್ಮೆ ಆ ಬೆಟ್ಟಕ್ಕೆ ಹೋಗಿ ಬರಬೇಕು ಎಂದುಕೊಂಡ. ಆದರೆ ಇಲ್ಲೇ ಹತ್ತಿರವಿದೆಯಲ್ಲಾ  ಯಾವಾಗಲಾದರೂ ಹೋದರಾಯಿತು, ಎಂದು  ಹಾಗೇ ಮುಂದೂಡುತ್ತಿದ್ದ.     ಆದರೆ ಒಂದು ದಿನ ಅವನಿಗೆ, ತಾನು ಎಷ್ಟು ದಿನವೆಂದು  ಹೀಗೇ ಮುಂದೂಡುತ್ತಿರುವುದು? , ಏನಾದರೂ ಆಗಲಿ, ಈ ರಾತ್ರಿ ನಾನು ಹೋಗಲೇ‌ಬೇಕೆಂದು ನಿರ್ಧರಿಸಿದ. ಬೆಳಕು ಹರಿದ ಮೇಲೆ ಬಿಸಿಲಿನ ತಾಪ ಹೆಚ್ಚಾಗುವುದೆಂದು,  ಆತ ರಾತ್ರಿ ಎರಡು ಗಂಟೆಯ ಸಮಯದಲ್ಲಿ ಎದ್ದು, ತನ್ನ ಬಳಿ ಇದ್ದ ಲ್ಯಾಟಿನ್ ಹಚ್ಚಿಕೊಂಡು , ಬೆಟ್ಟದ ಬುಡಕ್ಕೆ ಬಂದು ತಲುಪಿದ. ಬಹಳ ಕತ್ತಲೆ ಇತ್ತು .ಅದನ್ನು ಕಂಡು ಅವನಿಗೆ  ಬೆಟ್ಟ ಹತ್ತಲು ಹೆದರಿಕೆಯಾಯಿತು. ಅವನ ಮನದಲ್ಲಿ ಅನೇಕ ಚಿಂತೆಗಳು ಕಾಡ ತೊಡಗಿದವು. ತನ್ನ ಬಳಿ ಇರುವುದು ಪುಟ್ಟ ದೀಪ, ಎರಡು ಮೂರು ಹೆಜ್ಜೆಯಷ್ಟು ದೂರಕ್ಕೆ ಮಾತ್ರ ಇದರ ಬೆಳಕು ಬೀಳುವುದು, ಬೆಟ್ಟ ಹತ್ತಿ ತಲುಪಲು ಹತ್ತು ಮೈಲಿ ದೂರ ನಡೆಯಬೇಕು, ನನ್ನ ಬಳಿ ಇರುವ ಚಿಕ್ಕ ಬೆಳಕಿನಿಂದ ಅಷ್ಟು

ದಿನಕ್ಕೊಂದು ಕಥೆ 1118

*🌻ದಿನಕ್ಕೊಂದು ಕಥೆ🌻* ಒಂದು ಹಳ್ಳಿಯಲ್ಲಿ ಒಬ್ಬ  ಪ್ರಖ್ಯಾತ ವಿದ್ವಾಂಸನಿದ್ದ. ಅವನು ಒಳ್ಳೆ ವಾಗ್ಮಿಯಾಗಿದ್ದು,ಅವನ ಪ್ರವಚನ ಕೇಳಲು ಸಾವಿರಾರು ಜನ ಕದಲದೆ ಕೂತು ಕೇಳುತ್ತಿದ್ದರು. ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಅವರ ಖ್ಯಾತಿ ಹರಡಿತ್ತು. ಒಮ್ಮೆ ಅವರು ಪ್ರವಚನಕ್ಕಾಗಿ ಪಕ್ಕದೂರಿಗೆ ಹೋಗಬೇಕಿತ್ತು. ಆ ಊರಿಗೆ ಹೋಗುವ ಬಸ್ಸು ಹತ್ತಿ ಟಿಕೆಟ್ ತೆಗೆದುಕೊಂಡರು. ಗಡಿಬಿಡಿಯಲ್ಲಿ  ಬಸ್ ಕಂಡಕ್ಟರ್ ಚಿಲ್ಲರೆ ವಾಪಾಸ್ ಕೊಡುವಾಗ 10 ರೂಪಾಯಿ ಹೆಚ್ಚು ಕೊಟ್ಟುಬಿಟ್ಟ. ಅದನ್ನು ಗಮನಿಸಿದ  ಆ ವಿದ್ವಾಂಸ ಅದನ್ನು ಹಿಂದಿರುಗಿಸಲು ಯೋಚಿಸಿದರು. ಆದರೆ ಬಸ್ಸು ತುಂಬಾ ಜನರಿಂದ ತುಂಬಿತ್ತು. ಇಳಿಯುವಾಗ ಕೊಟ್ಟರಾಯಿತು ಎಂದುಕೊಂಡು  ಕುಳಿತರು. ಸ್ವಲ್ಪ ಸಮಯದ ನಂತರ ಅವನ ಮನಸ್ಸು ಬದಲಾಯಿತು.,, --ಆ ಕಂಡಕ್ಟರ್ ಕೂಡ ಎಷ್ಟೋ ಜನರ ಬಳಿ ಸರಿಯಾದ ಚಿಲ್ಲರೆ ಕೊಡದೆ ತಾನೇ ಹೊಡೆದಿರ ಬಹುದಲ್ಲಾ!!. ಈ ಬಸ್ಸು ಕೂಡ ಒಂದು ಕಂಪನಿಯದೇ!  ಎಷ್ಟು ಜನರು  ಈ ಕಂಪನಿಗೆ ಮೋಸ ಮಾಡಿ ದುಡ್ಡು ತಿನ್ನುವುದಿಲ್ಲ!? ನನ್ನ ಹತ್ತು ರೂಪಾಯಿಯಿಂದ ಆಗುವ ನಷ್ಟವೇನು? ಈ ಹತ್ತು ರೂಪಾಯಿಗಳನ್ನು ಯಾವುದಾದರೂ ದೈವಿಕ ಕಾರ್ಯಕ್ಕೆ ಬಳಸಿದರಾಯಿತು...' ಹೀಗೆ ಯೋಚಿಸಿ ಸುಮ್ಮನೆ ಕುಳಿತನು. ಅಷ್ಟರಲ್ಲಿ ಊರು ಬಂತು.... ಬಸ್ಸು ನಿಂತಿತು. ಬಸ್ಸಿನಿಂದ ಕೆಳಗಿಳಿಯುವಾಗ ಬಸ್ ಕಂಡಕ್ಟರ್ ಹತ್ತಿರ ಬರುತ್ತಿದ್ದಂತೆ ಅನೈಚ್ಛಿಕವಾಗಿ ಆ ಕಂಡಕ್ಟರ್ಗೆ --ನೀವು ಚಿಲ್ಲರೆ ವಾಪಸ್ ಕೊಡುವಾಗ ಹತ್ತು ರೂಪ

ದಿನಕ್ಕೊಂದು ಕಥೆ 1117

*🌻ದಿನಕ್ಕೊಂದು ಕಥೆ🌻* *ಹುಲ್ಲು ಕಡ್ಡಿಯ ಆಸರೆ...* ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಸರೆಯಾಗುವುದಂತೆ, ಅದು ಹೇಗೆ ಸಾಧಾರಣ ಹುಲ್ಲು ಮುಳುಗುತ್ತಿರುವವನ ಕಾಪಾಡುವುದು ಎಂದು ಹಲವು ಬಾರಿ ನಾನು ಯೋಚಿಸಿದ್ದಿದೆ. ಅಜ್ಜಿ ಕತೆ ಹೇಳುವಾಗಲೆಲ್ಲ ಈ ಒಂದು ವಾಕ್ಯವನ್ನು ನಿಯಮಿತವಾಗಿ ಹೇಳುತ್ತಲೇ ಇದ್ದರು.  ನನಗೊ ಈ ಮಾತೇ ವಿಚಿತ್ರವಾಗಿ ತೋರುತ್ತಿತ್ತು, ಒಂದು ದಿನ ಅಜ್ಜಿಯನ್ನು ನೇರವಾಗಿ ಕೇಳಿದೆ ಹುಲ್ಲು ಹೇಗೆ ಪ್ರವಾಹದಲ್ಲಿ ಕೊಚ್ಚಿ ಹೋಗುವಾಗ ಆಸರೆ ಕೊಡಲು ಸಾಧ್ಯ ? ಮನುಷ್ಯ ಸುಲಭವಾಗಿ ಹುಲ್ಲನ್ನು ಕೀಳಬಲ್ಲವನು. ಅಂತಹವನಿಗೆ ಹುಲ್ಲು ಅದೂ ಪ್ರವಾಹದಲ್ಲಿ ಆಸರೆಯಾಗುವುದೆ ?  ಅಜ್ಜಿ ನಕ್ಕು,  " ನಿನಗೆ ಇದು ನಿಜವಾಗಿಯೂ ಅನುಭವಕ್ಕೆ ಬಂದಾಗ ಇದರ ಒಳಾರ್ಥ ತಿಳಿಯುವುದು " ಎಂದು ಮಾರ್ಮಿಕವಾಗಿ ನುಡಿದಿದ್ದರು.  ಬೆಳೆಯುತ್ತ ಹೋದಂತೆ ನನಗೆ ಈ ವಾಕ್ಯ ಬಹಳ ಯೊಚನೆಗೀಡು ಮಾಡಿತ್ತು. ಕಾಲೇಜು ಡಿಗ್ರಿ ಎಂದು ಎಲ್ಲ ಮುಗಿಸುವ ಹೊತ್ತಿಗೆ ಅದನ್ನು ಮರೆತಿದ್ದೆ, ಕತೆ ಹೇಳುತ್ತಿದ್ದ ಅಜ್ಜಿ ಈಗ ಇಲ್ಲ. ಆದರೂ ಅವರು ಹೇಳಿದ ಎಲ್ಲ ವಾಕ್ಯಗಳು ನನಗೆ ಇನ್ನೂ ನೆನಪಿನಲ್ಲಿ ಉಳಿದಿವೆ.  ನಾನು ದೊಡ್ಡ ಹೋಟೆಲೊಂದರ ಮಾಲೀಕನಾಗುವ ಕನಸು ಕಂಡಿದ್ದರಿಂದ ಅದನ್ನು ಆರಂಭಿಸಿದೆ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು, ಹೋಟೆಲ್ ಮ್ಯಾನೇಜ್ ಮೆಂಟ್ ಕಲಿತಿದ್ದರಿಂದ ಮತ್ತು ಕುಕ್ಕಿಂಗ್ ನ ಕೆಲ ಕೋರ್ಸುಗಳು ನನಗೆ ಸಹಾಯಕವಾಗಿದ್ದವು.  ನನ್ನ ಕೈಯಡುಗೆ ಎಲ್ಲರಿಗೂ ಮೆಚ

ದಿನಕ್ಕೊಂದು ಕಥೆ 1116

*🌻ದಿನಕ್ಕೊಂದು ಕಥೆ🌻*   *ಹೊಸ ಅಧ್ಯಾಯ* " ಅಮ್ಮಾ, ಅಲ್ಲಮ್ಮಾ..ಎರಡು ತಿಂಗಳುಗಳ ಹಿಂದೆಯೇ ನಿನ್ನ ಔಷಧಿ ಗುಳಿಗೆಗಳು ಖಾಲಿಯಾಗಿತ್ತಲ್ಲವಾ? ನಿನ್ನ ಅಡ್ರೆಸ್ಸ್ ಗೆ ಕಳಿಸಿಕೊಡುತ್ತೇನೆ ಎಂದರೂ ಯಾಕೆ ಬೇಡಾ ಅಂದೆ. ಅಪ್ಪ ಏನಾದರೂ ಆ ಔಷಧಿ ತೆಗೆದುಕೊಳ್ಳುವುದಕ್ಕೂ ಅಡ್ಡಗಾಲು ಹಾಕಿದ್ರಾ? ನಿನ್ನ ಹಣೆಬರಹವೋ, ದುರಾದೃಷ್ಟವೋ ಒಂದೂ ನನಗೆ ಅರ್ಥವಾಗುತ್ತಿಲ್ಲ. ನಾನಿಲ್ಲಿ ಎಷ್ಟೇ ಚೆನ್ನಾಗಿದ್ದರೂ ನಿನ್ನನ್ನು ನೆನಪಿಸಿಕೊಂಡಾಗ ಕೆಲವೊಮ್ಮೆ ನಾನೂ ಡಿಸ್ಟರ್ಬ್ ಆಗಿಬಿಡುತ್ತೇನೆ. ಅಮ್ಮಾ..ಮುಂದಿನ ತಿಂಗಳು ಎರಡು ವಾರ ನಾನು ರಜ ಹಾಕಿದ್ದೇನೆ. ಒಂದು ವಾರ ಅತ್ತೆ ಮಾವನ ಜೊತೆಗೆ ಇದ್ದು ಬರುತ್ತೇನೆ. ಇನ್ನೊಂದು ವಾರ ನಿನ್ನ ಹಾಗೂ ಅಪ್ಪನ ಜೊತೆಯಲ್ಲಿ ಇರಬೇಕೆಂದು ಅಂದುಕೊಂಡಿದ್ದೇನೆ." " ತುಂಬಾ ಖುಷಿಯಾಯಿತು ಮಧು. ನನಗೂ ನಿನ್ನ ಜೊತೆ ನಾಲ್ಕಾರು ದಿವಸಗಳು ಸಮಯ ಕಳೆಯಬೇಕೆಂಬ ಆಸೆಯಿದೆ. " ಸಂತಸದಿಂದ ನುಡಿದರು ಅಮ್ಮ ವತ್ಸಲಾ. ವತ್ಸಲಾ ಹಾಗೂ ಮಾಧವ ದಂಪತಿಗೆ ಇರುವುದು ಒಬ್ಬಳೇ ಮಗಳು ಮಧು. ಮದುವೆಯಾಗಿ ದೂರದ ಊರಿನಲ್ಲಿ ಗಂಡನ ಜೊತೆಗೆ ಹಾಯಾಗಿದ್ದಾಳೆ. ವತ್ಸಲಾ ಮಾತ್ರ ಇತ್ತೀಚಿನ ವರ್ಷಗಳಲ್ಲಿ ಡಿಪ್ರೆಶನ್ ದಿಂದ ಒದ್ದಾಡುತ್ತಿದ್ದಾಳೆ. ಪತಿ ಮಾಧವ ಸಭ್ಯಸ್ಥನೇನೋ ನಿಜ. ಆದರೆ ಜೀವನದುದ್ದಕ್ಕೂ ತನ್ನದೇ ಆದ ಕೆಲವು ಗುಣಗಳನ್ನು ಬೆಳೆಸಿಕೊಂಡಿದ್ದ. ತಾನು ಹೇಳಿದಂತೆ ನಡೆಯಬೇಕು, ಎಲ್ಲವೂ ತನ್ನ ನೇರದಲ್ಲೇ ಇರಬೇಕು...ಈ ತರಹದ ಸ್ವಭಾವದವನು

ದಿನಕ್ಕೊಂದು ಕಥೆ 1115

*🌻ದಿನಕ್ಕೊಂದು ಕಥೆ🌻* *ಮುಚ್ಚಿ_ಹೋದ_ನಮ್ಮ_ದೇಶ_ಪ್ರೇಮಿಗಳ_ಇತಿಹಾಸದ ಪುಟಗಳಲ್ಲಿ ಈ ಹೆಸರುಗಳು ಎಲ್ಲಿವೆ?* ಸೇಠ್_ರಾಮದಾಸ್_ಜಿ_ಗುಡವಾಲೆ ಮಹಾನ್ ಕ್ರಾಂತಿಕಾರಿ, 1857 ರ ದಾನಿ, ಗಲ್ಲಿಗೇರಿಸುವ ಮೊದಲು, ಬ್ರಿಟಿಷರು ಅವನ ದೇಹವನ್ನು ಜೀವಂತವಾಗಿರುವಾಗಲೆ ಕಚ್ಚುವ ಬೇಟೆಗಾರ ನಾಯಿಗಳನ್ನು ಅವನ ಮೇಲೆ ಬಿಟ್ಟರು. ಸೇಠ್ ರಾಮದಾಸ್ ಜಿ ಗುಡ್ವಾಲಾ ಅವರು ದೆಹಲಿಯ ಬಿಲಿಯನೇರ್ ಸೇಠ್ ಮತ್ತು ಬ್ಯಾಂಕರ್ ಆಗಿದ್ದರು. ಅವರು ದೆಹಲಿಯ ಅಗರ್ವಾಲ್ ಕುಟುಂಬದಲ್ಲಿ ಜನಿಸಿದರು. ಅವರ ಕುಟುಂಬ ದೆಹಲಿಯಲ್ಲಿ ಮೊದಲ ಬಟ್ಟೆ ಗಿರಣಿಯನ್ನು ಸ್ಥಾಪಿಸಿತು. "ರಾಮದಾಸ್ ಜಿ ಗುಡ್ವಾಲೆ ಅವರ ಬಳಿ ತುಂಬಾ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿವೆ, ಅವರು ತಮ್ಮ ಗೋಡೆಗಳಿಂದ ಗಂಗಾ ನದಿಯ ನೀರನ್ನು ಸಹ ನಿಲ್ಲಿಸುತ್ತಾರೆ" ಎಂದು ಅವರ ಸಂಪತ್ತಿನ ಗಾದೆ ಇತ್ತು. 1857 ರಲ್ಲಿ ಮೀರತ್‌ನಿಂದ ಕ್ರಾಂತಿಯ ಕಿಡಿ ದೆಹಲಿಯನ್ನು ತಲುಪಿದಾಗ. ದೆಹಲಿಯಿಂದ ಬ್ರಿಟಿಷರನ್ನು ಸೋಲಿಸಿದ ನಂತರ, ಅನೇಕ ರಾಜ ಸಂಸ್ಥಾನಗಳ ಭಾರತೀಯ ಸೇನೆಗಳು ದೆಹಲಿಯಲ್ಲಿ ಬೀಡುಬಿಟ್ಟವು. ಅವರ ಆಹಾರ ಮತ್ತು ಸಂಬಳದ ಸಮಸ್ಯೆ ಉದ್ಭವಿಸಿತು. ರಾಮಜೀದಾಸ್ ಗುಡ್ವಾಲೆ ಚಕ್ರವರ್ತಿಯ ಆತ್ಮೀಯ ಸ್ನೇಹಿತ. ರಾಮದಾಸ್ ಜೀ ರಾಜನ ಈ ಸ್ಥಿತಿಯನ್ನು ನೋಡಲಾಗಲಿಲ್ಲ. ತನ್ನ ಕೋಟಿಗಟ್ಟಲೆ ಆಸ್ತಿಯನ್ನು ರಾಜನಿಗೆ ಒಪ್ಪಿಸಿ ಹೇಳಿದ ಅತ್ಯಮೂಲ್ಯ ವಾದ ಮಾತು “ಮಾತೃಭೂಮಿಯನ್ನು ರಕ್ಷಿಸಿದರೆ ಮತ್ತೆ ಹಣ ಗಳಿಸಿಕೊಳ್ಳಬಹುದು ಎಂದು ರಾಮಜಿದ

ದಿನಕ್ಕೊಂದು ಕಥೆ 1114

*🌻ದಿನಕ್ಕೊಂದು ಕಥೆ🌻*          *ಅಪ್ಪ*     " ಅಣ್ಣಾ.... ಅಪ್ಪನಿಗೆ ತುಂಬಾ ಹುಷಾರಿಲ್ಲ ಅದಕ್ಕೇ ಅವರನ್ನು ಸಿಟಿ ಗೆ ಕರೆದುಕೊಂಡು ಬಂದು ಇಲ್ಲಿನ ಕಾವೇರಿ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೇನೆ ಬೇಗ ಬಾ...."ಎಂದು ಅವಿನಾಶ್ ನ ತಮ್ಮ ಕಿರಣ್ ಫೋನ್ ಮಾಡಿದ್ದ. ತಮ್ಮನೊಂದಿಗೆ  ಫೂನ್ ನಲ್ಲಿ ಮಾತು ಮುಗಿಸುತ್ತಿದ್ದಂತೆ, ಅಡುಗೆ ಮನೆಯಲ್ಲಿ ಇದ್ದ ಆತನ ಪತ್ನಿ ಮಾನಸಿ ಈಚೆಗೆ ಬಂದು -" ಯಾರದು ಫೋನ್.. ಅಷ್ಟೊತ್ತಿಂದ ಮಾತಾಡ್ತಾ ಇದ್ರೀ"ಎಂದು ಕೇಳಿದಾಗ ಅವಿನಾಶ್ -" ಕಿರಣ್ ಮಾಡಿದ್ದಾ... ಅದರಲ್ಲಿ ಅಪ್ಪನಿಗೆ ತುಂಬಾ ಹುಷಾರಿರಲಿಲ್ಲವಂತೆ ಅದಕ್ಕೆ ಅವರನ್ನು ಕರೆದುಕೊಂಡು ಬಂದು ಇಲ್ಲಿನ ಕಾವೇರಿ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರಂತೆ.. ಬಂದು ಭೇಟಿ ಆಗು" ಎಂದು ಹೇಳಿದ್ದ "ಎಂದು ಆತ ಮಾತು ಮುಗಿಸಿ ರಲಿಲ್ಲ ಅಷ್ಟರಲ್ಲೇ ಮಾನಸಿ ತುಸು ಕೋಪದಿಂದ" ಹುಷಾರಿಲ್ಲ ಅಂದ ಮೇಲೆ ಯಾವುದಾದರೂ ಸರ್ಕಾರಿ ಆಸ್ಪತ್ರೆಗೆ ಅಡ್ಮಿಟ್ ಮಾಡಬೇಕಿತ್ತು ಈ ದುಬಾರಿ ಪ್ರೈವೇಟ್ ಆಸ್ಪತ್ರೆಗೆ ಹೋಗುವ ಅವಶ್ಯಕತೆ ಏನಿತ್ತು?"... ಅದೂ ಅಲ್ಲದೆ ಊರಲ್ಲಿ ಅಷ್ಟೊಂದು ಜನ  ಆಯುರ್ವೇದ ಡಾಕ್ಟ್ರು  ಹಕೀಮ್ ರು ಇದ್ರಲ್ಲ ಅವರಿಗೇ ತೋರಿಸಬೇಕಾಗಿತ್ತು." ಎಂದಾಗ ಅವಿನಾಶ್  "ಏನೋ ಆರೋಗ್ಯ ತುಂಬಾ ಕೆಟ್ಟಿತ್ತು ಅನ್ಸತ್ತೆ ಅದಕ್ಕೆ ಈ ಆಸ್ಪತ್ರೆ ಗೆ ಅಡ್ಮಿಟ್ ಮಾಡಿದ್ದಾರೆ " ಎನ್ನುತ್ತಾನೆ. ಅದಕ್ಕೆ ಪ್ರತಿಯಾಗಿ ಮಾ

ದಿನಕ್ಕೊಂದು ಕಥೆ 1113

*🌻ದಿನಕ್ಕೊಂದು ಕಥೆ🌻* *ಅಧಿಕಾರ ನಿರ್ವಹಣೆ.* ಒಬ್ಬ ರಾಜ ತನ್ನ ಸೈನ್ಯದೊಂದಿಗೆ ಬೇಟೆಯಾಡಲೆಂದು  ಕಾಡಿಗೆ ಬಂದ. ಬೇಸಿಗೆಯ ಕಾಲವಾದ್ದರಿಂದ  ಇಡೀ ಕಾಡು ಒಣಗಿ ಹೋಗಿತ್ತು. ಅಲ್ಲೊಬ್ಬ ಸನ್ಯಾಸಿ, ಮರ-ಗಿಡಗಳ ಬುಡವನ್ನು ಕೆದಕುತ್ತಲಿದ್ದ, ಬಿಸಿಲಿನ ತಾಪದಿಂದ ಅವನ ಮೈಯಿಂದ ಬೆವರು  ಸುರಿದು ಹೋಗುತ್ತಿತ್ತು. ಆದರೂ ಕೂಡ ಕೆಲಸ ಮಾಡುತ್ತಿದ್ದ. ಇದನ್ನು ಗಮನಿಸಿದ ರಾಜ ,  ತಾವು ಇಲ್ಲಿ ಏನು ಮಾಡುತ್ತಿದ್ದೀರಿ? ಎಂದು ಕೇಳಿದ.  ಈಗ ಬೇಸಿಗೆಯಾದ್ದರಿಂದ , ಗಿಡದ ಬುಡವನ್ನು  ಬಿಡಿಸುತ್ತಿರುವೆ, ಮುಂದೆ ಮಳೆಬಂದಾಗ  ಗಿಡಗಳ ಬುಡಕ್ಕೆ  ನೀರು ಹಾಗೇ  ನಿಲ್ಲಲು  ಸುಲಭವಾಗುತ್ತದೆ ಎಂದು ಹೇಳಿದ.     ಆಗ ರಾಜ,  ಈ ಕಾಡಿನ ಗಿಡ ನಿನಗೆ ಹೀಗೆ ಮಾಡು ಎಂದು ಕೇಳಿತೇ? ಎಂದು ಹಾಸ್ಯ  ಮಾಡಿದ . ಆಗ ಸನ್ಯಾಸಿ ನಗುತ್ತಾ, ಕೇಳಲಿಕ್ಕೆ ಅವಕ್ಕೆ ಬಾಯಿ ಎಲ್ಲಿದೆ? ಎಂದ . ರಾಜನಿಗೆ ಸನ್ಯಾಸಿಯ ಮಾತು ತಮಾಷೆಯೆನಿಸಿ, ತಾವು ಧ್ಯಾನ, ತಪಸ್ಸು  ಮಾಡಿಕೊಂಡಿರುವುದನ್ನು ಬಿಟ್ಟು, ಇಂತಹ ಬೇಡದ ಕೆಲಸವನ್ನು ಈ ಬಿಸಿಲಿನಲ್ಲಿ  ಯಾಕೆ ಮಾಡುತ್ತಿರುವಿರೋ? ಎಂದ.      ತಕ್ಷಣ ಅವನನ್ನು ದೃಷ್ಟಿಸಿ ನೋಡುತ್ತಾ ಸನ್ಯಾಸಿ, ನಿಜವಾಗಿಯೂ, ನೀನು ರಾಜನೇನಾ? ಎಂದ.  ಇವನ ಮಾತಿನಿಂದ ರಾಜ ಬಹಳವಾಗಿ ಕೋಪಗೊಂಡು, ನನ್ನನ್ನೇ ಅವಮಾನಿಸುವೆಯಲ್ಲಾ  ನಿನಗೆಷ್ಟು  ಧೈರ್ಯ? ಸೈನಿಕರೇ ಇವನನ್ನು ಬಂಧಿಸಿ, ಎಂದು ಆಜ್ಞಾಪಿಸಿದ.       ಆದರೂ ಕೂಡಾ ಸನ್ಯಾಸಿ, ಧೃತಿಗೆಡದೆ,  ನಿನ್ನ  ಈ ನೆಡವಳಿಕೆಯಿಂದ, ಮತ

ದಿನಕ್ಕೊಂದು ಕಥೆ 1112

*🌻ದಿನಕ್ಕೊಂದು ಕಥೆ🌻*        *ಆತ್ಮದ ಅರಿವು* ಒಬ್ಬ ರಾಜನಿಗೆ, ಬಾಲ್ಯದಲ್ಲಿ ಒಬ್ಬ ಮಿತ್ರನಿದ್ದ. ಅವರಿಬ್ಬರೂ ಒಟ್ಟಿಗೆ ಗುರುಕುಲದಲ್ಲಿ ಓದುತ್ತಿದ್ದರು. ಕಾಲಾಂತರದಲ್ಲಿ  ಎಲ್ಲವನ್ನು ಬಿಟ್ಟು ಆ ಮಿತ್ರ ಸನ್ಯಾಸಿಯಾದ.  ಯುವ ರಾಜನಾಗಿದ್ದವನು, ಸಿಂಹಾಸನವನ್ನು ಏರಿದ.     ರಾಜ ,ದೂರ ದೂರದ ರಾಜ್ಯಗಳನೆಲ್ಲ ಗೆದ್ದು ,ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ. ಹೊಸ ರಾಜಧಾನಿಯನ್ನು ನಿರ್ಮಿಸಿದ. ಎಲ್ಲಾ ಕಡೆಗಳಲ್ಲಿ ಈ ರಾಜನ ಕೀರ್ತಿ ವೈಭವ ಹರಡಿತು.     ಒಂದು ದಿನ ಈ ರಾಜನ ಹಳೆಯ ಮಿತ್ರ, ಸನ್ಯಾಸಿ ,ಇವನ ರಾಜಧಾನಿಯನ್ನು ಸಮೀಪಿಸಿದ. ರಾಜನಿಗೆ ಎಲ್ಲವನ್ನು ತೊರೆದು ಸಂನ್ಯಾಸಿಯಾದ, ತನ್ನ  ಆಪ್ತ ಮಿತ್ರ ಬಂದಿದ್ದಾನೆಂದು‌ತಿಳಿದು, ಅವನನ್ನು ನೋಡಬೇಕೆಂದೆನಿಸಿತು. ಆತ ಸಿಗುವುದೇ ಬಹಳ ಅಪರೂಪ, ನಾನು ಆತನನ್ನು ಸ್ವಾಗತಿಸಿ ಸನ್ಮಾನಿಸಬೇಕೆಂದುಕೊಂಡು ,ತನ್ನ ಇಡೀ  ನಗರವನ್ನು  ಅಲಂಕರಿಸಿ ಸಜ್ಜುಗೊಳಿಸಿದ.      ಯಾವ ಸಂಜೆ ಆತನ ಮಿತ್ರ ನಗರವನ್ನು ಪ್ರವೇಶಿಸಬೇಕಾಗಿತ್ತೊ, ಅಂದು ಇಡೀ ನಗರವೂ ದೀಪಾವಳಿಯನ್ನು ಆಚರಿಸುತ್ತಿತ್ತು.ಎಲ್ಲಾ ಮನೆ ಮನೆಗಳಲ್ಲಿ ‌ದೀಪಬೆಳಗಿಸಿದ್ದರು.ಸನ್ಯಾಸಿ ನಗರವನ್ನು ಪ್ರವೇಶಿಸುವ ದ್ವಾರದಲ್ಲಿ ರತ್ನಗಂಬಳಿಯನ್ನು ಹಾಸಲಾಗಿತ್ತು. ಸ್ವತಃ ಮಹಾರಾಜನೇ ದ್ವಾರದ ಬಳಿಗೆ ಬಂದು ನಿಂತು ಆತನನ್ನು ಎದುರುಗೊಳ್ಳಲು ಸಿದ್ದನಾಗಿದ್ದ.       ಈ ಎಲ್ಲಾ ಸ್ವಾಗತದ ಸಿದ್ಧತೆ ನಡೆಯುತ್ತಿರುವಾಗಲೇ, ಒಬ್ಬ ಮನುಷ್ಯ, ಸನ್ಯಾಸಿಯ ಬಳಿಗೆ ಬಂದು, ರ

ದಿನಕ್ಕೊಂದು ಕಥೆ 1111

*🌻ದಿನಕ್ಕೊಂದು ಕಥೆ🌻*     *ಕಲ್ಲುಕುಟಿಕ ನ ಕನಸು* ಒಬ್ಬ ಕಲ್ಲು ಕುಟಿಕ ಕಲ್ಲುಬಂಡೆಗಳನ್ನು ಒಡೆಯುವ ಕೆಲಸ ಮಾಡಿ ಜೀವನ ನಡೆಸುತ್ತಿದ್ದ. ಈ ಜೀವನ ಎಷ್ಟು ಕಷ್ಟ. ನಾನು ರಾಜನಾಗಿದ್ದರೆ ಹೇಗೆ ಇರಬಹುದು ಎಂದು ಕಲ್ಪಿಸಿಕೊಂಡ ಅಷ್ಟೇ, ಹಾಗಂದಿದ್ದೆ ತಡ ರಾಜನಾಗಿಬಿಟ್ಟ. ಜರತಾರಿ ಪೋಷಾಕು, ಜರಿಯ ಪೇಟಾ, ಆಭರಣಗಳನ್ನು  ಧರಿಸಿ ಅಂಗರಕ್ಷಕರ ಜೊತೆಯಲ್ಲಿ ಆನೆಯ ಅಂಬಾರಿ ಮೇಲೆ ಕುಳಿತು ಸವಾರಿ ಹೋಗುತ್ತಿದ್ದ. ಆಹಾ ಎಂಥಾ ಸುಖ ಜೀವನ ಎಂದುಕೊಂಡ. ಹೀಗೆ ಹೋಗುವಾಗ ಮಧ್ಯಾಹ್ನದ ಸೂರ್ಯ ನೆತ್ತಿಯ ಮೇಲೆ ಬಂದ. ರಾಜನಿಗೆ ವಿಪರೀತ ಸೆಕೆ, ಮೈಯೆಲ್ಲ ಬೆವರಿತು. ಆನೆ ಮೇಲೆ ಕುಳಿತಿದ್ದ ರಾಜನಿಗೆ ಅನಿಸಿತು ರಾಜನೇ ದೊಡ್ಡವನು ಎಂದುಕೊಂಡಿದ್ದ ಅವನಿಗೆ ರಾಜನಿಗಿಂತ ಸೂರ್ಯ ಶ್ರೇಷ್ಠ ಎನಿಸಿತು.  ಅವನ ಬಯಕೆಯಂತೆ ಸೂರ್ಯನಾಗಿ ಇಡೀ ಜಗತ್ತಿಗೆ ಬೆಳಕು ಕೊಡಲು ಶುರು ಮಾಡಿದ. ಅವನ ಸಂಭ್ರಮ ಹೇಳತೀರದು ವಾವ್ ಜೀವನ ಅಂದರೆ ಇದು ಎಂದುಕೊಂಡ. ಆ ಹೊತ್ತಿಗೆ ಎಲ್ಲಿಂದಲೋ ಒಂದು ಮೋಡ ಬಂದು ಸೂರ್ಯನನ್ನು ಮುಚ್ಚಿ ಬಿಟ್ಟಿತು. ಅವನಿಗನ್ನಿಸಿತು ಓಹೋ ಸೂರ್ಯನಿಗಿಂತ ಮೋಡದ ಶಕ್ತಿ ಹೆಚ್ಚು. ನಾನು ಮೋಡ ಆಗಬೇಕು ಎಂದುಕೊಂಡ. ಅವನ ಅಪೇಕ್ಷೆಯಂತೆ ಮೋಡವಾದ. ಮೋಡ ಮುಂದೆ ಮುಂದೆ ಸಾಗುತ್ತಿತ್ತು. ಆದರೆ ಎಲ್ಲಿಂದಲೋ ಬೀಸಿ ಬಂದ  ಗಾಳಿ  ಮೋಡ ವನ್ನು ಹಾರಿಸಿಕೊಂಡು ಹೋಯಿತು. ಈಗ ಅವನಿಗೆ ಮತ್ತೆ ಸಿಟ್ಟು ಬಂತು. ಎಲ್ಲಕ್ಕಿಂತ ಗಾಳಿಯೇ ಹೆಚ್ಚು, ನಾನು ಗಾಳಿಯಾಗಬೇಕು ಎಂದುಕೊಂಡ, ಗಾಳಿಯಾಗಿ ಜೋರಾಗಿ

ದಿನಕ್ಕೊಂದು ಕಥೆ 1110

ದಿನಕ್ಕೊಂದು ಕಥೆ 1109

*🌻ದಿನಕ್ಕೊಂದು ಕಥೆ🌻* ಪಾಂಡುರಂಗನ ಪರಮ ಭಕ್ತನಾದ ಸಂತ ತುಕಾರಾಮರು ನಿರಂತರವಾಗಿ ಪಾಂಡುರಂಗನ ನಾಮಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದರು. ಒಂದು ಸಲ ಅವರ ತಂದೆಯ ಶ್ರಾಧ್ಧ ಇತ್ತು. ಶ್ರಾದ್ಧದಲ್ಲಿ ಅರ್ಥ ಮೃತ್ಯು ಹೊಂದಿದ ವ್ಯಕ್ತಿಗಳ ಪುಣ್ಯತಿಥಿ. ಶ್ರಾದ್ಧದಲ್ಲಿ ಇಬ್ಬರು ಬ್ರಾಹ್ಮಣರಿಗೆ ಕರೆದು ಅವರಿಗೆ ಫಲ ಮತ್ತು ದಕ್ಷಿಣೆ ಕೊಟ್ಟ ಮೇಲೆಯೇ ಮನೆಯ ಸದಸ್ಯರೆಲ್ಲರೂ ಭೋಜನ ಮಾಡಬೇಕಿತ್ತು. ಅವರ ಪತ್ನಿ ಜೀಜಾಯಿ ಅಗತ್ಯವಿರುವ ಸಾಮಾನು ಬೇಗನೆ ತರಲು ಹೇಳಿದಳು. ತುಕಾರಾಮರು ಮನೆಯಿಂದ ಹೊರಟರು. ಮಾರ್ಗದಲ್ಲಿ ಅವರು ಪಾಂಡುರಂಗನ ನಾಮಸ್ಮರಣೆ ಮಾಡುತ್ತಿದ್ದರು. ಅವರು ಊರನ್ನು ದಾಟಿದ ಮೇಲೆ ಒಂದು ಹೊಲದಲ್ಲಿ (ಗದ್ದೆ) ಫಸಲು ತೆಗೆಯುತ್ತಿದ್ದನ್ನು ನೋಡಿದರು. ತುಕರಾಮನನ್ನು ನೋಡಿ ರೈತನು ’ಎನು ಕೆಲಸ ಮಾಡುವೆ? ಕೆಲಸ ಮಾಡಿದರೆ ದುಡ್ಡು ಮತ್ತು ಅದರ ಜೊತೆಗೆ ದಿನಸಿ ಕೂಡಾ ಕೊಡುವೆ" ಎಂದನು.#ಆಧ್ಯಾತ್ಮಿಕ_ಕಥೆಗಳು ತುಕಾರಾಮರು ಹೊಲದಲ್ಲಿ ಹೋಗಿ ಫಸಲು ಕಡೆಯುತ್ತ ಮನೆಯ ಕೆಲಸವನ್ನು ಮರೆತುಬಿಟ್ಟರು. ಮಧ್ಯಾಹ್ನ ಸಮೀಪಿಸುತ್ತಿತ್ತು. ಜೀಜಾಯಿಗೆ ಎನು ಮಾಡಬೇಕು ಎಂದು ತಿಳಿಯದಾಯಿತು. ಸ್ವಲ್ಪ ಸಮಯದ ನಂತರ ತುಕರಾಮರು ಮನಗೆ ಹಿಂತಿರುಗಿದರು. ಜೀಜಾಯಿ ಹೇಳಿದ ಸಾಮಾನುಗಳನೆಲ್ಲ ತಂದಿದ್ದರು. ಜೀಜಾಯಿ ಬೇಗನೆ ತಯಾರಿ ಮಾಡುತ್ತಿದ್ದರು. ತುಕರಾಮರು ನದಿಗೆ ಹೋಗಿ ಸ್ನಾನ ಮಾಡಿ ಬಂದರು. ಅಷ್ಟರಲ್ಲೆ ಬ್ರಹ್ಮಣರು ಮನೆಗೆ ಬಂದರು. ತುಕರಾಮರು ಅವರಿಗೆ ಹಣ್ಣು ಮತ್ತು ಹಾ

ದಿನಕ್ಕೊಂದು ಕಥೆ 1108

*🌻ದಿನಕ್ಕೊಂದು ಕಥೆ🌻* *ಬೇವಿನ ಮರ ನುಡಿದ ಸಾಕ್ಷಿ* ಕಳೆದ ಶತಮಾನದ ಇಪ್ಪತ್ತರ ದಶಕದಲ್ಲಿ ಧಾರವಾಡ ಜಿಲ್ಲೆಯ ಹಾವೇರಿಯಲ್ಲಿ ಸಿದ್ದಪ್ಪ ಹೊಸಮನಿ ಎಂಬ ಒಬ್ಬ ವಕೀಲರಿದ್ದರು.  ಅನ್ಯಾಯದ ವಿರುದ್ದ ಸಿಡಿದೇಳುತ್ತಿದ್ದ ಅವರು ಬಡವರ ಬಗೆಗೆ, ಶೋಷಣೆಗೆ ಒಳಗಾದವರ ಬಗೆಗೆ, ಅನುಕಂಪ ಮೃದು ಭಾವನೆಗಳನ್ನು ಹೊಂದಿದ್ದರು.  ತುಳಿತಕ್ಕೆ ಒಳಗಾದವರ ನೆರವಿಗೆ ಅವರು ಧಾವಿಸುತ್ತಿದ್ದರು. ಒಂದು ಸಲ ಹೀಗಾಯಿತು.  ಒಬ್ಬ ಬಡ ರೈತನು ಮಾರವಾಡಿಯೊಬ್ಬನ ಬಳಿ ಸಾಲ ತಂದಿದ್ದನು.  ತಾನು ಪಡೆದ ಸಾಲವನ್ನು ಅವನು ಆ ಮಾರವಾಡಿಗೆ ಕೊಟ್ಟು ಮುಟ್ಟಿಸಿದ್ದನು.  ಆದರೆ ಆ ಮಾರವಾಡಿ ಸಾಲ ಮರುಪಾವತಿ ಆದ ಬಗೆಗೆ, ರೈತನಿಗೆ ದಾಖಲೆ ಏನನ್ನೂ ನೀಡಿರಲಿಲ್ಲ.  ತನ್ನ ಲೆಕ್ಕದ ಪುಸ್ತಕದಲ್ಲಿ ಸಾಲದ ಬಾಕಿ ಹಾಗೆಯೇ ಇದೆಯೆಂದು ತೋರಿಸಿ ಸಾಲ ವಸೂಲಿಯ ಬಗೆಗೆ, ಆ ರೈತನ ವಿರುದ್ಧ ದಾವಾ ಹೂಡಿದ್ದನು.   ಆ ಬಡ ರೈತ, ವಕೀಲರ ಸಂಘಕ್ಕೆ ಬಂದು ತನ್ನ ಪರವಾಗಿ ವಕಾಲತ್ತು ವಹಿಸಬೇಕೆಂದು ಅನೇಕರನ್ನು ಅಂಗಲಾಚಿ ಬೇಡಿಕೊಂಡ.  “ನೀನು ಸಾಲವನ್ನು ಹಿಂತಿರುಗಿಸಿದ ಬಗೆಗೆ ನಿನ್ನ ಬಳಿ ಸಾಕ್ಷಿ ಪುರಾವೆಗಳು ಏನಾದರೂ ಇವೆಯೇ?” ಎಂದು ಅವರೆಲ್ಲರೂ ಅವನನ್ನು ಕೇಳಿದ್ದರು.  “ನಾನು ದೇವರ ಪ್ರಮಾಣ ಮಾಡಿ ಹೇಳುತ್ತೇನೆ.  ನಮ್ಮ ಹೊಲದ ಸಮೀಪದಲ್ಲಿ ಇರುವ ಬೇವಿನ ಮರದ ಕೆಳಗೆ, ಎಲ್ಲ ಸಾಲ ಚುಕ್ತಾ ಮಾಡಿದ್ದೇನೆ” ಎಂದು ಹೇಳಿದಾಗ, ಅವರೆಲ್ಲರೂ ನಕ್ಕು, “ಹುಚ್ಚಪ್ಪ, ಕೋರ್ಟು, ನಿನ್ನ ದೇವರನ್ನೂ ಕೇಳುವುದಿಲ್ಲ, ನಿನ್ನ ಬೇವಿ

ದಿನಕ್ಕೊಂದು ಕಥೆ 1107

*🌻ದಿನಕ್ಕೊಂದು ಕಥೆ🌻* *ಹೂವು ಕಲಿಸಿದ ಪಾಠ* ಒಬ್ಬ ಹುಡುಗನಿಗೆ ಸ್ವಲ್ಪ ದುಡುಕು  ಸ್ವಭಾವ. ತನಗೆ ಯಾರಾದರೂ ತೊಂದರೆ ಕೊಟ್ಟರೆ ಅವರ ಮೇಲೆ ಸೇಡು ತೀರಿಸಿಕೊಳ್ಳದೇ ಬಿಡುವುದೇ ಇಲ್ಲ ಎಂಬ ಮನೋಭಾವದವನು. ಅವನಪ್ಪನಿಗೆ ಮಗನ  ಈ ಸ್ವಭಾವ ‌ ಇಷ್ಟವಾಗುತ್ತಿರಲಿಲ್ಲ. ಮಗನಿಗೆ ತೊಂದರೆ ಆಗಿದ್ದು ನಿಜವೇ.ಅವನ ಮನಸ್ಸಿಗೆ ನೋವಾಗಿದ್ದು ನಿಜವೇ. ಹಾಗೆಂದ ಮಾತ್ರಕ್ಕೆ , ಹೋಗು  ನೀನೂ ಅವರಿಗೆ ತೊಂದರೆ ಕೊಡು ಎಂದು ಹೇಳುವುದು, ಅಪ್ಪನ ಜವಾಬ್ದಾರಿಯಲ್ಲ. ಆದರೆ ಹೀಗೆ ಮಾಡಬೇಡ ಎಂದು ಮಗನಿಗೆ ಹೇಳಿದರೆ, ಅವನಿಗೆ ಇನ್ನಷ್ಟು ಕೋಪ ಜಾಸ್ತಿಯಾಗುತ್ತದೆ. ತನ್ನ ಅಪ್ಪ ಕೂಡ ತನ್ನನ್ನು ನಂಬುವುದಿಲ್ಲವೆಂದು ಅವನಿಗೆ ಬೇಸರವಾಗುತ್ತದೆ. ಆದರೆ ಪ್ರಪಂಚದಲ್ಲಿ, ನಾವು ಹೇಗೆ ಬದುಕಬೇಕು ಎಂಬುದನ್ನು ಮಗನಿಗೆ ತಿಳಿಸುವುದು ತಂದೆಯಾದವನ  ಕರ್ತವ್ಯ, ಎಂದುಕೊಂಡಿದ್ದ ಆತ.       ಪ್ರತಿದಿನ ಮಗನಿಗೆ,  ತನಗೆ ತೊಂದರೆ ಕೊಟ್ಟವರ ಮೇಲೆ ,ಹೇಗೆ ಸೇಡುತೀರಿಸಿಕೊಳ್ಳಬೇಕೆಂಬ ಯೋಚನೆ. ಅಪ್ಪನಿಗೆ ಮಗನನ್ನು ಇದರಿಂದ ಹೇಗೆ ಹೊರ ತರುವುದು, ಎಂಬ ಯೋಚನೆ.ಅವನ ದುಡುಕು ಸ್ವಭಾವದಿಂದ ಯಾರಿಗೂ ತೊಂದರೆಯಾಗದಂತೆ ಅವನನ್ನು ತಡೆಯುವುದು ಹೇಗೆ ಎಂಬ ಚಿಂತೆ ಅಪ್ಪನದು. ಇದು  ಅಪ್ಪನ ಕರ್ತವ್ಯ ಕೂಡ ಎಂದುಕೊಂಡಿದ್ದ ಆತ . ಹೀಗೆ ಅಪ್ಪ ಮಗ ಇಬ್ಬರೂ ತಮ್ಮ ತಮ್ಮ ಯೋಚನೆಯಲ್ಲಿ ಇದ್ದರು.        ಒಂದು ದಿನ ದೇವರ ಪೂಜೆಗಾಗಿ ಬುಟ್ಟಿಯಲ್ಲಿ ಇಟ್ಟ ವಿವಿಧ ಬಣ್ಣ ಬಣ್ಣದ ಸುವಾಸನೆಯುಕ್ತ ಹೂಗಳು, ಮನೆಯ ತುಂಬೆಲ್

ದಿನಕ್ಕೊಂದು ಕಥೆ 1106

*🌻ದಿನಕ್ಕೊಂದು ಕಥೆ🌻* *ಸಮಸ್ತ ಸೃಷ್ಟಿಯ ಪಾಲಕ ಭಗವಂತ* ಮಹಾರಾಷ್ಟ್ರದ ಸಮರ್ಥ ರಾಮದಾಸ ಸ್ವಾಮಿಗಳು ಒಬ್ಬ ಮಹಾನ ಸಂತರಾಗಿದ್ದರು. ಅವರು ಹದಿನೇಳನೇ ಶತಮಾನದಲ್ಲಿ ಮಹಾರಾಷ್ಟ್ರದ ಮಹಾನ ದೈವಭಕ್ತ ರಾಜನಾಗಿದ್ದ ಶಿವಾಜಿ ಮಹಾರಾಜರ ಗುರುಗಳಾಗಿದ್ದರು. ಒಂದು ದಿನ ಶಿವಾಜಿ ಮಹಾರಾಜರು ಮತ್ತು ಅವರ ಗುರುಗಳು ಅರಮನೆಯ ಒಳಗೆ ಕಟ್ಟಡ ಕಾಮಗಾರಿಯನ್ನು ವೀಕ್ಷಿಸುತ್ತಿದ್ದರು, ಆಗ ರಾಜನು ’ನಿಜವಾಗಿಯೂ ನಾನೊಬ್ಬ ಮಹಾನ ರಾಜನಾಗಿದ್ದೇನೆ, ನಾನು ನನ್ನ ಎಲ್ಲ ವಿಷಯಗಳಲ್ಲಿಯೂ ಎಷ್ಟೊಂದು ಕಾಳಜಿ ತೆಗೆದುಕೊಳ್ಳುತ್ತೇನೆ!’ ಎಂದು ವಿಚಾರ ಮಾಡುತ್ತಿದ್ದನು. ಗುರುಗಳು ತಮ್ಮ ದಿವ್ಯ ಜ್ಞಾನದಿಂದ ಶಿಷ್ಯನ ಮನಸ್ಸಿನಲ್ಲಿ ಬಂದ ವಿಚಾರವನ್ನು ತಿಳಿದುಕೊಂಡರು ಮತ್ತು ಕೂಡಲೇ ಅವನ ವಿಚಾರವನ್ನು ಸರಿಪಡಿಸಬೇಕೆಂದು ತೀರ್ಮಾನಿಸಿದರು. ಸಮೀಪದಲ್ಲಿಯೇ ದೊಡ್ಡದಾದ ಬಂಡೆಯೊಂದು ಇತ್ತು. ರಾಮದಾಸ ಸ್ವಾಮಿಗಳು ಶಿವಾಜಿ ಮಹಾರಾಜರ ಕೆಲವು ಸೈನಿಕರನ್ನು ಕರೆದು ಆ ಬಂಡೆಯನ್ನು ಎರಡು ತುಂಡಾಗುವಂತೆ ಒಡೆಯಲು ಹೇಳಿದರು. ಅವರ ಮಾತಿನಂತೆ ಸೈನಿಕರು ಬಂಡೆ ಕಲ್ಲನ್ನು ಒಡೆದಾಗ, ಅಲ್ಲಿ ಉಪಸ್ಥಿತರಿದ್ದ ಎಲ್ಲರೂ, ನಂಬಲು ಅಸಾಧ್ಯವಾದ ದೃಷ್ಯವೊಂದನ್ನು ನೋಡಿದರು. ಆ ಕಲ್ಲುಬಂಡೆಯಲ್ಲಿ ಒಂದು ನೀರು ತುಂಬಿಕೊಂಡಿದ್ದ ಪೊಳ್ಳುಭಾಗವೊಂದಿತ್ತು, ಅದರಲ್ಲಿ ಒಂದು ಸಣ್ಣ ಕಪ್ಪೆಯಿತ್ತು. ಬಂಡೆಯು ಸೀಳಿ ಎರಡು ತುಂಡಾದ ಕೂಡಲೇ ಅದರಲ್ಲಿ ಬಂಧಿಸಲ್ಪಟ್ಟಿದ್ದ ಕಪ್ಪೆಯು ಸ್ವತಂತ್ರಗೊಂಡು ಹೊರಗೆ ಜಿಗಿಯಿತು. ಈಗ ಸಮರ

ದಿನಕ್ಕೊಂದು ಕಥೆ 1105

*🌻ದಿನಕ್ಕೊಂದು ಕಥೆ🌻* ಸಂತ ಶ್ರೀ ಗೋರಾ ಕುಂಭಾರ ತೆರೆಡೊಕಿ ಊರಿನಲ್ಲಿ ಗೋರಾ ಕುಂಬಾರನೆಂಬ ವಿಠಲನ ಭಕ್ತನಿದ್ದನು. ಕುಂಬಾರನು ಕೆಲಸಮಾಡುತ್ತಿರುವಾಗಲೂ ನಿರಂತರವಾಗಿ ಪಾಂಡುರಂಗನ ಭಜನೆ ಮಾಡುತ್ತಿದ್ದನು. ಯಾವಾಗಲು ಅವನು ಪಾಂಡುರಂಗನ ನಾಮಜಪದಲ್ಲಿ ಮಗ್ನನಾಗಿರುತ್ತಿದ್ದನು. ಒಂದು ಸಲ ಅವನ ಪತ್ನಿ ಅವರ ಒಂದೇ ಮಗನನ್ನು ಅಂಗಳದಲ್ಲಿ ಬಿಟ್ಟು ನೀರು ತರಲು ಹೋದಳು. ಆ ಸಮಯದಲ್ಲಿ ಗೋರಾಕುಂಬಾರನು ಗಡುಗೆಯನ್ನು ಮಾಡಲು ಅವಶ್ಯವಾಗಿರುವ ಮಣ್ಣನ್ನು ಕಾಲಿನಿಂದ ತುಳಿಯುತ್ತಾ ಪಾಂಡುರಂಗನ ಭಜನೆ ಮಾಡುತ್ತಿದ್ದನು. ಅದರಲ್ಲಿ ಅವನು ಬಹಳ ತಲ್ಲೀನನಾಗಿದ್ದನು. ಪಕ್ಕದಲ್ಲೇ ಆಡುತ್ತಿರುವ ಚಿಕ್ಕ ಮಗು ಅಳುತ್ತ ಬಂದು ಆ ಮಣ್ಣಿನಲ್ಲಿ ಬಿದ್ದು ಬಿಟ್ಟಿತು. ಗೋರಾ ಕುಂಬಾರನು ಮಣ್ಣನ್ನು ಮೇಲೆ ಕೆಳಗೆ ಮಾಡಿ ತುಳಿಯುತ್ತಿದ್ದನು. ಮಣ್ಣಿನ ಜೊತೆಗೆ ತನ್ನ ಮಗುವನ್ನೂ ತುಳಿದು ಬಿಟ್ಟನು. ಪಾಂಡುರಂಗನ ಭಜನೆಯಲ್ಲಿ ಮಗ್ನನಾಗಿರುವದರಿಂದ ಮಗುವಿನ ಅಳುವು ಅವನಿಗೆ ಕೇಳಿಸಲೇ ಇಲ್ಲ. ನೀರು ತಂದ ಮೇಲೆ ಅವನ ಪತ್ನಿ ಮಗುವನ್ನು ಹುಡುಕುತ್ತಿದ್ದಳು. ಬಾಲಕ ಸಿಗದ ಕಾರಣ ಅವಳು ಗೋರಕುಂಬಾರನ ಬಳಿ ಹೋದಳು. ಅಷ್ಟರಲ್ಲಿ ಅವಳ ದೃಷ್ಟಿ ಮಣ್ಣಿನ ಕಿಚಡಿಯಲ್ಲಿ ಹೋಯಿತು, ಕಿಚಡಿಯಲ್ಲಿ ಇರುವ ಕೆಂಪು ರಕ್ತವನ್ನು ನೋಡಿ, ಮಗು ಕೂಡ ಆ ಮಣ್ಣಿನಲ್ಲಿ ತುಳಿಯಲ್ಪಟ್ಟಿದೆ ಅಂತ ತಿಳಿಯಿತು. ಅವಳು ಜೋರಾಗಿ ಚೀರಿದಳು ಮತ್ತು ಗಂಡನ ಮೇಲೆ ಸಿಟ್ಟು ಮಾಡಿದಳು. ಅರಿವಿಲ್ಲದೆ ಮಾಡಿರುವ ಈ ಕೃತ್ಯಕ್ಕಾಗಿ ಗೋರಾ ಕುಂ

ದಿನಕ್ಕೊಂದು ಕಥೆ 1104

*🌻ದಿನಕ್ಕೊಂದು ಕಥೆ🌻*            *ಅಪ್ಪ* *ಲೇಖಕರು: ವತ್ಸಲಾ ಶ್ರೀಶ*   ಅಪ್ಪ ಗೋಡೆ ಹಿಡಿದುಕೊಂಡು ಹೋಗುತ್ತಿದ್ದರು. ಅಪ್ಪ ಕೈಯಿಟ್ಟಲ್ಲೆಲ್ಲ ಗೋಡೆಯ ಬಣ್ಣ ಸ್ವಲ್ಪ ಸ್ವಲ್ಪವೇ ಮಸುಕಾಗುತ್ತಿತ್ತು.ಇದನ್ನು ಕಂಡು ಹೆಂಡತಿಯ ಮುಖಭಾವ ಬದಲಾಗುತ್ತಿದ್ದುದನ್ನು ನಾನು ಗಮನಿಸಿದೆ. ಅದೊಂದು ದಿನ ಅಪ್ಪ ಎಂದಿನಂತೆಯೇ ಗೋಡೆಯ ಮೇಲೆ ಕೈ ಇಟ್ಟಿದ್ದರು. ಮಂಡಿ ನೋವಿಗೆ ಎಣ್ಣೆ ಹಚ್ಚಿದ್ದರೋ ಏನೋ ಕೈ ಗುರುತು ಗೋಡೆ ಮೇಲೆ ಗಾಢವಾಗಿ ಅಂಟಿಕೊಂಡಿತು. ಹೆಂಡತಿ ಒಳಗೆ ಬಂದು ನನ್ನೊಡನೆ ರೇಗಿಯೇ ಬಿಟ್ಟಳು. ನನಗೂ ಅಂದು ಏನಾಯಿತೋ ಏನೋ. ಅಪ್ಪನ ರೂಮಿಗೆ ಹೋದೆ..ಅಪ್ಪಾ  ನಡೆಯುವಾಗ ಗೋಡೆ ಹಿಡಿಯದೆ ನಡೆಯಲು ಪ್ರಯತ್ನಿಸಬಾರದೇ ಎಂದೆ..ಧ್ವನಿಯಲ್ಲಿದ್ದ ಅಸಹನೆ ಅತಿಯಾಯಿತೇನೋ ಅನಿಸಿತು.ಅಪ್ಪ ನನ್ನೆಡೆಗೆ ನೋಡಿದರು.  80 ವರ್ಷದ ಅಪ್ಪನ ಮುಖ ಚಿಕ್ಕ ಮಗು ತಪ್ಪು ಮಾಡಿದಂತಿತ್ತು.ಅಪ್ಪ ಮೌನವಾಗಿ ತಲೆತಗ್ಗಿಸಿದರು.…ಛೇ ನಾನು ಹಾಗನ್ನಬಾರದಿತ್ತು ಎಂದೆನಿಸಿತು…ಸ್ವಾಭಿಮಾನಿಯಾಗಿದ್ದ ಅಪ್ಪ  ಮುಂದೆ ಮೌನಿಯಾದರು. ಆ ಮೇಲೆ ಗೋಡೆ ಹಿಡಿದು ನಡೆಯಲಿಲ್ಲ..ಅದೊಂದು  ದಿನ ಅಪ್ಪ ಆಯತಪ್ಪಿ ಬಿದ್ದು ಹಾಸಿಗೆ ಹಿಡಿದರು. ಮತ್ತೆರಡು ದಿನದಲ್ಲಿ ಇಹಲೋಕವನ್ನು ತ್ಯಜಿಸಿದರು. ಗೋಡೆಯಲ್ಲಿ ಮೂಡಿದ್ದ ಅಪ್ಪನ ಕೈ ಗುರುತು ಕಾಣುವಾಗ ಎದೆಯೊಳಗೆ ಏನೋ ಸಿಕ್ಕಿದಂತಾಗುತ್ತಿತ್ತು.      ದಿನಗಳು ಉರುಳುತ್ತಿತ್ತು. ಅದೊಂದು ದಿನ ಹೆಂಡತಿ ಎಲ್ಲಾ ಗೋಡೆಗಳಿಗೆ ಬಣ್ಣ ಹೊಡೆಯಬೇಕೆಂದಳು..ಬಣ್ಣ ಹೊಡೆಯುವ

ದಿನಕ್ಕೊಂದು ಕಥೆ 1103

*🌻ದಿನಕ್ಕೊಂದು ಕಥೆ🌻*  *ಒಬ್ಬರಿಗೊಬ್ಬರ ಅವಹೇಳನ  ಚಪ್ಪಡಿ ಎಳೆದುಕೊಂಡಂತೆ* ಅದೊಂದು  ದೊಡ್ಡ ಗ್ರಾಮ. ಅಲ್ಲಿ ಅನೇಕಾನೇಕ  ವಿದ್ವಾಂಸರಗಳು, ಪಂಡಿತೋತ್ತಮರಿದ್ದರು. ಆಸುಪಾಸಿನ ಊರವರಿಗೆಲ್ಲ  ಪಂಡಿತೋತ್ತಮರ ಊರು  ಎಂದೇ  ಪರಿಚಿತವಾಗಿತ್ತು. ಆ ಊರಿನ ಹತ್ತಿರ ಭಾರಿ  ಶ್ರೀಮಂತ  ಸೇಟು ಒಬ್ಬನಿದ್ದನು.  ಬುದ್ಧಿವಂತ, ಹಾಗೂ ಧರ್ಮಿಷ್ಠನಾಗಿದ್ದನು. ಒಮ್ಮೆ ಅದೇ ಊರಿನ  ಇಬ್ಬರು ವಿದ್ವಾಂಸರನ್ನು ತನ್ನ ಮನೆಗೆ  ಆಹ್ವಾನಿಸಿದನು. ವಿದ್ವಾಂಸರಿಬ್ಬರು ಶ್ರೀಮಂತ ಸೇಟು ಬೇಕಾದಷ್ಟು ಕೊಡುತ್ತಾನೆಂಬ  ಆಸೆಯಿಂದ ಅವನ ಮನೆಗೆ ಬಂದರು. ವಿದ್ವಾಂಸರು ಮನೆಗೆ ಬರುತ್ತಿದ್ದಂತೆ ಸೇಟು ಆದರದಿಂದ ಸ್ವಾಗತಿಸಿ, ಪ್ರಯಾಣ ಸುಖಕರವಾಗಿತ್ತೆ  ಎಂದು ವಿಚಾರಿಸಿದನು. ಒಬ್ಬ ಪಂಡಿತ ತುಂಬಾ ಆರಾಮವಾಗಿ ಬಂದೆವು,  ವಿಚಾರಿಸಿದ ನಿಮ್ಮ  ಔದಾರ್ಯ ಬಹಳ ದೊಡ್ಡತನ ಎಂದನು.  ಸೇಟು ಇಬ್ಬರಿಗೂ ಬಾಯಾರಿಕೆಗೆ  ಆಸರೆ  ಕೊಟ್ಟು, ನಂತರ ಬಿಸಿಲಲ್ಲಿ ಬಂದಿದ್ದೀರಿ  ಸ್ನಾನ ಮಾಡಿ.  ಭೋಜನದ ವ್ಯವಸ್ಥೆ  ಮಾಡಿಸುತ್ತೇನೆ  ಎಂದನು. ಒಬ್ಬ ಪಂಡಿತ ಎದ್ದು  ಸ್ನಾನಕ್ಕೆ ಹೋದನು, ಇನ್ನೊಬ್ಬ ಪಂಡಿತ ಅವನು ಬಂದ ನಂತರ ಹೋಗಲು ಅಲ್ಲೇ ಕುಳಿತಿದ್ದನು.  ಆ ಸಮಯಕ್ಕೆ ಅಲ್ಲಿಗೆ ಬಂದ ಸೇಟು ಊರಿನ ಕಡೆಯೆಲ್ಲಾ  ಚೆನ್ನಾಗಿದೆಯಾ ಎಂದು ವಿಚಾರಿಸುತ್ತಾ ,ನಿಮ್ಮ ಜೊತೆ  ಬಂದಿರುವ ಪಂಡಿತರು  ಬಹು ದೊಡ್ಡ ವಿದ್ವಾಂಸರೆಂದು ಸುತ್ತಮುತ್ತ ಹಳ್ಳಿಯವರು ಹೇಳುವುದನ್ನು ಕೇಳಿದ್ದೇನೆ  ನನಗೆ ತುಂಬಾ ಸಂತೋಷವಾಯಿತು ಎಂದನ

ದಿನಕ್ಕೊಂದು ಕಥೆ 1102

*🌻ದಿನಕ್ಕೊಂದು ಕಥೆ🌻* *ಆತ್ಮ ಜ್ಞಾನದ ಅನುಭೂತಿ* ಇದೊಂದು ಜೈನ ಶಾಸ್ತ್ರದಲ್ಲಿನ ಪ್ರಾಚೀನ ಕಥೆ.   ಮಿಥಿಲಾದ ಮಹಾರಾಜ ನೇಮಿಯು ಯಾವತ್ತೂ  ಯಾವ ಶಾಸ್ತ್ರಗಳನ್ನು ಓದಲಿಲ್ಲ. ಎಂದೂ ಅವನಲ್ಲಿ ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಇರಲಿಲ್ಲ. ಅದೊಂದು ಕೊರತೆಯೆಂದು ಕೂಡ ಅವನಿಗೆ ಅನಿಸಿರಲೇ ಇಲ್ಲ.    ಅವನು ಸ್ವಲ್ಪ  ಮಧ್ಯವಯಸ್ಕನಾಗುತ್ತಾ ‌ಬಂದ. ಒಂದು ಸಲ ಅವನಿಗೆ ಜೋರಾಗಿ ಜ್ವರ ಬಂತು. ಭಯಂಕರ ಜ್ವರದ ಯಾತನೆಯಲ್ಲಿ ನರಳುತ್ತಾ ಮಲಗಿದ್ದನು. ಅವನ ರಾಣಿಯರು  ಜ್ವರದ ತಾಪದಿಂದ ಅವನ ಶರೀರವನ್ನು ತಂಪಾಗಿಸಲಿಕ್ಕಾಗಿ, ಗಂಧ ಮತ್ತು ಕೇಸರಿಯ ಲೇಪ ಮಾಡ ತೊಡಗಿದರು. ರಾಣಿಯರ ಕೈಯಲ್ಲಿ ಬಂಗಾರದ ಬಳೆಗಳಿದ್ದವು. ಬಳೆಗಳಲ್ಲಿ ಮುತ್ತು ರತ್ನಗಳನ್ನು ಅಂಟಿಸಲಾಗಿತ್ತು. ಇವನಿಗೆ ಗಂಧ  ಲೇಪನ ಮಾಡುವ ಸಮಯದಲ್ಲಿ ಅವರ ಬಳೆಗಳು ಬಹಳವಾಗಿ ಸದ್ದು ಮಾಡುತ್ತಿದ್ದವು. ರಾಜನಿಗೆ ಆ ಬಳೆಗಳ ಸದ್ದಿನಿಂದ ವಿಪರೀತ ಕಿರಿ ಕಿರಿ ಯಾಗುತ್ತಿತ್ತು. ತೆಗೆದುಹಾಕಿ ಈ ಬಳೆಗಳನ್ನು, ನನಗೆ ಇವುಗಳ ಶಬ್ದವನ್ನು ತಡೆದುಕೊಳ್ಳಲಾಗುತ್ತಿಲ್ಲ ಎಂದು ಕಿರುಚಿದ.      ‌ ಆ  ರಾಣಿಯರು, ಮಂಗಳಸೂತ್ರದ ಕಲ್ಪನೆಯಿಂದ ಬಳೆಯಿಲ್ಲದೆ ಬರೀ ಕೈನಲ್ಲಿ ಇರಬಾರದು ಎಂದುಕೊಂಡು, ಕೈನಲ್ಲಿ ಒಂದೊಂದು ಬಳೆಗಳನ್ನು ಇಟ್ಟುಕೊಂಡು ಉಳಿದಿದ್ದನ್ನು ತೆಗೆದು ಇಟ್ಟರು. ಬಳೆಯ ಸದ್ದೇನೊ ನಿಂತಿತು,  ಶ್ರೀಗಂಧದ ಲೇಪನ ನಡೆಯುತ್ತಿತ್ತು.   ‌ ಈ ಸಮಯದಲ್ಲಿ ನೇಮಿರಾಜನ ಒಳಗೆ ಒಂದು ಮಹಾ ಕ್ರಾಂತಿ ಘಟಿಸಿಬಿಟ್ಟಿತು. ಹತ್ತು ಬಳೆಗ

ದಿನಕ್ಕೊಂದು ಕಥೆ 1101

*🌻ದಿನಕ್ಕೊಂದು ಕಥೆ🌻*    *ಆಕಸ್ಮಿಕ* "ಅಮ್ಮಾ, ನಿಂದೆಲ್ಲಾ ಸಾಮಾನು ಪ್ಯಾಕ್ ಆಯ್ತಾ? ಲಗೂ ನಡಿ, ಮತ್ತ ಗಾಡಿ ತಪ್ಪಿದ್ರ ಸಮಸ್ಯೆ ಆಗ್ತದ" ಮಗ ರಾಜುನ ಧ್ವನಿ ಕೇಳಿ ಚೀಲದೊಂದಿಗೆ ಹೊರ ಬಂದ ಅಂಬುಜಮ್ಮ, " ನಾ ತಯಾರಾಗಿ ಭಾಳ ಹೊತ್ತಾತು. ನೀನೇ ಲಗೂ ಬರಲಿಲ್ಲ ನೋಡು". ಅಮ್ಮನ ಮಾತು ಕೇಳಿದ ಮಗ ,"ಆತು ನಡಿ ನಡಿ, ಆಟೋ ತಂದೀನಿ, ಹೋಗೂಣಂತ" ಅಂದ. ರಾಜು ತನ್ನ ಮತ್ತ ತನ್ನಮ್ಮನ ಚೀಲವನ್ನು ಹೊರಗಿಟ್ಟು ಮನೆ ಬಾಗಿಲು ಹಾಕಿ ಕೀಲಿ ಹಾಕಿ ಅಮ್ಮನ ಜೊತೆ ಆಟೋ ಹತ್ತಿದ. ಇನ್ನೂ ಐದು ನಿಮಿಷ ಇರುವಾಗಲೇ ರೈಲು ನಿಲ್ದಾಣಕ್ಕೆ ಬಂದ ಅಮ್ಮ ಮಗ ಅಲ್ಲೇ ಒಂದು ಜಾಗ ಹಿಡಿದು ಗಾಡಿಯ ಹಾದಿ ಕಾಯುತ್ತಾ ಕೂತರು. ಬೆವರು ಒರೆಸುತ್ತ ಅಂಬುಜಮ್ಮ ಮಗನ ಕಡೆ ಹೆಮ್ಮೆಯಿಂದ ನೋಡಿದರು. ತನ್ನ ಎಷ್ಟೋ ದಿನಗಳ ಕನಸು ನನಸು ಮಾಡಲು ಮಗ ತನ್ನನ್ನು ಕಾಶಿ ಯಾತ್ರೆಗೆ ಕರೆದುಕೊಂಡು ಹೊರಟಿದ್ದಾನೆ. ನಾನು ಎಷ್ಟು ಪುಣ್ಯವಂತಳು ಎಂದುಕೊಂಡು ಇಂಥಾ ಮುತ್ತಿನಂಥಾ ಮಗನನ್ನು ಕೊಟ್ಟ ದೇವರಿಗೆ ಮನದಲ್ಲೇ ಕೈ ಮುಗಿದರು. ಅಮ್ಮ ಮಗ ಇಬ್ಬರೂ ಪವಿತ್ರವಾದ ಕಾಶಿ ಕ್ಷೇತ್ರಕ್ಕೆ ಬಂದಿಳಿದರು. ಮೊದಲು ಛತ್ರಕ್ಕೆ ಹೋಗಿ ಕೈ ಕಾಲು ತೊಳೆದು ಗಂಗಾಸ್ನಾನಕ್ಕಾಗಿ ನದಿಗೆ ಬಂದರು. ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಿ ವಿಶ್ವನಾಥನ ದರ್ಶನಕ್ಕೆ ಬಂದರು. ಕಾಶಿಯಲ್ಲಿ ಇಳಿದಾಗಿನಿಂದ ತಾಯಿ ಮಗನ ಮುಖವನ್ನೇ ಪ್ರೀತಿಯಿಂದ ನೋಡುತ್ತಿದ್ದರೆ, ಮಗನ ವಿಚಾರ ಲಹರಿಯೇ ಬೇರೆಯಾಗಿತ್ತು

ದಿನಕ್ಕೊಂದು ಕಥೆ 1110

*🌻ದಿನಕ್ಕೊಂದು ಕಥೆ🌻* *" ಸಹಾಯ"*   ನಿರ್ಮಲಾ , ಚಪಾತಿ ಹಿಟ್ಟು ಕಲೆಸಿ ಸಣ್ಣ ಪುಟ್ಟ ಕೆಲಸ ಪೂರೈಸಿದವಳು ಚಪಾತಿ ಮಾಡಲು ಗ್ಯಾಸ್ ಒಲೆ ಮೇಲೆ ತವಾ ಇಡಲು ಮುಂದಾದಾಗ, ಬಾಗಿಲಿನ ಬೆಲ್ ಶಬ್ದ ಆಗುತ್ತದೆ. ಗ್ಯಾಸ್ ಆಫ್ ಮಾಡಿ ಕೈ ಒರೆಸಿಕೊಳ್ಳುತ್ತ ಹೊರಗೆ ಬಂದು ಬಾಗಿಲು ತೆರೆದು ನೋಡಿದಾಗ ಮೆಟ್ಟಿಲಿನ ಕೆಳಗೆ ಸುಮಾರು ಐವತ್ತು ವರ್ಷ ವಯಸ್ಸಿನ ನೋಡಲು ಹಳ್ಳಿಯವನಂತಿದ್ದ ವ್ಯಕ್ತಿ ತನ್ನ ಹದಿನಾರು ವರ್ಷ ದ ಮಗಳೊಂದಿಗೆ ನಿಂತಿರುತ್ತಾನೆ. ನಿರ್ಮಲಾ ಅವನನ್ನು ಭಿಕ್ಷುಕ ಎಂದು ತಿಳಿದವಳು " ಚಿಲ್ಲರೆ ಹಣ ಈಗ ಇಲ್ಲ ಮುಂದೆ ಹೋಗಪ್ಪಾ" ಎಂದಾಗ ಆತ ವ್ಯಕ್ತಿ " ಮೇಡಂ.. ನನಗೆ ಚಿಲ್ಲರೆ ಹಣ ಬೇಡಾ ಐವತ್ತು ಸಾವಿರ ರೂಪಾಯಿ ಬೇಕಾಗಿವೆ" ಎನ್ನುತ್ತಾನೆ.ಆಶ್ಚರ್ಯ ಮತ್ತು ವಿಚಿತ್ರ ದೃಷ್ಟಿಯಿಂದ ಆತನನ್ನು ನೋಡುತ್ತ -" ಎಲ್ಲಿಯವನಪ್ಪಾ ನೀನು.. ಏನು ಕೇಳ್ತಿದ್ದಿ ಅಂತ ಅದಾರೂ ಗೊತ್ತಾ? ಎಂದು ಪ್ರಶ್ನಿಸಿದಾಗ ಆತ ವಿನೀತನಾಗಿ " ಮೇಡಂ.. ನಾನು ಹುಬ್ಬಳ್ಳಿಯ ಹತ್ತಿರ ಇರುವ ಒಂದು ಹಳ್ಳಿಯಲ್ಲಿ ಇರುವವ. ನನಗೆ ನೀವು ಯಾರೆಂದು ಗೊತ್ತಿಲ್ಲ, ಏಕೆಂದರೆ ನಾನು ಇದೇ ಮೊದಲನೇ ಬಾರಿ ಮೈಸೂರಿಗೆ ಬರ್ತಾ ಇದ್ದೇನೆ " ಎನ್ನುತ್ತಾನೆ. ಮುಂದುವರೆದ ನಿರ್ಮಲಾ" ಇಷ್ಟೊಂದು ಹಣ..! ನನ್ನ ಬಳಿ ಇಲ್ಲಾ.. ಮುಂದೆ ಎಲ್ಲಾದರೂ ಹೋಗಿ ಪ್ರಯತ್ನ ಮಾಡು " ಎನ್ನುತ್ತಾಳೆ. ಅಷ್ಟಕ್ಕೇ ಸುಮ್ಮನಿರದ ಆ ವ್ಯಕ್ತಿ -" ಮೇಡಂ.